More

    ಚುನಾವಣಾ ಆಯುಕ್ತ ಯಾರು ಅನ್ನೋ ನಿರ್ಧಾರ ಯಾರದ್ದು? ಸುಪ್ರೀಂ ಆದೇಶವೇನು?

    ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರನ್ನು (ಇಸಿ) ನೇಮಿಸುವ ಸರ್ಕಾರದ ಅಧಿಕಾರವನ್ನು ನಿರ್ಬಂಧಿಸಿ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ. ತೀರ್ಪಿನಲ್ಲಿ ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ಚುನಾವಣಾ ಆಯುಕ್ತರನ್ನು ನೇಮಕ ಮಾಡಲಾಗುತ್ತದೆ ಎಂದು ಹೇಳಿದೆ.

    ಇದನ್ನೂ ಓದಿ: ಪ್ರಧಾನಿ ಮೋದಿ ಕಿರಿಯ ಸಹೋದರ ಆಸ್ಪತ್ರೆಗೆ ದಾಖಲು…

    ಚುನಾವಣಾ ಆಯುಕ್ತರ ನೇಮಕಾತಿಗೆ ಸ್ವತಂತ್ರ ಕಾರ್ಯವಿಧಾನವನ್ನು ಕೋರಿದ ಅರ್ಜಿಗಳ ಬ್ಯಾಚ್ ಅನ್ನು ಭಾಗಶಃ ಅನುಮತಿಸಿದ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ, “ಮುಖ್ಯ ಚುನಾವಣಾ ಆಯುಕ್ತರನ್ನು (ಸಿಇಸಿ) ಹುದ್ದೆಗೆ ನೇಮಕಾತಿ ಮಾಡಿ ನಾವು ಘೋಷಿಸುತ್ತೇವೆ.

    ಇದನ್ನೂ ಓದಿ: ಚುನಾವಣೆ ಹಿನ್ನೆಲೆಯಲ್ಲಿ ಜ್ಯೋತಿಷಿಗಳಿಗೆ ಭಾರಿ ಡಿಮಾಂಡ್: ಮಂಗಳಮುಖಿಯರಿಗೆ ಮೊರೆ!

    ಚುನಾವಣಾ ಆಯುಕ್ತರನ್ನು ಭಾರತದ ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ಭಾರತದ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಮತ್ತು ಅಂತಹ ನಾಯಕ ಇಲ್ಲದಿದ್ದ ಸಂದರ್ಭದಲ್ಲಿ ಅತಿ ದೊಡ್ಡ ಸಂಖ್ಯಾ ಬಲವನ್ನು ಹೊಂದಿರುವ ಆಡಳಿತ ಮಾಡುತ್ತಿರುವ ಪಕ್ಷ, ವಿರೋಧ ಪಕ್ಷದಲ್ಲಿರುವ ಅತಿ ದೊಡ್ಡ ಪಕ್ಷ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಸೇರಿಕೊಂಡು ಚುನಾವಣಾ ಆಯುಕ್ತರನ್ನು ಆರಿಸುತ್ತಾರೆ” ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts