More

    ಕರೊನಾ ವಾರಿಯರ್ಸ್​ಗೆ ಸರ್ಕಾರದಿಂದ ‘ಸೀರೆ’ ಗಿಫ್ಟ್

    ಬಾಗಲಕೋಟೆ: ಕರೊನಾ ವಾರಿಯರ್​ಗಳಿಗೆ ಸೀರೆ ಗಿಫ್ಟ್ ಕೊಡಲು ಸರ್ಕಾರ ಸಜ್ಜಾಗಿದ್ದು, ಆ ಮೂಲಕ ಸಂಕಷ್ಟದಲ್ಲಿರುವ ನೇಕಾರರಿಗೆ ನೆರವು ನೀಡಲಿದೆ.

    ರಾಜ್ಯದಲ್ಲಿ ಕಾರೊನಾ ಸೋಂಕು ಮಣಿಸುವ ಹೋರಾಟದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಆಶಾ, ಅಂಗನವಾಡಿ ಸೇರಿ ವಿವಿಧ ಇಲಾಖೆಯ ಕಾರ್ಯಕರ್ತೆಯರಿಗೆ ಸೀರೆಗಳನ್ನು ಗಿಫ್ಟ್ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಜವಳಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.

    ಇದನ್ನೂ ಓದಿರಿ ರಾತ್ರಿಯಿಡೀ ಪರದಾಡಿದ ನಟಿ ಸುಧಾರಾಣಿ, ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ; ಡಾ.ಕೆ. ಸುಧಾಕರ್

    ಕರೊನಾ ಪರಿಣಾಮ ನೇಕಾರರ ಬದುಕು ಬೀದಿಗೆ ಬಿದ್ದಿದೆ. ಇರುವ ಬಟ್ಟೆಗಳ ವ್ಯಾಪಾರವೂ ಆಗದೆ, ಇತ್ತ ಕೆಲಸವೂ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂಕಷ್ಟಕಾಲದಲ್ಲಿ ನೇಕಾರರಿಗೆ ನೆರವಾಗಲು ಯೋಜಿಸಿದ ಸರ್ಕಾರ, ಅವರಿಂದ ಸೀರೆಗಳನ್ನು ಖರೀದಿಸಲಿದೆ. ಆ ಸೀರೆಗಳನ್ನು ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಉಡುಗೊರೆಯಾಗಿ ನೀಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುವುದು ಎಂದು ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.

    ಸದ್ಯ 6 ಲಕ್ಷ ಸೀರೆ ಖರೀದಿ ಮಾಡುತ್ತೇವೆ. ಇದಕ್ಕೆ ಸಿಎಂ ಯಡಿಯೂರಪ್ಪ ಕೂಡ ಒಪ್ಪಿದ್ದಾರೆ ಎಂದು ವಿವರಿಸಿದರು.

    ಮಗಳ ಸಾವಿನ ಸೇಡಿಗೆ ಪ್ರಿಯಕರನ ಕೊಲೆ, ಎರಡೂ ಕುಟುಂಬಗಳ ದ್ವೇಷದ ಜ್ವಾಲೆಗೆ ಹಾಡಹಗಲೇ ಹೊತ್ತಿ ಉರಿದ ಮನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts