More

    ಪ್ರಧಾನಿ ಪತ್ನಿಯನ್ನು ಹಿಡಿದಿಟ್ಟ ಪ್ರತಿಭಟನಾಕಾರರು; ಉಸಿರು ಬಿಗಿ ಹಿಡಿದ ನೆತನ್ಯಾಹು!

    ನವದೆಹಲಿ: ಇಸ್ರೇಲ್​ ಸರ್ಕಾರದ ವಿರುದ್ಧ ನೂರಾರು ಪ್ರತಿಭಟನಾಕಾರರು ಹೊರಗೆ ಜಮಾಯಿಸಿದ್ದರಿಂದ ಪ್ರಧಾನಿ ಪತ್ನಿ ಬುಧವಾರ ಟೆಲ್ ಅವಿವ್ ನಗರದ ಹೇರ್ ಸಲೂನ್‌ನಲ್ಲಿ ಸಿಕ್ಕಿಬಿದ್ದರು. ಪ್ರತಿಭಟನಾಕಾರರನ್ನು ದೂರವಿಡಲು ಪೊಲೀಸರು ಬಂದಿದ್ದು ಬೆಂಜಮಿನ್​ ನೆತನ್ಯಾಹು ಪತ್ನಿ ಸಾರಾ ನೆತನ್ಯಾಹು ಅವರನ್ನು ಸಿಕ್ಕಿಬಿದ್ದಿದ್ದ ಸಲೂನ್​ನಿಂದ ಹೊರತೆಗೆಯಲು ಕೆಲವಾರು ಗಂಟೆಗಳ ಕಾಲ ಕಾಯಬೇಕಾಯಿತು.

    ಸರ್ಕಾರದ ವಿರುದ್ಧ ಪ್ರತಿಭಟನಕಾರರು ಟೆಲ್ ಅವೀವ್ ಮತ್ತು ದೇಶದ ಇತರ ನಗರಗಳಲ್ಲಿ ದಿನವಿಡೀ ಮೆರವಣಿಗೆ ನಡೆಸಿದರು. ಟೆಲ್ ಅವಿವ್, ಜೆರುಸಲೆಮ್, ನಹರಿಯಾ, ಪರ್ಡೆಸ್ ಹನ್ನಾ-ಕರ್ಕೂರ್ ಮತ್ತು ಜಿಚ್ರಾನ್ ಯಾ ಸೇರಿದಂತೆ ಹಲವಾರು ಸ್ಥಳಗಳಲ್ಲಿ ರಾತ್ರಿ ಪ್ರತಿಭಟನೆಯನ್ನು ಪುನರಾರಂಭಿಸಿದರು.

    ಹಿಂದಿನ ದಿನದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಗಳನ್ನು ಕಂಡ ಟೆಲ್ ಅವಿವ್‌ ನಗರದಲ್ಲಿ, ಸಾರಾ ನೆತನ್ಯಾಹು ಅವರು ಕೂದಲು ಕಟ್​ ಮಾಡಿಸಿಕೊಳ್ಳು ಸಲೂನ್​ ಒಂದಕ್ಕೆ ಹೋಗಿದ್ದರು ಎಂದು ಕೇಳಿದ ಪ್ರತಿಭಟನಾಕಾರರು ಆ ಕಟ್ಟಡವನ್ನು ಘೇರಾವ್​ ಮಾಡಿದರು.

    ಸಾರಾ ನೆತನ್ಯಾಹು ಒಳಗಿದ್ದರಿಂದ ಪ್ರತಿಭಟನಾಕಾರರನ್ನು ಅಲ್ಲಿಂದ ದೂರವಿರಿಸಲು ಪೊಲೀಸರನ್ನು ನಿಯೋಜಿಸಲಾಯಿತು. ಅಂತಿಮವಾಗಿ, ದೊಡ್ಡ ಪೊಲೀಸ್ ಪಡೆಗಳು ಸ್ಥಳಕ್ಕೆ ಆಗಮಿಸಿ ಸಾರಾ ನೆತನ್ಯಾಹುವನ್ನು ಸ್ಥಳಾಂತರಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts