More

    ಭಾರತ ಸೇರಿ 16 ರಾಷ್ಟ್ರಗಳಿಗೆ ಸೌದಿ ನಿರ್ಬಂಧ: ಕಾರಣ ಏನು ಗೊತ್ತಾ?

    ಜೆದ್ದಾ: ಎರಡು ವರ್ಷಗಳ ಬಳಿಕ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ ಎನ್ನುವಾಗಲೇ ಮತ್ತೊಮ್ಮೆ ವೈರಸ್​ ಭೀತಿ ಎದುರಾಗಿದೆ. ಆದರೆ ಈ ಬಾರಿ ಎಚ್ಚೆತ್ತುಕೊಂಡಿರುವ ಕೆಲ ರಾಷ್ಟ್ರಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿವೆ.

    ಈ ನಿಟ್ಟಿನಲ್ಲಿ ಸೌದಿ ಅರೇಬಿಯಾ ಕೂಡ ನಿರ್ಧಾರ ಕೈಗೊಂಡಿದ್ದು, ಕರೊನಾ 4ನೇ ಅಲೆಯನ್ನು ತಡೆಗಟ್ಟುವ ಉದ್ದೇಶದಿಂದ ಸೋಂಕು ಕಂಡುಬರುತ್ತಿರುವ ರಾಷ್ಟ್ರಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ಮುಂದಾಗಿದೆ.

    ಈ ನಿಟ್ಟಿನಲ್ಲಿ ಭಾರತ ಸೇರಿದಂತೆ 16 ರಾಷ್ಟ್ರಗಳಿಗೆ ನಿರ್ಬಂಧ ಹೇರಿದೆ. ಇಲ್ಲಿನ ಜನರು ಸಂಪರ್ಕದಿಂದ ಮತ್ತೆ ಕರೊನಾ ಸೋಂಕು ತಗುಲುವ ಭೀತಿ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸೌದಿ ಅರೆಬಿಯಾ ತಿಳಿಸಿದೆ.

    ಭಾರತ ಸೇರಿ 16 ರಾಷ್ಟ್ರಗಳ ಜನರು ಗಲ್ಫ್​ ರಾಷ್ಟ್ರಗಳಿಗೆ ಪ್ರಯಾಣಿಸುವಂತಿಲ್ಲ. ಲೆಬನಾನ್​​, ಸಿರಿಯಾ, ಟರ್ಕಿ,ಇರಾನ್​​, ಅಫ್ಘಾನಿಸ್ತಾನ, ಯೆಮೆನ್, ಸೊಮಾಲಿಯಾ,ಇಥಿಯೋಪಿಯಾ, ಕಾಂಗೋ ಲಿಬಿಯಾ, ಇಂಡೋನೇಷಿಯಾ, ವಿಯೆಟ್ನಾಂ, ಅರ್ಮೆನಿಯಾ, ಬೆಲಾರಸ್​​ ಮತ್ತು ವೆನಿಜುವೆಲ್ಲಾ ರಾಷ್ಟ್ರವನ್ನು ನಿರ್ಬಂಧಿಸಿದೆ.

    ಕರೊನಾ 4ನೇ ಅಲೆ ಒಂದೆಡೆಯಾದರೆ ಮತ್ತೊಂದೆಡೆ ಮಂಕಿಪಾಕ್ಸ್​​ ಕೂಡ ಕಂಡುಬರುತ್ತಿರುವುದರಿಂದ ಸೌದಿ ಅರೇಬಿಯಾ ಈ ನಿರ್ಧಾರಕ್ಕೆ ಬಂದಿದೆ. (ಏಜೆನ್ಸೀಸ್​)

    ಬೆಂಗಳೂರಲ್ಲಿ ಯುವತಿಗೆ ರಿವಾಲ್ವಾರ್ ತೋರಿಸಿ ಪಿಜಿ ಮಾಲೀಕನಿಂದ ಅತ್ಯಾಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts