More

    ‘ಜವಾನ್​’ ಜತೆಗೆ ಸಂಜಯ್​ ದತ್​; ಶಾರುಖ್​ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟನೆ

    ಮುಂಬೈ: ‘ಮುನ್ನಾಭಾಯ್​’ ಖ್ಯಾತಿಯ ಸಂಜಯ್​ ದತ್​ ಈಗ ಸಖತ್​ ಸಕ್ರಿಯವಾಗಿದ್ದಾರೆ. ಈಗಾಗಲೇ ಕನ್ನಡದ ‘ಕೆಡಿ’, ತಮಿಳಿನ ‘ಲಿಯೋ’, ಹಿಂದಿಯ ‘ದಿ ಗುಡ್​ ಮಹಾರಾಜ’, ‘ಗುಡ್​ಚಡಿ’, ‘ಬಾಪ್​’ ಸೇರಿದಂತೆ ಐದಾರು ಚಿತ್ರಗಳಲ್ಲಿ ನಟಿಸುತ್ತಿರುವ ಅವರು, ಇದೀಗ ಇನ್ನೂ ಒಂದು ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಅದೇ ‘ಜವಾನ್​’.

    ಇದನ್ನೂ ಓದಿ: ಮಿನುಗುತಾರೆಯೊಂದಕ್ಕೆ ಅಪ್ಪು ಹೆಸರು; ನಕ್ಷತ್ರವಾದ ಪುನೀತ್​

    ಅಟ್ಲಿ ನಿರ್ದೇಶನದ ‘ಜವಾನ್​’ ಚಿತ್ರದಲ್ಲಿ ಶಾರುಖ್​ ಖಾನ್​ ಜವಾನ್​ ಆಗಿ ನಟಿಸುತ್ತಿರುವುದು ಗೊತ್ತೇ ಇದೆ. ನಯನತಾರಾ, ಪ್ರಿಯಾಮಣಿ, ವಿಜಯ್​ ಸೇತುಪತಿ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಇದೀಗ ಸಂಜಯ್​ ದತ್​ ಸೇರ್ಪಡೆಯಾಗಿದೆ. ನಿನ್ನೆ ಸೋಮವಾರ, ಸಂಜಯ್​ ದತ್​ ಭಾಗದ ಚಿತ್ರ ಚಿತ್ರೀಕರಣ ಪ್ರಾರಂಭವಾಗಿದ್ದು, ಮುಂದಿನ ಐದಾರು ದಿನಗಳ ಚಿತ್ರೀಕರಣ ನಡೆಯಲಿದೆ.

    ಇತ್ತೀಚಿನ ದಿನಗಳಲ್ಲಿ ಸಂಜಯ್​ ದತ್​ ಸಾಕಷ್ಟು ಚಿತ್ರಗಳಲ್ಲಿ ನೆಗೆಟಿವ್​ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಿರುವಾಗ, ‘ಜವಾನ್​’ ಚಿತ್ರದಲ್ಲಿ ಅವರ ಪಾತ್ರವೇನಿರಬಹುದು ಎಂಬ ಪ್ರಶ್ನೆ ಸಹಜ. ಈ ಚಿತ್ರದಲ್ಲಿ ಅವರು ನೆಗೆಟಿವ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೋ ಅಥವಾ ಪಾಸಿಟಿವ್​ ಪಾತ್ರವೋ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆದರೆ, ಚಿತ್ರತಂಡ ಇದಕ್ಕೆ ಉತ್ತರಿಸಿಲ್ಲ. ಸಂಜಯ್​ ದತ್​ ಅವರದ್ದು ಅತಿಥಿ ಪಾತ್ರ ಎಂದು ಹೇಳಲಾಗುತ್ತಿದೆಯೇ ಹೊರತು, ಅವರ ಪಾತ್ರವೇನು ಎಂಬ ರಹಸ್ಯವನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ.

    ಇದನ್ನೂ ಓದಿ: ಧನುಷ್​ ಜತೆ ಮೀನಾ ಮದುವೆಯಂತೆ! ಸ್ಫೋಟಕ ಮಾಹಿತಿ ಬಿಚ್ಚಿಟ್ಟ ತಮಿಳು ನಟ…

    ಇದಕ್ಕೂ ಮುನ್ನ, ಶಾರುಖ್​ ಖಾನ್​ ಅಭಿನಯದ ‘ರಾ ಒನ್​’ ಚಿತ್ರದಲ್ಲಿ ಸಂಜಯ್​ ದತ್​ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈಗ ಒಂದು ದಶಕದ ನಂತರ ಪುನಃ ಶಾರುಖ್​ ಖಾನ್​ ಮತ್ತು ಸಂಜಯ್​ ದತ್​ ಜತೆಯಾಗಿ ನಟಿಸುತ್ತಿದ್ದಾರೆ. ಅಂದಹಾಗೆ, ‘ಜವಾನ್​’ ಚಿತ್ರವು ಜೂನ್​ 02ರಂದು ಬಿಡುಗಡೆಯಾಗಲಿದೆ ಎಂದು ಘೋಷಣೆಯಾಗಿತ್ತು. ಈಗ ಚಿತ್ರ ಸ್ವಲ್ಪ ವಿಳಂಬವಾಗುತ್ತಿರುವುದರಿಂದ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

    ಹಿಂದುತ್ವದ ಬಗ್ಗೆ ಅವಹೇಳನಕಾರಿ ಪೋಸ್ಟ್; ನಟ ಚೇತನ್​ಗೆ 14 ದಿನ ನ್ಯಾಯಾಂಗ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts