More

    ಶನಿವಾರವೂ ರಸ್ತೆಗಿಳಿಯದ ಸರ್ಕಾರಿ ಬಸ್

    ಗದಗ: ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರು ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಸಾರಿಗೆ ಸಂಸ್ಥೆ ಸಿಬ್ಬಂದಿ ಮುಷ್ಕರ ಶನಿವಾರವೂ ಮುಂದುವರಿದಿದ್ದರಿಂದ ಬಸ್ ಸಂಚಾರ ಇಲ್ಲದೆ ಸಾರ್ವಜನಿಕರು ಫಜೀತಿ ಅನುಭವಿಸಿದರು.

    ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಟೆಂಪೋ, ಕ್ರೂಸರ್, ಟಂಟಂ ಮುಂತಾದ ಖಾಸಗಿ ವಾಹನಗಳ ಮಾಲೀಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ್ದು ಕಂಡುಬಂದಿತು. ಕೊಪ್ಪಳ, ಮುಂಡರಗಿ, ಹುಬ್ಬಳ್ಳಿ, ರೋಣ, ನರಗುಂದ, ಗಜೇಂದ್ರಗಡಕ್ಕೆ ತೆರಳುವ ಪ್ರಯಾಣಿಕರು ಕ್ರೂಸರ್ ಮತ್ತಿತರ ಖಾಸಗಿ ವಾಹನಗಳ ಮೂಲಕ ತೆರಳಿದರು. ಕೆಲ ವಾಹನಗಳ ಮಾಲೀಕರು ಅವಕಾಶ ಬಳಸಿಕೊಂಡು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದರು. ಶಿರಹಟ್ಟಿ ಮಾರ್ಗದಲ್ಲಿ ನಿತ್ಯ ಸಂಚರಿಸುವ ಕ್ರೂಸರ್ ಮತ್ತಿತರ ವಾಹನಗಳ ಚಾಲಕರು ಬಸ್ ದರವನ್ನೇ ಪಡೆದು ಜನರನ್ನು ಕರೆದುಕೊಂಡು ಹೋದರು.

    ಟಂಟಂ ಮತ್ತು ಆಟೋಗಳ ಚಾಲಕರೂ ಪ್ರಯಾಣಿಕರಿಂದ ಹೆಚ್ಚು ಹಣವನ್ನು ಪಡೆದರು. ಹೊಸ ಬಸ್ ನಿಲ್ದಾಣದಿಂದ ಅವಳಿ ನಗರದ ವಿವಿಧ ಬಡಾವಣೆಗಳಿಗೆ ತೆರಳಲು 80-100 ರೂ., ಕಾರು, ಕ್ರೂಸರ್ ವಾಹನಗಳ ಚಾಲಕರು ಹುಬ್ಬಳ್ಳಿಗೆ 150-200 ರೂ. ಪಡೆದರು.

    ಕಬಡ್ಡಿ ಆಡಿದರು!

    ಬಸ್ ಬಂದ್ ಆಗಿದ್ದರಿಂದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೇ ಇರಲಿಲ್ಲ. ಹೀಗಾಗಿ, ಬಸ್ ನಿಲ್ದಾಣದಲ್ಲಿನ ಆಟೋ ಚಾಲಕರು ಗಿರಾಕಿಗಳಿಲ್ಲದೆ ಟೈಂಪಾಸ್ ಮಾಡಿದರು. ಆಟೋ ಸ್ಟ್ಯಾಂಡಿನಲ್ಲಿ ಕೂತು ಕೂತು ಬೇಸತ್ತ ಕೆಲವು ಚಾಲಕರು ಬಸ್ ನಿಲ್ದಾಣದ ಆವರಣದಲ್ಲಿ ಕಬಡ್ಡಿ ಆಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts