More

    ಹಟ್ಟಿಹಾಳ್ ಸಮೀಪ ನಾಯಿ ತಿಂದ ಚಿರತೆ: ಸೆರೆಗೆ ಬೋನು ಅಳವಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ

    ಸಾಸ್ವೆಹಳ್ಳಿ: ಹೋಬಳಿಯ ಹಟ್ಟಿಹಾಳ್ ಗ್ರಾಮ ಸಮೀಪ ಚಿರತೆ ಹಾವಳಿ ಹೆಚ್ಚಿದ್ದು, ಸೆರೆ ಹಿಡಿಯಲು ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಅಳವಡಿಸಿದ್ದಾರೆ.

    ಗ್ರಾಮದ ಹೊಲಯದ ತೋಟ ಮತ್ತು ಹೊಲಗಳಲ್ಲಿ ಕೆಲಸ ಮಾಡುವ ರೈತರಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಚಿರತೆ ದರ್ಶನವಾಗುತ್ತಿದ್ದು, ಆತಂಕಗೊಂಡಿದ್ದಾರೆ. ಈಚೆಗೆ ರಾತ್ರಿ ಗ್ರಾಮಕ್ಕೆ ನುಗ್ಗಿ ರೈತರೊಬ್ಬರ ಸಾಕು ನಾಯಿಯನ್ನು ತಿಂದುಹಾಕಿದೆ. ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ತೋಟವೊಂದರಲ್ಲಿ ಬೋನು ಅಳವಡಿಸಿದ್ದು, ಎಲ್ಲೆಂದರಲ್ಲಿ ಸಂಚರಿಸದಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ.

    ಕಳೆದ ಹದಿನೈದು ದಿನಗಳ ಹಿಂದೆ ಪಕ್ಕದ ಬೈರನಹಳ್ಳಿ ಸಮೀಪ ಕರಡಿ ಕಾಣಿಸಿಕೊಂಡಿತ್ತು. 2020ರಲ್ಲಿ ಕ್ಯಾಸಿನಕೆರೆ ಗ್ರಾಮದಲ್ಲಿ ಚಿರತೆ ನಾಯಿ ಮೇಲೆ ದಾಳಿ ನಡೆಸಿತ್ತು. ಆಗ ಅರಣ್ಯ ಇಲಾಖೆಯವರು ತಿಂಗಳು ಗಟ್ಟಲೆ ಬೋನು ಸೆರೆ ಹಿಡಿದಿದ್ದರು. ಸುತ್ತಮುತ್ತ ಗ್ರಾಮಗಳಲ್ಲಿ ಕಾಡುಪ್ರಾಣಿಗಳು ದಾಳಿ ನಡೆಸುತ್ತಿರುವುದರಿಂದ ಜನ ಭಯಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts