More

    VIDEO| ಶ್ರುತಿ ಹಾಸನ್​ ಜತೆ ಲಿಪ್‌ಲಾಕ್ ದೃಶ್ಯದಲ್ಲಿ ಗಾಯಕ ಸಂಜಿತ್ ಹೆಗ್ಡೆ!

    ಬೆಂಗಳೂರು: ಸಂಜಿತ್ ಹೆಗ್ಡೆ ಎಂದ ತಕ್ಷಣ ಮೊದಲಿಗೆ ನೆನಪಿಗೆ ಬರುವುದು ಅವರ ಮಧುರವಾದ ಕಂಠಸಿರಿ. ಸರೆಗಮಪ ರಿಯಾಲಿಟಿ ಶೋ ಮೂಲಕ ಹೊರಬಂದ ಈ ಕನ್ನಡದ ಪ್ರತಿಭೆ ಸ್ಯಾಂಡಲ್‌ವುಡ್ ಸೇರಿ ಸೌತ್ ಸಿನಿಮಾರಂಗದಲ್ಲಿನ ಹಲವು ಸಂಗೀತ ನಿರ್ದೇಶಕರ ಜತೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಇದೇ ಸಂಜಿತ್ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅದೇನೆಂದರೆ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಜತೆ ಲಿಪ್ ಲಾಕ್ ಮಾಡಿದ್ದಾರೆ!

    ಇದನ್ನೂ ಓದಿ: ಸಿಕ್ಸ್​ಪ್ಯಾಕ್​ಗೆ ನೋ ಎಂದ ವಿನೋದ್; ಇನ್ನು ಮುಂದೆ ದೇಹ ದಂಡಿಸದಿರಲು ನಿರ್ಧಾರ

    ಹೌದು, ಆ ಲಿಪ್‌ಲಾಕ್ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ನಿಜಕ್ಕೂ ಗಾಯಕ ಸಂಜಿತ್ ಹೌದಾ? ಎಂಬಷ್ಟರಮಟ್ಟಿಗೆ ವಿಡಿಯೋ ಸದ್ದು ಮಾಡುತ್ತಿದೆ. ಅಂದಹಾಗೆ, ಶ್ರುತಿ ಹಾಸನ್ ಜತೆಗೆ ತುಟಿಗೆ ತುಟಿ ಬೆಸೆದ ದೃಶ್ಯ ಇರುವುದು ‘ಪಿಟ್ಟ ಕಥಲು’ ಎಂಬ ಆ್ಯಂಥಾಲಜಿ ಚಿತ್ರದಲ್ಲಿ. ನಾಲ್ಕು ಕಥೆಗಳಿರುವ ತೆಲುಗಿನ ಆ್ಯಂಥಾಲಜಿ ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದು, ಅದರಲ್ಲಿ ಶ್ರುತಿ ಹಾಸನ್ ಅವರ ಸಂಚಿಕೆಯಲ್ಲಿ ಸಂಜಿತ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಗಾಯನದ ಜತೆಗೆ ನಟನೆಯತ್ತಲೂ ಮುಖ ಮಾಡಿದ್ದಾರೆ.


    ಮಹಾನಟಿ ಸಿನಿಮಾ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಶ್ರುತಿ ಹಾಸನ್ ಅವರ ಸಂಚಿಕೆಗೆ ನಿರ್ದೇಶನ ಮಾಡಿದ್ದಾರೆ. ಇನ್ನುಳಿದ ಮೂರು ಕಥೆಗಳಿಗೆ ನಂದಿನಿ ರೆಡ್ಡಿ, ಸಂಕಲ್ಪ ರೆಡ್ಡಿ, ತರುಣ್ ಭಾಸ್ಕರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ತಮಿಳಿನಲ್ಲಿ ಇತ್ತೀಚೆಗೆ ಬಂದಿದ್ದ ‘ಪಾವಾ ಕದೈಗಾಳ್’ ಚಿತ್ರವನ್ನೇ ತೆಲುಗಿನಲ್ಲಿ ರಿಮೇಕ್ ಮಾಡಲಾಗಿದ್ದು, ಫೆ. 19ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts