More

    ಪ್ರಭಾಸ್​ ಹೊಸ ಚಿತ್ರದಲ್ಲಿ ಸಂಜಯ್​ ದತ್​ … ಇನ್ನೊಂದು ನೆಗೆಟಿವ್​ ಪಾತ್ರದಲ್ಲಿ ‘ಅಧೀರ’?

    ಹೈದರಾಬಾದ್: ‘ಕೆಜಿಎಫ್​ 2’ ಚಿತ್ರದ ಯಶಸ್ಸಿನ ನಂತರ ಬಾಲಿವುಡ್​ ನಟ ಸಂಜಯ್​ ದತ್​ ಹೆಚ್ಚುಹೆಚ್ಚು ದಕ್ಷಿಣದ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅವರು ಧ್ರುವ ಅಭಿನಯದ ‘ಕೆಡಿ’ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಇದಲ್ಲದೆ, ವಿಜಯ್​ ಅಭಿನಯದ ಹೊಸ ತಮಿಳು ಚಿತ್ರದಲ್ಲೂ ಸಂಜಯ್​ ದತ್​ ನಟಿಸುತ್ತಿದ್ದಾರೆ ಎಂಬ ಸುದ್ದಿ ಇದೆ. ಇದೆಲ್ಲದರ ಮಧ್ಯೆ, ಅವರು ಪ್ರಭಾಸ್​ ಅಭಿನಯದ ಹೊಸ ತೆಲುಗು ಚಿತ್ರದಲ್ಲೂ ನಟಿಸುತ್ತಿದ್ದಾರಂತೆ.

    ಇದನ್ನೂ ಓದಿ: ಡಿ. 30ಕ್ಕೆ ನಾಲ್ಕರ ಜತೆಗೆ ಇನ್ನೊಂದು; ಈ ಚಿತ್ರಕ್ಕೆ ಕಥೆಯೇ ಹೀರೋ …

    ಹೌದು, ಮಾರುತಿ ನಿರ್ದೇಶನದ ಹೊಸ ಚಿತ್ರದಲ್ಲಿ ಪ್ರಭಾಸ್​ ನಾಯಕನಾಗಿ ನಟಿಸುತ್ತಿರುವ ಸುದ್ದಿ ಇತ್ತು. ಅಷ್ಟೇ ಅಲ್ಲ, ಈಗಾಗಲೇ ಹೈದರಾಬಾದ್​ನಲ್ಲಿ ಕೆಲವು ದಿನಗಳ ಚಿತ್ರೀಕರಣವೂ ಆಗಿದೆ. ಈ ಮಧ್ಯೆ, ಈ ಚಿತ್ರತಂಡಕ್ಕೆ ಸಂಜು ಬಾಬ ಸೇರ್ಪಡೆಯಾಗಿದೆಯಂತೆ. ಹಾಗಂತ ಟಾಲಿವುಡ್​ನಲ್ಲಿ ಸುದ್ದಿಯಾಗಿದೆ. ಇದಕ್ಕೂ ಮೊದಲು ಸ್ಯಾಂಡಲ್​ವುಡ್​ ಮತ್ತು ಕಾಲಿವುಡ್​ ಚಿತ್ರಗಳಲ್ಲಿ ಅಭಿನಯಿಸಿದ್ದ ಸಂಜಯ್​ ದತ್​, ಈಗ ಈ ಚಿತ್ರದ ಮೂಲಕ ಟಾಲಿವುಡ್​ಗೆ ಸಹ ಎಂಟ್ರಿ ಕೊಡುತ್ತಿರುವುದು ವಿಶೇಷ.

    ಬಾಲಿವುಡ್​ನಲ್ಲಿ ಹೀರೋ ಆಗಿ ಮಿಂಚಿದ್ದ ಸಂಜಯ್​ ದತ್​, ಈಗ ದಕ್ಷಿಣದ ಚಿತ್ರಗಳಲ್ಲಿ ವಿಲನ್​ ಆಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಈ ಚಿತ್ರದಲ್ಲೂ ಅವರು ವಿಲನ್​ ಆಗಿ ಮುಂದುವರೆಯುತ್ತಾರಾ? ಎಂಬ ಪ್ರಶ್ನೆ ಸಹಜ. ಫಾರ್​ ಎ ಚೇಂಜ್​, ಸಂಜಯ್​ ದತ್​ ಈ ಚಿತ್ರದಲ್ಲಿ ವಿಲನ್​ ಪಾತ್ರ ಮಾಡುತ್ತಿಲ್ಲವಂತೆ. ಬದಲಿಗೆ ಒಂದು ಪಾಸಿಟಿವ್ ಆದ ಮತ್ತು ಅಷ್ಟೇ ಪ್ರಮುಖವಾದ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇದೆ.

    ಇದನ್ನೂ ಓದಿ: ಬೆಳಿಗ್ಗೆ 5ಕ್ಕೇ ಶುರುವಾಗಲಿದೆ ‘ವೇದ’ ಚಿತ್ರದ ಮೊದಲ ಪ್ರದರ್ಶನ

    ಸದ್ಯ ಪ್ರಶಾಂತ್ ನೀಲ್​ ನಿರ್ದೇಶನದ ‘ಸಲಾರ್​’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಪ್ರಭಾಸ್​, ಆ ನಂತರ ‘ಪ್ರಾಜೆಕ್ಟ್​ ಕೆ’ ಚಿತ್ರದ ಚಿತ್ರೀಕರಣ ಮುಗಿಸಿ, ಆ ನಂತರ ಈ ಹೊಸ ಚಿತ್ರದಲ್ಲಿ ತಮ್ಮ ಭಾಗದ ಚಿತ್ರೀಕರಣ ಮುಗಿಸಲಿದ್ದಾರ ಎಂದು ಹೇಳಲಾಗುತ್ತಿದೆ.

    ಈ ವರ್ಷ ಯಾವ ಚಿತ್ರದ ಗಳಿಕೆ ಎಷ್ಟು? ಇಲ್ಲಿದೆ ಟಾಪ್​ 5 ಪಟ್ಟಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts