More

    ವಿದ್ಯಾರ್ಥಿಗಳು ಸಾಧಕರ ಆದರ್ಶ ಪಾಲಿಸಲಿ – ಮುಖ್ಯ ಶಿಕ್ಷಕ ಧರಿಯಪ್ಪ ರಾಥೋಡ್ ಕಿವಿಮಾತು

    ಸಂಡೂರು: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಜತೆಗೆ ಬುದ್ಧ, ಬಸವ, ಅಂಬೇಡ್ಕರ್ ಸೇರಿ ಅನೇಕ ಸಾಧಕರ ಆದರ್ಶಗಳನ್ನು ಪಾಲಿಸಬೇಕು ಎಂದು ತಾಲೂಕಿನ ತೋರಣಗಲ್‌ನ ಶ್ರೀಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಧರಿಯಪ್ಪ ರಾಥೋಡ್ ಕಿವಿಮಾತು ಹೇಳಿದರು.

    ಶಾಲೆಯಲ್ಲಿ ಆಯೋಜಿಸಿದ್ದ ಹದಿಹರೆಯದವರ ಆರೋಗ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್. ಎಂ. ವಿಶ್ವೇಶ್ವರಯ್ಯ, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದರು, ವರಕವಿ ದ.ರಾ.ಬೇಂದ್ರೆ, ರಾಷ್ಟ್ರಕವಿ ಕುವೆಂಪು ಮೊದಲಾದವರು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಆಗ ಉತ್ತಮ ಪ್ರಜೆಯಾಗಲು ಸಾಧ್ಯ, ಅವಶ್ಯಕ್ಕೆ ಅನುಸಾರ ಹೊಸ ಹೊಸ ತಂತ್ರಜ್ಞಾನ ಬಳಸಬೇಕು. ಆದರೆ, ಮೊಬೈಲ್ ಬಳಕೆ ಚಟವಾಗಬಾರದು ಎಂದರು.

    ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಪ್ರೌಢಾವಸ್ಥೆಯಲ್ಲಿ ಸಹಜವಾಗಿ ಬರುವ ತೊಂದರೆಗಳನ್ನು ದೂರಮಾಡಲು ಆರ್‌ಕೆಎಸ್‌ಕೆ ಕಾರ್ಯಕ್ರಮದಡಿ ಸ್ನೇಹಾ ಕ್ಲಿನಿಕ್, ಆರೋಗ್ಯ ಸಹಾಯವಾಣಿ ಯೋಜನೆಗಳಿದ್ದು, ಅವುಗಳ ಸಹಾಯ ಪಡೆದುಕೊಳ್ಳಬೇಕು. ಪೌಷ್ಟಿಕ ಆಹಾರ, ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಮಾನಸಿಕ ಒತ್ತಡ ನಿವಾರಣೆಗೆ ಧ್ಯಾನ, ಪ್ರಾಣಾಯಾಮವನ್ನು ಅಭ್ಯಾಸ ಮಾಡಿಕೊಳ್ಳಬೇಕು. ಕೆಟ್ಟ ಚಟಗಳ ಗೋಜಿಗೆ ಹೋದರೆ ಬಾಳು ನಾಶವಾಗುವುದು ಖಚಿತ ಎಂದರು.

    ತೋರಣಗಲ್ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಯಾಸ್ಮಿನ್ ಮಾತನಾಡಿದರು. ಆಪ್ತ ಸಮಾಲೋಚಕ ಪ್ರಶಾಂತ್, ಶಿಕ್ಷಕರಾದ ಹೇಮಪ್ರಭ, ಶರಣಬಸವ, ವಿರೂಪಾಕ್ಷಪ್ಪ, ಮಹಾಂತೇಶ್, ಅಶೋಕ್, ಶಾರದಾ, ರೇಖಾ, ಮಾಲಾ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts