More

    ಸಾಮೂಹಿಕ ನಮಾಜು ಸ್ಥಗಿತಗೊಳಿಸಿದ ಸೌದಿ ಅರೇಬಿಯಾ: ಕರೋನಾ ಸೋಂಕಿನ ಕಾರಣಕ್ಕೆ ಮುಂಜಾಗ್ರತಾ ಕ್ರಮ ಅನುಸರಿಸಿದ ಸರ್ಕಾರ

    ರಿಯಾದ್​: ಕರೊನಾ ವೈರಸ್ ಸೋಂಕು ತಡೆಯುವ ನಿಟ್ಟಿನಲ್ಲಿ ಸೌದಿ ಅರೇಬಿಯಾ ಸರ್ಕಾರ ಮಂಗಳವಾರದಿಂದ ಮಸೀದಿಗಳಲ್ಲಿ ನಡೆಯುವ ಸಾಮೂಹಿಕ ನಮಾಜು, ಪ್ರಾರ್ಥನೆಗಳನ್ನು ರದ್ದುಗೊಳಿಸಿದೆ. ಆದರೆ, ಈ ಆದೇಶ ಮೆಕ್ಕಾದ ಎರಡು ಪವಿತ್ರ ಮಸೀದಿಗಳಿಗೆ ಅನ್ವಯವಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

    ಈ ಎರಡು ಮಸೀದಿಗಳಲ್ಲಿ ಎಂದಿನಂತೆಯೆ ಪ್ರಾರ್ಥನೆಗಳು ಮುಂದುವರಿಯಲಿವೆ. ಎಲ್ಲರೂ ಅವರವರ ಮನೆಯಲ್ಲಿಯೇ ಇದ್ದು ಪ್ರಾರ್ಥನೆ ಮುಂದುವರಿಸಬೇಕು. ಉಳಿದ ಎಲ್ಲ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗ ಅವಕಾಶ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

    ಸೌದಿ ಅರೇಬಿಯಾದಲ್ಲಿ ಇದುವರೆಗೆ 171 ಕರೋನಾ ವೈರಸ್ ಕೇಸ್​ಗಳು ಪತ್ತೆಯಾಗಿವೆ. ಆದರೆ, ಮರಣ ದಾಖಲಾಗಿಲ್ಲ. ಅರಬ್​ ಜಗತ್ತಿನ ದೊಡ್ಡ ರಾಷ್ಟ್ರದಲ್ಲಿ ಸಿನಿಮಾ, ಮಾಲ್​ಗಳು, ಹೋಟೆಲ್, ರೆಸ್ಟೋರೆಂಟ್​ಗಳು ವ್ಯವಹಾರ ಸ್ಥಗಿತಗೊಳಿಸಿವೆ. ವಿಮಾನ ಹಾರಾಟವೂ ನಿಂತಿದೆ. ಕರೊನಾ ಕಾರಣಕ್ಕೆ ವರ್ಷ ಪೂರ್ತಿ ನಡೆಯುವ ಉಮ್ರಾಹ್​ ಯಾತ್ರೆಯನ್ನೂ ನಿಲ್ಲಿಸಿದೆ. ಗಲ್ಫ್​ ಕೋಆಪರೇಷನ್ ಕೌನ್ಸಿಲ್​ನ ಆರು ರಾಷ್ಟ್ರಗಳಲ್ಲಿ ಇದುವರೆಗೆ ಒಟ್ಟು 1,000 ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಬಹರೈನ್​ನಲ್ಲಿ ಒಬ್ಬ ಮಹಿಳೆ ಕರೋನಾ ಸೋಂಕಿನಿಂದ ಸೋಮವಾರ ಮೃತಪಟ್ಟಿದ್ದು ಜಿಸಿಸಿ ರಾಷ್ಟ್ರಗಳ ಪೈಕಿ ಇದೇ ಮೊದಲ ಸಾವು ಆಗಿ ದಾಖಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts