More

    21ರಿಂದ ಕುಂಟಿಕಾನ ಮಠ ದೇವಳ ಬ್ರಹ್ಮಕಲಶೋತ್ಸವ

    ಬದಿಯಡ್ಕ: ಕಾಸರಗೋಡು ಜಿಲ್ಲೆಯ ನೀರ್ಚಾಲು ಗ್ರಾಮದ ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಏಪ್ರಿಲ್ 21ರಿಂದ 30ರ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

    21ರಂದು ಶ್ರೀಮಹಾಗಣಪತಿ ಹೋಮ, 9 ಗಂಟೆಗೆ ಮಾಡತ್ತಡ್ಕ ಶ್ರೀಹರಿಹರ ಭಜನಾ ಮಂದಿರದಿಂದ ಹಸಿರುವಾಣಿ ಮೆರವಣಿಗೆ, ಉಗ್ರಾಣ ಮುಹೂರ್ತ ನಡೆಯಲಿದೆ. ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಅವರು ದೀಪ ಬೆಳಗಿಸುವರು. ಸಂಜೆ 5 ಗಂಟೆಗೆ ಕ್ಷೇತ್ರ ತಂತ್ರಿಗಳ ಆಗಮನ, 6 ಗಂಟೆಗೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರ ಆಗಮನ, ಪೂರ್ಣಕುಂಭ ಸ್ವಾಗತ, ಶ್ರೀಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಆಶೀರ್ವಚನ ನಡೆಯಲಿದೆ. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರಾಚಾರ್ಯ ಕಿಳಿಂಗಾರು ಶಿವಶಂಕರ ಭಟ್ ಪಾಂಡೇಲು, ತಂತ್ರಿ ದೇಲಂಪಾಡಿ ಗಣೇಶ ತಂತ್ರಿ ಉಪಸ್ಥಿತರಿರುವರು.

    22ರಿಂದ 25ರ ತನಕ ವಿವಿಧ ತಾಂತ್ರಿಕ ಕಾರ್ಯಕ್ರಮಗಳು, ಬೆಳಗ್ಗೆ ಹಾಗೂ ಸಂಜೆ ಭಜನೆ ನಡೆಯಲಿದೆ. 25ರಂದು ಸಂಜೆ 4.30ಕ್ಕೆ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಅವರ ಆಗಮನ, ಕುಂಟಿಕಾನ ಮಠದಲ್ಲಿ ಪೂರ್ಣಕುಂಭ ಸ್ವಾಗತ, ಧೂಳೀಪೂಜೆ ನಡೆಯಲಿದೆ. 27ರಂದು ಬೆಳಗ್ಗೆ 9.30ಕ್ಕೆ ಶ್ರೀದೇವರ ಬಲಿ ಉತ್ಸವ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, ಪ್ರಸಾದ ಭೋಜನ, ರಾತ್ರಿ ಕಾರ್ತಿಕಪೂಜೆ, ಮುಂಡಿಗೆ ವನಕ್ಕೆ ಭಂಡಾರ ಹೊರಡುವುದು, 9ಕ್ಕೆ ಕುಂಟಿಕಾನ ಮಠದಲ್ಲಿ ಅನ್ನಸಂತರ್ಪಣೆ, 28ರಂದು ಮುಂಡಿಗೆ ವನದಲ್ಲಿ ಕುಂಟಿಕಾನ ಧೂಮಾವತಿ ದೈವಕ್ಕೆ ಪುದ್ವಾರು ಮೆಚ್ಚಿ ನೇಮ, ರಾತ್ರಿ 7.30ಕ್ಕೆ ಕುಂಟಿಕಾನ ಮಠದಲ್ಲಿ ಶ್ರೀ ದೇವರಿಗೆ ಕಾರ್ತಿಕ ಪೂಜೆ, ಅನ್ನಸಂತರ್ಪಣೆ, 29ರಂದು ಬೆಳಗ್ಗೆ 9ಕ್ಕೆ ಶ್ರೀಕ್ಷೇತ್ರದ ಬಡಗುಬಾಗಿಲಲ್ಲಿ ರಾಜದೈವದ ನೇಮ, ರಾತ್ರಿ 7.30ಕ್ಕೆ ಕಾರ್ತಿಕ ಪೂಜೆ, ಅನ್ನಸಂತರ್ಪಣೆ, 30ರಂದು ಇರ್ವೆರು ಉಳ್ಳಾಕುಲು, ಕುಂಟಿಕಾನ ಧೂಮಾವತಿ ದೈವಗಳ ನೇಮ ನಡೆಯಲಿದೆ.

    ಜೀವಕಲಶಾಭಿಷೇಕ

    26ರಂದು ಪ್ರಾತಃಕಾಲ 4.30ರಿಂದ 108 ತೆಂಗಿನಕಾಯಿ ಮಹಾಗಣಪತಿ ಹೋಮ, ಪ್ರತಿಷ್ಠಾ ಪಾಣಿ, 8.48ರಿಂದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಉಪಸ್ಥಿತಿಯಲಿ ದೇವರ ಪ್ರತಿಷ್ಠಾಪನೆ, ಜೀವಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ, ಮಹಾಪೂಜೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts