More

    ವಿಶ್ವಕಪ್​ ಫೈನಲ್​ ಫಿಕ್ಸಿಂಗ್​ ಪ್ರಕರಣದ ವಿಚಾರಣೆಗಾಗಿ ಸಂಗಕ್ಕರ, ಜಯವರ್ಧನೆಗೆ ಬುಲಾವ್​

    ಕೊಲಂಬೊ: ಭಾರತ ಗೆಲುವು ದಾಖಲಿಸಿದ 2011ರ ಏಕದಿನ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯ ಫಿಕ್ಸ್​ ಆಗಿತ್ತು ಎಂದು ಶ್ರೀಲಂಕಾದ ಮಾಜಿ ಕ್ರೀಡಾ ಸಚಿವರ ಆರೋಪದ ಬೆನ್ನಲ್ಲೇ ಈ ಬಗ್ಗೆ ತನಿಖೆ ಆರಂಭಗೊಂಡಿತ್ತು. ಇದೀಗ ಈ ಪ್ರಕರಣದಲ್ಲಿ ಶ್ರೀಲಂಕಾ ತಂಡದ ಮಾಜಿ ನಾಯಕರಾದ ಕುಮಾರ ಸಂಗಕ್ಕರ ಮತ್ತು ಮಹೇಲಾ ಜಯವರ್ಧನೆಗೆ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ದಳ ಸೂಚಿಸಿದೆ.

    ವಿಶ್ವಕಪ್​ ಫೈನಲ್​ ಪಂದ್ಯವನ್ನು ಕೆಲವರು ಸೇರಿ ಫಿಕ್ಸ್​ ಮಾಡಿದ್ದರು ಎಂದು ಮಾಜಿ ಸಚಿವ ಮಹಿಂದಾನಂದ ಅಲುತಗಮಗೆ ಕಳೆದ ತಿಂಗಳು ಆರೋಪಿಸಿದ್ದರು. ಬಳಿಕ ವಿಚಾರಣೆಯ ವೇಳೆ ಅವರು, ತಮ್ಮ ಬಳಿಕ ಯಾವುದೇ ಸಾಕ್ಷ್ಯ ಇಲ್ಲ. ಇದು ತಮ್ಮ ಅನುಮಾನವಷ್ಟೇ ಎಂದು ಹೇಳಿದ್ದರು. ಶ್ರೀಲಂಕಾ ಸರ್ಕಾರದ ಆದೇಶದಂತೆ ಪ್ರಕರಣದ ತನಿಖೆ ನಡೆಯುತ್ತಿದೆ. ಹೀಗಾಗಿ ಆಗಿನ ಲಂಕಾ ತಂಡದ ನಾಯಕ ಕುಮಾರ ಸಂಗಕ್ಕರಗೆ ವಿಚಾರಣೆಗೆ ಹಾಜರಾಗಿ ವಿವರಣೆಗಳನ್ನು ನೀಡುವಂತೆ ಸೂಚಿಸಲಾಗಿದೆ. ಸಂಗಕ್ಕರಗೆ ಗುರುವಾರ ಬೆಳಗ್ಗೆ 9 ಗಂಟೆಗೆ ವಿಚಾರಣೆ ಎದುರಿಸಲು ಕೇಳಿಕೊಳ್ಳಲಾಗಿದೆ. ಜಯವರ್ಧನೆ 2011ರ ವಿಶ್ವಕಪ್​ ಫೈನಲ್​ನಲ್ಲಿ ಶತಕವೀರರಾಗಿದ್ದರು. ಇವರಿಬ್ಬರು ಈಗಾಗಲೆ ಪತ್ರಿಕಾ ಹೇಳಿಕೆಗಳಲ್ಲಿ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

    ಇದನ್ನೂ ಓದಿ: ಭಾರತದಲ್ಲಿ ‘ಫೇರ್​ ಆ್ಯಂಡ್​ ಲವ್ಲೀ’ ಯಾಕಿದೆ? ವಿಂಡೀಸ್​ ಕ್ರಿಕೆಟಿಗ ಸ್ಯಾಮ್ಮಿ ಪ್ರಶ್ನೆ ಎತ್ತಿದ್ದೇಕೆ?

    ಫೈನಲ್​ ಪಂದ್ಯಕ್ಕೆ ಲಂಕಾ ತಂಡದಲ್ಲಿ 4 ಬದಲಾವಣೆಗಳನ್ನು ಮಾಡಲಾಗಿತ್ತು. ಆದರೆ ಏಂಜೆಲೊ ಮ್ಯಾಥ್ಯೂಸ್​ ಮತ್ತು ಮುತ್ತಯ್ಯ ಮುರಳೀಧರನ್​ ಸೆಮಿಫೈನಲ್​ ಪಂದ್ಯದ ವೇಳೆ ಗಾಯಗೊಂಡಿದ್ದ ಕಾರಣದಿಂದಾಗಿ ಈ ಬದಲಾವಣೆಗಳನ್ನು ಮಾಡಲಾಗಿತ್ತು ಎಂದು ಸಂಗಕ್ಕರ ಮತ್ತು ಜಯವರ್ಧನೆ ಈ ಹಿಂದೆಯೇ ಸ್ಪಷ್ಟಪಡಿಸಿದ್ದರು. ಮುರಳೀಧರನ್​ ಪೂರ್ಣ ಫಿಟ್​ ಆಗಿರದಿದ್ದರೂ ಪಂದ್ಯದಲ್ಲಿ ಆಡಿದ್ದರು.

    ಈ ಮುನ್ನ ಶ್ರೀಲಂಕಾದ ಮಾಜಿ ಬ್ಯಾಟ್ಸ್​ಮನ್​ ಅರವಿಂದ ಡಿಸಿಲ್ವಾ ಮತ್ತು ಆರಂಭಿಕ ಬ್ಯಾಟ್ಸ್​ಮನ್​ ವಿಚಾರಣೆಗೆ ಹಾಜರಾಗಿದ್ದರು. 1996ರ ವಿಶ್ವಕಪ್​ ಗೆಲುವಿನ ಹೀರೋ ಅರವಿಂದ ಡಿಸಿಲ್ವಾ 2011ರ ವಿಶ್ವಕಪ್​ ವೇಳೆ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗೆ ಮುನ್ನ ಪ್ರಚಾರ ಗಿಟ್ಟಿಸಿಕೊಳ್ಳುವ ಸಲುವಾಗಿ ಅಲುತಗಮಗೆ ಈ ಆರೋಪ ಮಾಡಿದ್ದಾರೆ ಎಂದು ದೂರಲಾಗಿದೆ.

    ಟಿಕ್​ಟಾಕ್​ ಬ್ಯಾನ್​ ಆಗಿದ್ದಕ್ಕೆ ಸಂಭ್ರಮಿಸಿದ ಶೂಟರ್​ ಹೀನಾ ಸಿಧು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts