More

    ‘ಕೆಜಿಎಫ್’​ ಚಿತ್ರದ ಶೂಟಿಂಗ್​ಗೆ ಸಜ್ಜಾಗುತ್ತಿದ್ದಾರೆ ಅಧೀರ

    ಬೆಂಗಳೂರು: ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡಿರುವ ‘ಕೆಜಿಎಫ್’ ಚಾಪ್ಟರ್2 ತಂಡ ಸದ್ಯ ಸಂಜಯ್​ ದತ್ ಆಗಮನದ ನಿರೀಕ್ಷೆಯಲ್ಲಿದೆ. ಇದೀಗ ಕ್ಯಾನ್ಸ್​ರ್​ನಿಂದ ಗುಣಮುಖವಾಗಿ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಉತ್ಸಾಹವನ್ನು ಸ್ವತಃ ಸಂಜಯ್​ ದತ್ ತೋರಿಸಿದ್ದರು. ಹಾಗಾದರೆ, ಅವರ ಭಾಗದ ಶೂಟಿಂಗ್ ಯಾವಾಗ? ದತ್ ಚಿತ್ರತಂಡವನ್ನು ಸೇರಿಕೊಳ್ಳುವುದು ಯಾವತ್ತು ಈ ಎಲ್ಲ ಪ್ರಶ್ನೆಗಳಿಗೆ ಚಿತ್ರತಂಡವೇ ಉತ್ತರಿಸಿದೆ.

    ಇದನ್ನೂ ಓದಿ:  ಗರ್ಭಿಣಿ ಕರೀನಾ ಕಪೂರ್​ ಮನೆಯಲ್ಲಿ ದೀಪಾವಳಿ ಸಂಭ್ರಮ ಶುರು

    ಈ ನಡುವೆ, ಕ್ಯಾನ್ಸರ್ ಹಿನ್ನೆಲೆಯಲ್ಲಿ ಸಂಜಯ್ ದತ್ ದೈಹಿಕವಾಗಿ ಕೊಂಚ ಕುಗ್ಗಿದ್ದಾರೆ. ಇದೀಗ ಅದಕ್ಕಾಗಿ ಒಂದಷ್ಟು ವರ್ಕೌಟ್​ ಶುರು ಮಾಡಿದ್ದು, ಫಿಟ್​ ಆ್ಯಂಡ್​ ಫೈನ್​ ಆಗುತ್ತಿದ್ದಾರೆ. ಬಾಲಿವುಡ್​ನ ಕೆಲ ಮೂಲಗಳ ಪ್ರಕಾರ, ಕೆಜಿಎಫ್​ ಚಿತ್ರದ ಸಲುವಾಗಿ ಮತ್ತೆ ಒಂದಷ್ಟು ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಮೊದಲಿಗಿಂತ ತುಂಬ ಆ್ಯಕ್ಟಿವ್​ ಆಗಿದ್ದಾರೆ. ಎನರ್ಜಿಯೂ ದ್ವಿಗುಣವಾಗಿದೆಯಂತೆ.

    ಸದ್ಯ ಚಿತ್ರದ ಕ್ಲೈಮ್ಯಾಕ್ಸ್​ ಹಂತ ಬಹುಮುಖ್ಯವಾಗಿದ್ದು, ನಾಯಕ ಮತ್ತು ಖಳನಾಯಕನ ದೊಡ್ಡ ಮಟ್ಟದ ಕಾಳಗ ಇರಲಿದೆ. ಅದಕ್ಕಾಗಿ ಯಶ್​ ಈಗಾಗಲೇ ದೇಹವನ್ನು ಮತ್ತಷ್ಟು ಹುರಿಗೊಳಿಸಿದ್ದಾರೆ. ಇದೀಗ ಸಂಜಯ್​ ದತ್ ಸಹ ದೈಹಿಕವಾಗಿ ಬಲಿಷ್ಠರಾಗುತ್ತಿದ್ದಾರಂತೆ.

    ಇದನ್ನೂ ಓದಿ: ವೀಕ್ಷಣೆಯಲ್ಲಿ ‘ದಿಲ್​ ಬೇಚಾರಾ’ ದಾಖಲೆಯನ್ನು ಮುರಿದ ‘ಲಕ್ಷ್ಮೀ’

    ಅಂದಹಾಗೆ, ಪ್ರಶಾಂತ್​ ನೀಲ್​ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕೆಜಿಎಫ್​ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ. ಹೊಂಬಾಳೆ ಫಿಲಂಸ್​ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಮಾರ್ಚ್​ ಅಥವಾ ಏಪ್ರಿಲ್​ಗೆ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.

    ನಾಟಿ ಸ್ಟೈಲ್​ ಹಾಡಿಗೆ ಬಿರಾದಾರ್​ ಡ್ಯಾನ್ಸ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts