More

  ರಂಗಮಂದಿರ ನಿರ್ಮಾಣಕ್ಕೆ ಸಹಕಾರ

  ಯಾದಗಿರಿ : ಜಿಲ್ಲಾ ಕೇಂದ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ರಂಗಮಂದಿರದ ಕೊರತೆಯನ್ನು ನೀಗಿಸಲು ತಮ್ಮ ವೈಯಕ್ತಿಕವಾಗಿ ಹಾಗೂ ಪಕ್ಷದ ನೆಲೆಗಟ್ಟಿನಲ್ಲಿ ಶ್ರಮಿಸುವುದಾಗಿ ಜೆಡಿಎಸ್ ಯುವ ನಾಯಕ ಶರಣಗೌಡ ಕಂದಕೂರ ಭರವಸೆ ನೀಡಿದರು.

  ಸಂಕ್ರಾಂತಿ ಹಬ್ಬದ ನಿಮಿತ್ತ ಸೋಮವಾರ ನಗರದ ಸಕರ್ಾರಿ ಮಹಿಳಾ ಪದವಿ ಕಾಲೇಜಿನಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ನಿಂದ ಹಮ್ಮಿಕೊಳ್ಳಲಾಗಿದ್ದ ಚುಟುಕು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೈಜ ಕಲಾವಿದರ, ಸಾಹಿತಿಗಳ, ಚಿಂತಕರ ಗುರುತಿಸುವ ಕಾರ್ಯ ಇನ್ನು ಆಗಬೇಕಿದೆ. ಇಂದು ಜಿಲ್ಲೆಯಲ್ಲಿ ಕವಿ, ಕಲಾವಿದರು, ಪ್ರತಿಭೆಗಳು ಸಾಕಷ್ಟಿದ್ದರೂ ಅವರನ್ನು ಸೂಕ್ತ ಸಮಯದಲ್ಲಿ ಪ್ರೋತ್ಸಾಹಿಸುವ ಕೆಲಸವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

  ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅನಪೂರ ಮಾತನಾಡಿ, ಜಿಲ್ಲೆಯಾದ ಮೇಲೆ ಯಾದಗಿರಿಯಲ್ಲಿ ನಿಧಾನವಾಗಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಸಾಹಿತ್ಯಿಕ ಕೆಲಸಗಳಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡುವುದು ಅಗತ್ಯ ಎಂದರು.
  ಹಿರಿಯ ಸಾಹಿತಿ ವಿಶ್ವನಾಥರೆಡ್ಡಿ ಗೊಂದೆಡಗಿ, ಯುವಕವಿಗಳು ಇನ್ನು ಹೆಚ್ಚು ಹೆಚ್ಚು ವರ್ತಮಾನದ ಸಂಗತಿಗಳಿಗೆ ಸ್ಪಂದಿಸಬೇಕು, ಹೆಚ್ಚು ಓದಬೇಕು, ಎಂದು ಕಿವಿಮಾತು ಹೇಳಿದರು.

  ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ಧರಾಜರೆಡ್ಡಿ ಮಾತನಾಡಿ, ಚುಸಾಪ ಈ ಭಾಗದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಲು ಆರಂಭಿಸಿದೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ತಾಲೂಕು ಹಾಗೂ ಜಿಲ್ಲಾ ಸಮ್ಮೇಳನಗಳನಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

  ಚುಸಾಪ ತಾಲೂಕಾಧ್ಯಕ್ಷ ರಿಯಾಜ್ ಪಟೇಲ್ ಮಾತನಾಡಿ, ವಿದ್ಯಾಥರ್ಿ ಹಂತದಲ್ಲಿಯೇ ಸಾಹಿತ್ಯ ಪ್ರಾರಂಭವಾಗುವುದರಿಂದ ಆರಂಭಿಕ ಹಂತದಲ್ಲಿ ದುಡುಕಿನ ಸಾಹಿತ್ಯ ಸೃಷ್ಟಿಯಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುವುದರಿಂದ ವಿದ್ಯಾಥರ್ಿಗಳಲ್ಲಿ ಸೇಜನಶೀಲತೆ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು.

  ಇದೇ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಚುಟುಕು ಕವಿಳಾದ ಸಂಗಣ್ಣ ಹೋತಪೇಟ, ವಿಜಯಭಾಸ್ಕರ್ರಿಗೆ ಚುಟುಕುರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
  ನಿವೃತ್ತ ಪ್ರಾಂಶುಪಾಲ ಎಸ್.ಎಸ್ ಜುಗೇರಿ, ಪ್ರಾಂಶುಪಾಲ ಶ್ರೀನಿವಾಸರಾವ ದೊಡ್ಡಮನಿ, ಶ್ರೀರಕ್ಷಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಡಾ. ಕೃಷ್ಣಮೂತರ್ಿ ಕುಲಕಣರ್ಿ ಮಲ್ಲಿಕಾಜರ್ುನ ಬೆಳಗೇರಿ, ಮಾಣಿಕರೆಡ್ಡಿ ಕುರಕುಂದಿ, ಮರೆಪ್ಪ ಚೆಟ್ಟೆರಕರ್, ಬೀರೇಶ ಚಿರತೆನೋರ್, ಹುಸೇನ್ ಬಾಷಾ ಕುರಕುಂದಿ, ರಿಯಾಜ್ ಅಹಮ್ಮದ್ ಕಲ್ಲೂರು, ಆರ್. ವಿಶ್ವನಾಥರೆಡ್ಡಿ ಅಬ್ಬೆತುಮಕೂರು, ಭೀಮು ಪೂಜಾರಿ ಇದ್ದರು.

  ಕವಿಗಳಾದ ಸಿದ್ದಪ್ಪ ಮುಷ್ಠುರ, ಖಾಸಿಂ ರೊಟ್ನಡಿಗಿ, ಭೀಮರೆಡ್ಡಿ, ನಬಿ ಕೋಡಲ, ದೇವಿಂದ್ರ ಧೋತ್ರೆ, ವೆಂಕಟೇಶ ಪೂಜಾರಿ, ಸಿದ್ದಪ್ಪ ಕಿರದಳ್ಳಿ, ನಿಂಗಪ್ಪಕುರಕುಂದಿ, ದೇವು ಬಳಿಚಕ್ರ, ಮಹೇಶ ಸ್ವಾಮಿ ಗದ್ವಾಲ ಸೈದಾಪೂರ, ವೆಂಕಟೇಶ ಗುತ್ತೇದಾರ, ಮಾರೇಶ ಸೇರಿದಂತೆ ಕಾಲೇಜು ವಿದ್ಯಾಥರ್ಿನಿಯರು ಪಾಲ್ಗೊಂಡು ಕವಿತೆ ವಾಚಿಸಿದರು. ಗುರುಪ್ರಸಾದ ವೈದ್ಯ ನಿರೂಪಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts