More

    ಗಂಡನೇ ನನಗೆ ಸ್ಫೂರ್ತಿ … ಡಾಕ್ಟರ್ಸ್ ಡೇಗೆ ಪತಿಯ ಜೊತೆಗಿನ ಫೋಟೋ ಶೇರ್ ಮಾಡಿದ ಸಂಜನಾ

    ಬೆಂಗಳೂರು: ಕಳೆದ ವರ್ಷ ಡಾ. ಅಜೀಜ್​ ಪಾಷ ಅವರನ್ನು ಮದುವೆಯಾದಾದ ನಂತರ, ಅವರ ಬಗ್ಗೆ ಹೆಚ್ಚು ಮಾತನಾಡಿರಲಿಲ್ಲ ನಟಿ ಸಂಜನಾ. ಈಗ ವೈದ್ಯರ ದಿನದ ಅಂಗವಾಗಿ ಅವರ ಜತೆಗಿರುವ ಒಂದು ಫೋಟೋ ಶೇರ್​ ಮಾಡುವುದರ ಜತೆಗೆ, ಗಂಡನೇ ತಮ್ಮ ಸ್ಫೂರ್ತಿ ಎಂದು ಅವರು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ‘ಕೆಜಿಎಫ್ 2’ ಚಿತ್ರದ ಆಡಿಯೋ ಹಕ್ಕು ಲಹರಿ ಮಡಿಲಿಗೆ …

    ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ‘ಈ ಜಗತ್ತಿನಲ್ಲಿ ಡಾಕ್ಟರ್​ಗಳೇ ನಿಜವಾದ ಹೀರೋಗಳು. ಇದನ್ನು ಅವರು ಕರೊನಾ ಸಮಯದಲ್ಲಿ ನಿರೂಪಿಸಿದ್ದಾರೆ. ದೇವರ ನಂತರ, ಮನುಕುಲದ ಜತೆಗೆ ಗಟ್ಟಿಯಾಗಿ ನಿಲ್ಲುವುದರ ಜತೆಗೆ, ತಮ್ಮ ಜೀವನವನ್ನೇ ಪಣಕ್ಕಿಟ್ಟು ಯಾರಾದರೂ ಹೋರಾಡಿದ್ದಾರೆ ಎಂದರೆ ಅದು ವೈದ್ಯರು. ಜಗತ್ತಿನಾದ್ಯಂತ ಸಾವಿರಾರು ವೈದ್ಯರು, ನರ್ಸ್​ಗಳು ಮತ್ತು ಆಸ್ಪತ್ರೆಯವರು ತಮ್ಮ ಜೀವನವನ್ನೇ ಪಕ್ಕಕ್ಕಿಟ್ಟು ಇಂತಹ ಸಮಯದಲ್ಲಿ ಮನುಕುಲದ ಸೇವೆ ಮಾಡಿದ್ದಾರೆ. ಮನೆಯಲ್ಲಿ ಸುರಕ್ಷಿತವಾಗಿರುವ ಸಮಯದಲ್ಲಿ, ಜೀವಭಯವನ್ನು ಲೆಕ್ಕಿಸದೆ ಕರೊನಾ ವಿರುದ್ಧ ಹೋರಾಡಿದ್ದಾರೆ’ ಎಂದಿದ್ದಾರೆ.

    ‘ನನ್ನ ಗಂಡ ವ್ಯಾಸ್ಕುಲಾರ್​ ಸರ್ಜನ್​ ಆಗಿ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ ಒಂದು ದಿನವಾದರೂ ರಜೆ ತೆಗೆದುಕೊಳ್ಳಿ, ಸ್ವಲ್ಪ ರಿಲ್ಯಾಕ್ಸ್​ ಆಗಿ ಎಂದು ಹಲವು ಬಾರಿ ಹೇಳಿದ್ದೇನೆ. ಆದರೆ, ತಮ್ಮ ಕೆಲಸ ಜನರನ್ನು ರಕ್ಷಿಸುವುದು ಮತ್ತು ಅದೇ ತಮ್ಮ ಮೊದಲ ಆದ್ಯತೆ ಎಂದು ಹೇಳಿದ್ದಾರೆ. ಈ ವಿಷಯವಾಗಿ ನಮ್ಮಿಬ್ಬರಲ್ಲಿ ವಾದ ನಡೆಯುತ್ತಲೇ ಇರುತ್ತದೆ. ಆದರೆ, ಅವರ ಕರ್ತವ್ಯಪ್ರಜ್ನೆ ಮತ್ತು ಬದ್ಧತೆಯ ಬಗ್ಗೆ ನನಗೆ ಬಹಳ ಗೌರವ, ಪ್ರೀತಿ ಮತ್ತು ಹೆಮ್ಮೆ ಇದೆ. ನನ್ನನ್ನು ಸ್ಫೂರ್ತಿಗೊಳಿಸಿದ್ದಿಕ್ಕೆ, ನನಗೆ ಶಕ್ತಿ ತುಂಬಿದ್ದಿಕ್ಕೆ ಮತ್ತು ಲಾಕ್​ಡೌನ್​ ನಡುವೆಯೂ ಹಗಲು-ರಾತ್ರಿ ಕಷ್ಟದಲ್ಲಿರುವವರ ಪರವಾಗಿ ನಿಂತಿದ್ದಿಕ್ಕೆ ಅವರಿಗೆ ನನ್ನದೊಂದು ದೊಡ್ಡ ಸೆಲ್ಯೂಟ್​’ ಎನ್ನುತ್ತಾರೆ ಸಂಜನಾ.

    ಇದನ್ನೂ ಓದಿ: ಶ್ರೇಯಸ್​ ಮಂಜು ಅಭಿನಯದ ಹೊಸ ಚಿತ್ರ ‘ರಾಣಾ’ … ಜುಲೈ 07ಕ್ಕೆ ಮುಹೂರ್ತ

    ಜಗತ್ತಿನಾದ್ಯಂತ ಲಕ್ಷಾಂತರ ಜನರ ಜೀವವನ್ನು ಉಳಿಸಿದ ಮತ್ತು ಹಗಲು-ರಾತ್ರಿ ಕೆಲಸ ಮಾಡುತ್ತಿರುವ ಎಲ್ಲ ರಿಯಲ್​ ಹೀರೋಗಳಿಗೆ ಅವರು ವೈದ್ಯರ ದಿನದ ಶುಭಾಶಯಗಳನ್ನು ತಿಳಿಸುವುದರ ಜತೆಗೆ, ವೈದ್ಯರೊಬ್ಬರ ಹೆಂಡತಿಯಾಗಿರುವುದಕ್ಕೆ ತಮಗೆ ಹೆಮ್ಮೆ ಎಂನಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.

    ನಟ ಜಗ್ಗೇಶ್ ಪುತ್ರ ಪ್ರಯಾಣಿಸುತ್ತಿದ್ದ ಐಷಾರಾಮಿ ಕಾರು ಅಪಘಾತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts