More

    ಛಡಿ ಏಟಿನಿಂದ ಅಂತೂ ಕೈದಿಗಳಿಗೆ ಸಿಕ್ಕಿತು ಮುಕ್ತಿ: ಇದು ಆದದ್ದೆಲ್ಲಿ?

    ರಿಯಾದ್ (ಸೌದಿ ಅರೇಬಿಯಾ): ಅಪರಾಧಿಗಳಿಗೆ ಭಯಂಕರ ಕಠಿಣ ಹಾಗೂ ಕಠೋರ ಶಿಕ್ಷೆಗೆ ಹೆಸರುವಾಸಿಯಾಗಿರುವ ಸೌದಿ ಅರೇಬಿಯಾದಲ್ಲಿ ಇರುವ ಹಲವಾರು ಶಿಕ್ಷೆಗಳ ಪೈಕಿ ಛಡಿ ಏಟಿನ ಶಿಕ್ಷೆಯೂ ಘನಘೋರವಾಗಿದೆ. ಕೈದಿಗಳಿಗೆ ಈ ಶಿಕ್ಷೆಯನ್ನು ನೀಡುವುದು ತಲೆತಲಾಂತರಗಳಿಂದ ನಡೆದು ಬಂದಿದೆ. ಆದರೆ ಈ ಶಿಕ್ಷೆಯನ್ನು ರದ್ದು ಮಾಡಿ ಸೌದಿಯ ಸುಪ್ರೀಂಕೋರ್ಟ್‌ ಆದೇಶಿಸಿದೆ.

    ಇದರ ಜತೆಗೆ, ಇನ್ನು ಮುಂದೆ ದೇಹದಂಡನೆ ಶಿಕ್ಷೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂಬ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಇಲ್ಲಿಯ ಮಾಧ್ಯಮಗಳು ವರದಿ ಮಾಡಿವೆ.

    ಛಡಿ ಏಟು ನೀಡಬೇಕೆ ಬೇಡವೇ ಎಂಬ ಬಗೆಗಿನ ಚರ್ಚೆ ಬಹಳ ವರ್ಷಗಳಿಂದ ನಡೆಯುತ್ತಲೇ ಬಂದಿತ್ತು. ಅದಕ್ಕೀಗ ಮುಕ್ತಾಯ ಕಂಡಿದೆ. ಸೌದಿ ನ್ಯಾಯಾಧೀಶರು ಕೂಡ ಸಾರ್ವಜನಿಕವಾಗಿ ಕಿರುಕುಳ ಕೊಟ್ಟವರಿಗೆ, ಅಪರಾಧ ಎಸಗಿದವರಿಗೆ ಛಡಿ ಏಟಿನ ಶಿಕ್ಷೆಯ ತೀರ್ಪು ನೀಡುತ್ತಿದ್ದರು. ಆದರೆ ಈ ಬಗ್ಗೆ ಮಾನವ ಹಕ್ಕು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಸುಪ್ರೀಂಕೋರ್ಟ್‌ನ ಜನರಲ್ ಕಮಿಷನ್ ಈಗ ಈ ತೀರ್ಪು ಪ್ರಕಟಿಸಿರುವ ಹಿನ್ನೆಲೆಯಲ್ಲಿ, ಬಹು ವರ್ಷಗಳ ವಾದ, ಪ್ರತಿವಾದಕ್ಕೆ ತೆರೆ ಸಿಕ್ಕಿದ್ದು, ಈ ಶಿಕ್ಷೆಯನ್ನೀಗ ರದ್ದು ಮಾಡುವುದರೊಂದಿಗೆ ಕೈದಿಗಳು ಸ್ವಲ್ಪ ನಿರಾಳರಾಗಿದ್ದಾರೆ.

    ಛಡಿ ಏಟಿನ ಬದಲು ಯಾವ ರೀತಿಯ ಶಿಕ್ಷೆ ನೀಡಬಹುದು ಎಂಬ ಬಗ್ಗೆ ಇಲ್ಲಿಯ ಸರ್ಕಾರ ಈಗ ಚರ್ಚೆ ನಡೆಸುತ್ತಿದೆ. ಕೈದಿಗಳಿಗೆ ಬೇರೆ ಶಿಕ್ಷೆಯನ್ನು ವಿಧಿಸಬೇಕೋ ಅಥವಾ ದಂಡ ವಿಧಿಸಬೇಕೊ ಅಥವಾ ಎರಡನ್ನೂ ಮಿಶ್ರಣ ಮಾಡಬೇಕೆ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ನಿರ್ದೇಶನದ ಮೇರೆಗೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts