More

    ಜಗತ್ತಿಗೆ ಜ್ಯೋತಿಯಾಗಿ ಬೆಳಗಿಸಿದ ವಾಲ್ಮೀಕಿ

    ಸರಗೂರು: ಸಾವಿರಾರು ವರ್ಷಗಳು ಕಳೆದರೂ ವಾಲ್ಮೀಕಿ ರಾಮಾಯಣ ಇತಿಹಾಸವಾಗಿ ಉಳಿಯಲಿದೆ. ಜಗತ್ತಿಗೆ ಜ್ಯೋತಿಯಾಗಿ ಬೆಳಗಿಸಿದ ಹಿರಿಮೆ ಸಂತ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ಕರಿಮುದ್ದನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಚಿಕ್ಕಮಳಲಿ ಆರ್.ಮಹದೇವು ತಿಳಿಸಿದರು.

    ಸರಗೂರು ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.

    ಭಾರತದಲ್ಲಿ ಅದ್ಭುತವಾದ ಸಂಸ್ಕೃತಿ ರೂಪಿತವಾಗಲು ವಾಲ್ಮೀಕಿ ಪ್ರಮುಖರು. ಆನೆ ನಡೆದದ್ದೇ ದಾರಿಯಂತೆ ವಾಲ್ಮೀಕಿ ನಡೆದದ್ದೇ ದಾರಿಯಾಗಿ ಪಾರಂಪರಿಕ ಚಿಂತನೆಗಳನ್ನು ತುಂಬಿದ್ದಾರೆ. ವಾಲ್ಮೀಕಿ ಒಂದು ಜನಾಂಗಕ್ಕಾಗಲಿ, ಧರ್ಮಕ್ಕಾಗಲಿ ಮಾದರಿ ಎಂದು ಗುರುತಿಸಬಾರದು. ವಿಶ್ವಕ್ಕೆ ಅವರು ಹಾಕಿಕೊಟ್ಟ ದಾರಿ ಮಾದರಿಯಾಗಿ ಗುರುತಿಸಬೇಕು ಎಂದರು.

    ಶಾಸಕ ಅನಿಲ್ ಚಿಕ್ಕಮಾದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಚ್.ಡಿ.ಕೋಟೆ ತಾಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಾಣ ತಮ್ಮ ತಂದೆ ಚಿಕ್ಕಮಾದು ಅವರ ಕನಸಿನ ಕೂಸಾಗಿತ್ತು. 3.75 ಕೋಟಿ ರೂ. ಮಂಜೂರು ಮಾಡಿಸಿದ್ದು, ನಿರ್ಮಾಣ ಹಂತದಲ್ಲಿದೆ. ಸರಗೂರಿನಲ್ಲೂ ಭವನ ನಿರ್ಮಾಣಕ್ಕೆ ಜಾಗ ಮಂಜೂರಾಗಿದೆ. ಅದರಂತೆ ಭವನ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 1 ಕೋಟಿ ರೂ. ಬಿಡುಗಡೆಗೊಳಿಸಲಾಗುವುದು ಎಂದು ಭರವಸೆ ನೀಡಿದರು.

    ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ ಮತ್ತು ತಾಲೂಕು ನಾಯಕ ಸಮಾಜದ ವತಿಯಿಂದ ಜಯಂತಿ ಅಂಗವಾಗಿ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು.ಬೆಳ್ಳಿ ರಥದಲ್ಲಿ ವಾಲ್ಮೀಕಿ ಭಾವಚಿತ್ರವನ್ನು ಇರಿಸಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಕೇರಳದ ಚಂಡೆಯ ವಾದನಕ್ಕೆ ಜನರು ತಲೆದೂಗಿದರು. ಮಲಿಯೂರು ಬಾಯ್ಸನ ಪೂಜಾಕುಣಿತ, ಅಕ್ಕನ ಬಳಗದ ನೃತ್ಯ, ವೀರಗಾಸೆ ಕುಣಿತ, ಕಂಸಾಳೆ, ನಗಾರಿ ಮೆರವಣಿಗೆಗೆ ಸಾಥ್ ನೀಡಿದವು. ನಾಯಕ ಮುಖಂಡರ ಜತೆ ಶಾಸಕ ಅನಿಲ್ ಚಿಕ್ಕಮಾದು ಕುಣಿದು ಕುಪ್ಪಳಿಸಿದ್ದರು.

    ತಾಲೂಕು ಆಡಳಿತದ ವತಿಯಿಂದ ವಾಲ್ಮೀಕಿ ಜೀವನ ಚರಿತ್ರೆಯುಳ್ಳ ಸ್ತಬ್ದಚಿತ್ರ, ತುಂಬಸೋಗೆ ಗ್ರಾಮದಿಂದ ವಾಲ್ಮೀಕಿ ಲವ ಕುಶರಿಗೆ ಬಿಲ್ವಿದ್ಯೆ ಹೇಳಿಕೊಡುವಂತಹ ಸ್ತಬ್ದಚಿತ್ರ, ಬೇಡರಕಣ್ಣಪ್ಪ, ಅಗತ್ತೂರು ಗ್ರಾಮದಿಂದ ರಾಮ ಮತ್ತು ವಾಲ್ಮೀಕಿ ಸ್ತಬ್ದಚಿತ್ರ ಗಮನ ಸೆಳೆಯಿತು.
    ಸ್ತಬ್ದಚಿತ್ರದಲ್ಲಿ ಆಗತ್ತೂರು ನಾಯಕ ಸಮಾಜಕ್ಕೆ ಪ್ರಥಮ, ತುಂಬಸೋಗೆ ನಾಯಕ ಸಮಾಜಕ್ಕೆ ದ್ವಿತೀಯ, ಸರಗೂರು ನಾಯಕ ಸಮಾಜ ತೃತೀಯ ಬಹುಮಾನ ಪಡೆದುಕೊಂಡಿತು.

    ಸರಗೂರು ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಮೈಮುಲ್ ನಿರ್ದೇಶಕ ಈರೇಗೌಡ, ನಾಯಕ ಸಮಾಜದ ಅಧ್ಯಕ್ಷ ಪುರದಕಟ್ಟೆ ಬಸವರಾಜು, ಶಂಭುಲಿಂಗನಾಯಕ, ಇಒಗಳಾದ ಧರಣೇಶ್, ಸುಷ್ಮಾ, ಪರಶಿವಮೂರ್ತಿ, ಪ್ರದೀಪ್, ನಾಯಕ ನೌಕರರ ಸಂಘದ ಅಧ್ಯಕ್ಷ ಸಿದ್ದರಾಜು, ಶ್ರೀನಿವಾಸ, ಎಚ್.ಸಿ.ನರಸಿಂಹಮೂರ್ತಿ, ರಾಜು ವಿಶ್ವಕರ್ಮ, ಶಿವಪ್ಪ ಕೋಟೆ, ಶಿವಣ್ಣ, ಅಶೋಕ್, ಚಿಕ್ಕವೀರನಾಯಕ, ಜಿನ್ನಹಳ್ಳಿ ರಾಜನಾಯಕ, ಕ್ಯಾತನಹಳ್ಳಿ ನಾಗರಾಜು, ನಾಯಕ ಸಮಾಜ ಯಜಮಾನರಾದ ಬೆಟ್ಟನಾಯಕ, ಗೋಪಾಲಕೃಷ್ಣ, ಶಿವರಾಜು, ಬೆಟ್ಟಸ್ವಾಮಿ, ಮುದ್ದುಮಲ್ಲಯ್ಯ, ಶಶಿಕಲಾ, ಸಿಡಿಪಿಒ ಆಶಾ, ಮರಿದೇವಯ್ಯ, ಕೆಂಡಗಣ್ಣಸ್ವಾಮಿ, ಕನ್ನಡೊಪ್ರಮೋದ್, ಶ್ರೀನಿವಾಸ್, ಉಮಾರಾಮಚಂದ್ರ, ಆರಕ್ಷಕ ಇಲಾಖೆಯ ಲಕ್ಷ್ಮೀಕಾಂತ್, ಬಿಇಒ ಮಾರಯ್ಯ, ಟಿಎಚ್‌ಒ ರವಿಕುಮಾರ್, ಸೋಮಣ್ಣ, ನಂದೀಶ್, ಚಿಕ್ಕನಾಯಕ, ಸೋಮೇಶ್, ರಾಜು, ರವಿಕುಮಾರ್, ರಮೇಶ್, ಪತ್ರಿಕಾ ಸಂಘದ ಬೀಚನಹಳ್ಳಿ ಮಂಜುನಾಥ್, ಅಂಕಪ್ಪ ತುಂಬಸೋಗೆ, ತಾಲೂಕು ದಂಡಾಧಿಕಾರಿ ಸಣ್ಣರಾಮಪ್ಪ, ಪರಶಿವಮೂರ್ತಿ ಸಮಾಜ ಕಲ್ಯಾಣ ಪರಿಶಿಷ್ಟ ವರ್ಗಗಳ ಇಲಾಖೆ ಅಧಿಕಾರಿ ನಾರಾಯಣಸ್ವಾಮಿ, ರಾಮಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts