More

    ಸ್ಮಶಾನ ಪಕ್ಕದಿಂದ ಒಕ್ಕಲೆಬ್ಬಿಸಲು ಯತ್ನ, ಸ್ಥಳೀಯರ ಪ್ರತಿಭಟನೆ

    ಶಿವಮೊಗ್ಗ: ತಾಲೂಕಿನ ಸಂತೇಕಡೂರು ಗ್ರಾಮದಲ್ಲಿ ಸ್ಮಶಾನಕ್ಕೆಂದು ಮಂಜೂರಾಗಿರುವ ಜಾಗದ ಪಕ್ಕದಲ್ಲಿ ಹಲವಾರು ವರ್ಷಗಳಿಂದ ವಾಸವಾಗಿರುವ 25 ಕುಟುಂಬಗಳನ್ನು ಒಕ್ಕಲೆಬ್ಬಿಸಲು ಅಧಿಕಾರಿಗಳು ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಜಿಲ್ಲಾ ಯುವ ಘಟಕ ಹಾಗೂ ಜಿಲ್ಲಾ ರೈತ ಘಟಕದ ನೇತೃತ್ವದಲ್ಲಿ ಸ್ಥಳೀಯರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ಗ್ರಾಮದ ಸರ್ವೇ ನಂ. 95ರಲ್ಲಿ 232 ಎಕರೆ ಸರ್ಕಾರಿ ಜಮೀನಿದ್ದು, ಅದರಲ್ಲಿ 1.25 ಎಕರೆ ಜಮೀನನ್ನು ಸ್ಮಶಾನಕ್ಕೆಂದು ಮೀಸಲಿಡಲಾಗಿದೆ. ಸ್ಮಶಾನದ ಪಕ್ಕದಲ್ಲಿ ಬಡಕುಟುಂಬಗಳು ಮನೆ ಕಟ್ಟಿಕೊಂಡು ಹಲವು ವರ್ಷಗಳಿಂದ ಕಂದಾಯವನ್ನೂ ಪಾವತಿಸುತ್ತಿವೆ. ಈ ನಡುವೆ 2016ರಲ್ಲಿ ಸ್ಮಶಾನ ಜಾಗವನ್ನು 3 ಎಕರೆ ಎಂದು ಪಹಣಿಯಲ್ಲಿ ತಿದ್ದುಪಡಿ ಮಾಡಲಾಗಿದೆ. ಇತ್ತೀಚೆಗೆ ಸ್ಮಶಾನ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದು ಮನೆಗಳನ್ನು ತೆರವುಗೊಳಿಸುವಂತೆ ತಹಸೀಲ್ದಾರ್, ರಾಜಸ್ವ ನಿರೀಕ್ಷಕರು ಹಾಗೂ ಪಿಡಿಒ ಒತ್ತಡ ಹಾಕುತ್ತಿದ್ದಾರೆ ಎಂದು ದೂರಿದರು.
    25 ವರ್ಷಗಳಿಂದ ಅಲ್ಲಿಯೇ ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದು ಅದೇ ಜಾಗದಲ್ಲಿ ವಾಸ ಮಾಡಲು ಅವಕಾಶ ನೀಡಬೇಕು. ಅದು ಸಾಧ್ಯವಾಗದಿದ್ದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಿ.ಆರ್.ಮಧು, ಜಿಲ್ಲಾ ಸಂಚಾಲಕ ಮೊಹಮ್ಮದ್ ಅಯಾಜ್, ಜಿಲ್ಲಾ ರೈತ ಘಟಕ ಅಧ್ಯಕ್ಷ ಶರತ್, ಪರಿಮಳ, ಆಶಾ, ಲತಾ, ಸಂತೋಷ್, ಶೋಭಾ, ಜಯಮ್ಮ, ಕೆ.ಕಿರಣ್, ದೀಪಾಶ್ರೀ, ಶಿವಮೂರ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts