More

    ಸಾಸ್ತಾನ ಟೋಲ್‌ಗೆ ಹೆದ್ದಾರಿ ಸಮಿತಿ ಮುತ್ತಿಗೆ

    ಕೋಟ: ದೇಶಾದ್ಯಂತ ಜ.1ರಿಂದ ಫಾಸ್ಟಾೃಗ್ ಕಡ್ಡಾಯಗೊಳ್ಳಲಿದ್ದು, ಈ ಸಂದರ್ಭ ಸ್ಥಳೀಯರಿಗೆ ಟೋಲ್‌ನಿಂದ ರಿಯಾಯಿತಿ ನೀಡಬೇಕು ಎಂದು ಆಗ್ರಹಿತಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ವತಿಯಿಂದ ಭಾನುವಾರ ಸಾಸ್ತಾನ ಟೋಲ್‌ಗೆ ಮುತ್ತಿಗೆ ಹಾಕಲಾಯಿತು.

    ಸ್ಥಳೀಯ ವಾಹನಗಳಿಗೆ ಟೋಲ್ ರಿಯಾಯಿತಿ ನೀಡಬೇಕು. ಹಿಂದೆ ಇದ್ದ ವ್ಯವಸ್ಥೆಯಂತೆ ಕೋಟ ಜಿಪಂ ಕ್ಷೇತ್ರ ವ್ಯಾಪ್ತಿಯ ವಾಹನಗಳಿಗೆ ಟೋಲ್ ರಹಿತ ಸಂಚಾರಕ್ಕೆ ಪ್ರತ್ಯೇಕ ಗೇಟ್‌ನಲ್ಲಿ ಅವಕಾಶ ಕಲ್ಪಿಸಬೇಕು ಎಂದು ಸಮಿತಿ ಸದಸ್ಯರು ಆಗ್ರಹಿಸಿದರು.

    ಪ್ರತಿಕ್ರಿಯಿಸಿದ ಟೋಲ್‌ಮ್ಯಾನೇಜರ್ ಬಷೀರ್,ಈ ವಿಚಾರದಲ್ಲಿ ಮೇಲಧಿಕಾರಿಗಳ ಜತೆ ಚರ್ಚಿಸಿ ನಿರ್ಧರಿಸಲು ಒಂದು ದಿನದ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಇದರಿಂದ ತೃಪ್ತರಾಗದ ಜಾಗೃತಿ ಸಮಿತಿ ಸದಸ್ಯರು, ಜ.1ರಿಂದ ಸ್ಥಳೀಯರಿಗೆ ರಿಯಾಯಿತಿ ನೀಡದೇ ಇದ್ದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

    ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ ನಾಯಿರಿ, ಕಾರ್ಯದರ್ಶಿ ಅಲ್ವಿನ್ ಅಂದ್ರೆ, ನಿಕಟಪೂರ್ವ ಅಧ್ಯಕ್ಷ ಪ್ರತಾಪ್ ಶೆಟ್ಟಿ , ಕಾರ್ಯದರ್ಶಿ ಐರೋಡಿ ವಿಠ್ಠಲ ಪೂಜಾರಿ, ಸಮಿತಿಪ್ರಮುಖರಾದ ಪ್ರಶಾಂತ್ ಶೆಟ್ಟಿ, ಸಂದೀಪ್ ಕುಂದರ್, ರಾಜೇಶ್,ಗೋವಿಂದ ಪೂಜಾರಿ, ರವಿ ತಿಂಗಳಾಯ,ಅಚ್ಯುತ್ ಪೂಜಾರಿ, ಚಂದ್ರಮೊಹನ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts