More

    ಜೀ಼ ಕನ್ನಡದಲ್ಲಿ ಮ್ಯೂಸಿಕ್ ಅನ್​ಲಾಕ್ ಮೂಲಕ ಮತ್ತೆ ಶುರುವಾಯ್ತು ಸರಿಗಮಪ-17

    ಜೀ಼ ಕನ್ನಡದಲ್ಲಿ ಮ್ಯೂಸಿಕ್ ಅನ್ ಲಾಕ್ ಮೂಲಕ ಮತ್ತೆ ಸರಿಗಮಪ ಮರುಚಾಲನೆಗೊಂಡಿದೆ. ರಾಷ್ಟ್ರಾದ್ಯಂತ ಲಾಕ್ ಡೌನ್ ಕಾರಣದಿಂದ 3 ತಿಂಗಳು ಸ್ಥಗಿತಗೊಂಡಿದ್ದ ಈ ಸಂಗೀತ ಕಾರ್ಯಕ್ರಮವು ಮತ್ತೆ ಪ್ರಾರಂಭವಾಗುತ್ತಿರುವುದು ಎಲ್ಲ ವೀಕ್ಷಕರ ಮೊಗದಲ್ಲಿ ಸಂತೋಷ ತಂದಿದೆ. ವೇದಿಕೆಯ ಮಹಾಗುರುಗಳಾದ ನಾದಬ್ರಹ್ಮ ಡಾ.ಹಂಸಲೇಖ ಅವರ ಅಮೃತ ಹಸ್ತದಿಂದ ಸರಿಗಮಪದ ರಾಗದ ಬೀಗ ತೆಗೆಯುವುದರ ಮೂಲಕ ಕಾರ್ಯಕ್ರಮಕ್ಕೆ ಮರುಚಾಲನೆ ನೀಡಿದರು. ಅವರ ಜತೆಯಲ್ಲಿ ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹಾಗೂ ನಿರೂಪಕಿ ಅನುಶ್ರೀ ಉಪಸ್ಥಿತರಿದ್ದರು.

    ಇದನ್ನೂ ಓದಿ: ಆರ್​ಆರ್​ಆರ್ ಕೈಬಿಟ್ಟ ರಾಜಮೌಳಿ, ಮಹೇಶ್​ ಬಾಬು ಸಲುವಾಗಿ ಫಾರ್ಮ್​ಹೌಸ್​ ಸೇರಿದ್ದೇಕೆ?

    ಕನ್ನಡ ಕಿರುತೆರೆಯ ಮಹತ್ತರವಾದ ಸಂಗೀತ ಕಾರ್ಯಕ್ರಮ ಸರಿಗಮಪ ಯಶಸ್ವಿಯಾಗಿ 16 ಆವೃತ್ತಿಗಳನ್ನು ಪೂರೈಸಿ 17ನೇ ಆವೃತ್ತಿ ನಡೆಯುತ್ತಿತ್ತು. ಲಾಕ್ ಡೌನ್ ಈ ಜನಪ್ರಿಯ ಕಾರ್ಯಕ್ರಮದ ಪ್ರಸಾರಕ್ಕೆ ಅಡ್ಡಿಯಾಗಿತ್ತು. ಇದೀಗ ಮತ್ತೆ ಮರು ಆರಂಭವಾಗಿದೆ. ಸರಿಗಮಪ ಲಾಕ್ ಡೌನ್ ನಿರ್ಬಂಧದ ನಂತರ 17 ಸ್ಪರ್ಧಿಗಳ ಭಾಗವಹಿಸುವಿಕೆಯೊಂದಿಗೆ ಮತ್ತೆ ಪ್ರಾರಂಭವಾಗುತ್ತಿದೆ. ಭಾನುವಾರ ಸಂಜೆ 7.30ಕ್ಕೆ ಜೀ ಕನ್ನಡದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

    ಇದನ್ನೂ ಓದಿ: ತೆಲುಗು ನಟನ ಜತೆಗೆ ಡೇಟಿಂಗ್​ ಮಾಡ್ತಿದ್ದಾರಾ ಸಂಜನಾ ತಂಗಿ ನಿಕ್ಕಿ?

    ಈ ಕುರಿತು ಜೀ಼ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, “ಜೀ಼ ಕನ್ನಡ ವೀಕ್ಷಕರ ಮನಸ್ಸನ್ನು ಅರಿತು ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಸರಿಗಮಪ ಲಾಕ್ ಡೌನ್ ಸಮಸ್ಯೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೂ ಅದರ ಜನಪ್ರಿಯತೆ ಕುಗ್ಗಿಲ್ಲ. ಜನರು ಮನೆಯಲ್ಲಿಯೇ ಇದ್ದು ಆರೋಗ್ಯಕರವಾಗಿರಬೇಕಾದ ಈ ಸಂದರ್ಭದಲ್ಲಿ ಅವರ ಅಚ್ಚುಮೆಚ್ಚಿನ ಕಾರ್ಯಕ್ರಮ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸರಿಗಮಪ ಮತ್ತೆ ಪ್ರಾರಂಭಿಸಿದ್ದೇವೆ. ಎಂದಿನಂತೆ ವೀಕ್ಷಕರು ಈ ಕಾರ್ಯಕ್ರಮವನ್ನು ಸ್ವಾಗತಿಸುತ್ತಾರೆ ಎಂಬ ವಿಶ್ವಾಸ ನಮ್ಮದು” ಎಂದಿದ್ದಾರೆ.

    ಸುಶಾಂತ್​ ನೆನಪಲ್ಲಿ ಏಕ್ತಾ ಕಪೂರ್​ ಶುರು ಮಾಡಿದ್ರು ‘ಪವಿತ್ರಾ ರಿಶ್ತಾ ಫಂಡ್’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts