More

    ಸಾಹಿತ್ಯಕ್ಕಿದೆ ಪರಿವರ್ತನೆ ತರುವ ಶಕ್ತಿ

    ಬಸವಕಲ್ಯಾಣ: ಸಮಾಜದಲ್ಲಿ ಪರಿವರ್ತನೆ ತರುವ ಶಕ್ತಿ ಸಾಹಿತ್ಯಕ್ಕಿದೆ. ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದು ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.

    ಕನ್ನಡ ಸಾಹಿತ್ಯ ಪರಿಷತ್, ಅಭಿನವ ಶ್ರೀ ಪ್ರಕಾಶನ ಹಾಗೂ ಪ್ರತಿಮಾ ಪ್ರಕಾಶನ ಸಹಯೋಗದಡಿ ಗವಿಮಠ ಸಂಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಸಾತ್ವಿಕ ಪ್ರಶಸ್ತಿ ಪ್ರದಾನ ಹಾಗೂ ಸಾಹಿತಿ ವೀರಶೆಟ್ಟಿ ಪಾಟೀಲ್ ರಚಿತ ಕವನ ಸಂಕಲನ ಕಲಿಯುಗ ಮುಗಿಯುವ ಮುನ್ನ ಮತ್ತು ಫೋಟೋಗ್ರಫಿ ಸಂಪಾದಿತ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಹಿತಿ ವೀರಶೆಟ್ಟಿ ಪಾಟೀಲ್ ಚಿತ್ರಕಲೆ ಜತೆಗೆ ಸಾಹಿತ್ಯ ರಚನೆಯಲ್ಲಿ ತೊಡಗಿಸಿ ೧೨ ಕೃತಿಗಳನ್ನು ಹೊರ ತಂದಿದ್ದಾರೆ ಎಂದರು.

    ಪ್ರೊ.ವೆಂಕಣ್ಣ ಡೊಣ್ಣೇಗೌಡ ಮಾತನಾಡಿ, ವೀರಶೆಟ್ಟಿ ಪಾಟೀಲ್ ಕಲೆ ಜತೆಗೆ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ ಎಂದು ಕೊಂಡಾಡಿದರು.
    ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಅಯಾಜುದ್ದಿನ್ ಪಟೇಲ್ ಫೋಟೋಗ್ರಾಫಿ ಪುಸ್ತಕ ಬಿಡುಗಡೆ ಮಾಡಿದರು. ಸಾತ್ವಿಕ್ ವಿ.ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು.

    ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಪ್ರಮುಖರಾದ ಶಿವಶಂಕರ ಟೋಕರೆ, ಪ್ರತಿಮಾ ಪಾಟೀಲ್, ವೀರಶೆಟ್ಟಿ ಪಾಟೀಲ್, ಬಸವಂತಪ್ಪ ಲವಾರೆ, ತುಳಸಿರಾಮ ತುಮಬಾರೆ, ವೀರಣ್ಣ ಶೀಲವಂತ, ನಾಗಪ್ಪ ನಿಣ್ಣೆ, ವೀರಶೆಟ್ಟಿ ಮಲಶೆಟ್ಟಿ, ಚಂದ್ರಕಾಂತ ಜೋಕಾರೆ, ಶಶಿಧರ ಪಾಟೀಲ್, ಶಿವಕುಮಾರ ಸ್ವಾಮಿ ಇತರರಿದ್ದರು. ಕಸಾಪ ತಾಲೂಕು ಅಧ್ಯಕ್ಷ ಶಾಂತಲಿಂಗ ಮಠಪತಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಿತಿನ್ ನೀಲಕಂಠೆ ನಿರೂಪಣೆ ಮಾಡಿದರು.

    ಸಾಧಕರಿಗೆ ಸಾತ್ವಿಕ ಪ್ರಶಸ್ತಿ: ಪತ್ರಕರ್ತ ಉದಯಕುಮಾರ ಮುಳೆ, ಫೋಟೋಗ್ರಾಫರ್ ಶಿವರಾಜ ಮೇಕಾಲೆ, ಚಿತ್ರ ಕಲಾವಿದ ವಿಠಲ್ ಜಾಧವ್, ಸೈಯದ್ ಅಕ್ಬರ್‌ಅಲಿ, ಸಂಗೀತಗಾರ ರಮೇಶ ಗರುಡಕರ್, ನಿವೃತ್ತ ಶಿಕ್ಷಕ ಬಲವಂತ ಚಾಕೂರೆ ಅವರಿಗೆ ಸಾತ್ವಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಇಂಡೋನೇಷ್ಯಾ ಸೇರಿ ವಿವಿಧ ದೇಶಗಳಲ್ಲಿ ಭಾರತೀಯ ಸಂಸೃತಿ ಬಿಂಬಿಸುವ ಐತಿಹಾಸಿಕ ಸ್ಥಳಗಳಿವೆ. ಭಾರತದ ಇತಿಹಾಸ ಸಂಸ್ಕೃತಿ ಶ್ರೇಷ್ಠವಾಗಿದೆ. ಕಲ್ಯಾಣದಲ್ಲಿನ ಐತಿಹಾಸಿಕ ಸ್ಥಳಗಳ ಜೀರ್ಣೋದ್ಧಾರಕ್ಕೆ ಪುರಾತತ್ವ ಇಲಾಖೆಯವರು ಕಾಳಜಿ ವಹಿಸಬೇಕು.
    | ಮೊಹಮ್ಮದ್ ಅಯಾಜುದ್ದಿನ್ ಪಟೇಲ್ ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts