More

    VIDEO| ಮರಾಠ ಮೀಸಲಾತಿ ಹೋರಾಟ; ಪ್ರತಿಭಟನಾ ನಿರತರ ಮೇಲೆ ಲಾಠಿ ಚಾರ್ಜ್​ ಖಂಡಿಸಿ ತನ್ನ ಕಾರಿಗೆ ಬೆಂಕಿ ಹಚ್ಚಿದ ಸರ್​ಪಂಚ್​

    ಮುಂಬೈ: ಈಗಿನ ದುಬಾರಿ ದುನಿಯಾದಲ್ಲಿ ಕಾರು ಹೊಂದುವುದು ಅಷ್ಟು ಸುಲಭದ ಮಾತಲ್ಲ. ಕೆಲವರು ತಮ್ಮ ಸ್ವಂತ ಕಾರನ್ನು ಖರೀದಿಸಲು ಎಷ್ಟು ಕಷ್ಟಪಟ್ಟಿರುತ್ತಾರೆ ಎಂಬ ವಿಷ್ಯ ಅವರಿಗೆ ಮಾತ್ರ ತಿಳಿದಿರುತ್ತದೆ. ಆದರೆ, ನಮ್ಮ ಸ್ವಂತ ಕಾರನ್ನು ಸುಟ್ಟು ಹಾಕುವ ಪರಿಸ್ಥಿತಿ ಬರುತ್ತದೆ ಎಂದು ನೀವು ಎಂದಾದರು ಉಹಿಸಿದ್ದೀರಾ.

    ಇದೀಗ ಘಟನೆ ಒಂದರಲ್ಲಿ ವ್ಯಕ್ತಿಯೋರ್ವ ಜಲ್ನಾ ಜಿಲ್ಲೆಯಲ್ಲಾದ ಲಾಠಿ ಚಾರ್ಜ್​ ಖಂಡಿಸಿ ತನ್ನ ಸ್ವಂತ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಬೆಳಕಿಗೆ ಬಂದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಕ್ತಿಯ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಔರಂಗಬಾದ್​ ಜಿಲ್ಲೆಯ ಫುಲಂಬ್ರಿ ತಾಲ್ಲೂಕಿನ ಗೆವ್ರಾಯಿ ಪಾಯ್ಗಾ ಪಂಚಾಯಿತಿ ಸರ್​ಪಂಚ್​ ಆಗಿರುವ ಮಂಗೇಶ್​ ಸಾಬಳೆ ಎಂಬ ವ್ಯಕ್ತಿ ಪ್ರತಿಭಟನಾ ನಿರತರ ಮೇಲೆ ಮಾಡಲಾದ ಲಾಠಿ ಚಾರ್ಜ್​ ಖಂಡಿಸಿ ತಮ್ಮ ಸ್ವಂತ ಕಾರನ್ನು ಸುಟ್ಟು ಹಾಕಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಪೊಲೀಸರನ್ನು ಬಿಟ್ಟು ಸರ್ಕಾರ ದರ್ಪ ತೋರಿದೆ. ಇದನ್ನು ಖಂಡಿಸಿ ನಾನು ನನ್ನ ಕಾರನ್ನು ಸುಟ್ಟು ಹಾಕಿದ್ದೇನೆ ಎಂದು ಮಾಲೀಕ ಮಂಗೇಶ್​ ಸಾಬಳೆ ಹೇಳಿದ್ದಾರೆ.

    ಇದನ್ನೂ ಓದಿ: ಶ್ರಮಜೀವಿ ಎಕ್ಸ್​ಪ್ರೆಸ್​ ರೈಲಿನ ಶೌಚಾಲಯದಲ್ಲಿ ಯುವತಿಯ ಮೃತದೇಹ ಪತ್ತೆ

    ಮರಾಠ ಮೀಸಲಾತಿಗೆ ಆಗ್ರಹಿಸಿ ಜಲ್ನಾ ಜಿಲ್ಲೆಯಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಶುಕ್ರವಾರ ಹಿಂಸಾರೂಪ ಪಡೆದುಕೊಂಡಿತ್ತು. ಪೊಲೀಸರು ಪ್ರತಿಭಟನಾ ನಿರತರ ಮೇಲೆ ಲಾಠಿ ಚಾರ್ಜ್​ ಮಾಡಿದ್ದರು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು ಸಹ ಪೊಲೀಸರು ಸುಖಾಸುಮ್ಮನೆ ನಮ್ಮ ಮೇಲೆ ದರ್ಪ ಮೆರೆದಿದ್ದಾರೆ ಎಂದು ಆರೋಪಿಸಲಾಗಿತ್ತು.

    ಕರ್ತವ್ಯನಿರತ ಪೊಲೀಸರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕಾರಣಕ್ಕೆ ನಾವು ಲಾಠಿ ಚಾರ್ಜ್​ ಮಾಡಬೇಕಾದ ಪರಿಸ್ಥಿತಿ ಬಂತು ಎಂದು ಪೊಲೀಸ್​ ಅಧಿಕಾರಿಗಳು ದೂರಿದ್ದಾರೆ. ಹಿಂಸಾಚಾರದಲ್ಲಿ ಪೊಲೀಸರನ್ನು ಒಳಗೊಂಡಂತೆ 85ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 360 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts