More

    ಕೆಸರು ರಸ್ತೆಯಲ್ಲಿ ಭತ್ತ ನಾಟಿ; ಸಾಸ್ವೆಹಳ್ಳಿ ಹೋಬಳಿ ಕುಳಗಟ್ಟೆ ಗ್ರಾಮಸ್ಥರ ಆಕ್ರೋಶ

    ಸಾಸ್ವೆಹಳ್ಳಿ: ಸಾಸ್ವೆಹಳ್ಳಿ ಹೋಬಳಿ ಕುಳಗಟ್ಟೆ ಗ್ರಾಮದ ಅಣ್ಣೆದಿಗ್ಗೆ ಜನವಸತಿ ಪ್ರದೇಶದ ರಸ್ತೆ ಮಳೆಯಿಂದಾಗಿ ಕೆಸರುಗದ್ದೆಯಂತೆ ಮಾರ್ಪಟ್ಟಿದೆ. ಓಡಾಡಲಾಗದೆ ಬೇಸತ್ತ ಜನರು ಭತ್ತದ ಸಸಿ ನಾಟಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

    ಸ್ಥಳೀಯ ಗ್ರಾಪಂಗೆ ಸ್ಥಳೀಯರು 6 ತಿಂಗಳಿಂದಲೂ ದೂರು ನೀಡುತ್ತ ಬಂದಿದ್ದರೂ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿಲ್ಲ. ಇದರಿಂದ ಬೇಸತ್ತ ನಿವಾಸಿ ಮಂಜುಳಮ ಮತ್ತಿತರರು ಮಂಗಳವಾರ ಕೆಸರು ರಸ್ತೆಯಲ್ಲಿ ಭತ್ತದ ಸಸಿ ನಾಟಿ ಮಾಡಿ ಗ್ರಾಪಂ ವಿರುದ್ಧ ಹರಿಹಾಯ್ದರು.

    ನೀರಾವರಿ ನಿಗಮಕ್ಕೆ ಸೇರಿದ ರಸ್ತೆಯಾದ್ದರಿಂದ ಗ್ರಾಪಂ ಅನುದಾನದಲ್ಲಿ ಅಭಿವೃದ್ಧಿ ಅಸಾಧ್ಯ ಎನ್ನುತ್ತಿರುವ ಗ್ರಾಪಂ ಅಧಿಕಾರಿಗಳು, ನೀರಾವರಿ ಇಲಾಖೆಗೆ ಪತ್ರ ಬರೆದಿದ್ದು, ಅಲ್ಲಿಂದಲೂ ಅನುದಾನವಿಲ್ಲ ಎಂಬ ಉತ್ತರ ಬಂದಿದೆ.

    ಅಲ್ಲದೇ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿಗೆ ಕ್ರಿಯಾ ಯೋಜನೆ ತಯಾರಿಸಿ ಎಂದು ನೀರಾವರಿ ಇಲಾಖೆ ಗ್ರಾಪಂನತ್ತ ಬೆರಳು ತೋರುತ್ತಿದೆ.

    ಸ್ಥಳೀಯ ಗ್ರಾಪಂ ಮತ್ತು ನೀರಾವರಿ ಇಲಾಖೆ ತಕ್ಕಾಟದಿಂದಾಗಿ ರಸ್ತೆ ಅಭಿವೃದ್ಧಿ ವಂಚಿತವಾಗಿದ್ದು, ಸಂಚರಿಸುವ ಜನತೆ ಹೈರಾಣಾಗಿದ್ದಾರೆ ಎನ್ನುತ್ತಾರೆ ನಿವಾಸಿಳಾದ ಹಾಲೇಶ್, ರವಿ, ಚಿದಾನಂದಯ್ಯ, ಲೋಕೇಶ್, ಚೇತನ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts