More

    ಡೆಂಘೆ ಬಗ್ಗೆ ಜಾಗೃತಿ ಇರಲಿ ಎಂದ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ

    ಸಂಡೂರು: ಕಾಯಿಲೆ ಬಂದು ತೊಂದರೆ ಅನುಭವಿಸುವುದಕ್ಕಿಂತ ಜಾಗೃತಿಯಿಂದ ಡೆಂಘೆ ತಡೆಯಬಹುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಹೇಳಿದರು.
    ತಾಲೂಕಿನ ತೋರಣಗಲ್ ಗ್ರಾಮದ ಗುಂಪು ಸಭೆಯಲ್ಲಿ ಡೆಂಘೆ ಜಾಗೃತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

    ಮುಖ್ಯವಾಗಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ಎಚ್ಚರವಹಿಸಬೇಕು. ಮನೆಗಳಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿಯಾಗುತ್ತವೆ. ವಯಸ್ಕ ಹೆಣ್ಣು ಸೊಳ್ಳೆಗಳು ಒಂದು ದಿನಕ್ಕೆ 150 ರಿಂದ 200 ಮೊಟ್ಟೆಗಳನ್ನು ನೀರು ಶೇಖರಣೆ ಮಾಡಿದ ಗಚ್ಚು, ತೊಟ್ಟಿ, ಡ್ರಮ್‌ಗಳಲ್ಲಿ ಇಡುತ್ತವೆ. ಇಟ್ಟ ಮೊಟ್ಟೆಗಳು ಎರಡು ದಿನಕ್ಕೆ ಲಾರ್ವಾ ಹಂತಕ್ಕೆ ಬಂದು ಎಂಟು ದಿನಕ್ಕೆ ಸೊಳ್ಳೆಗಳಾಗಿ ಹೊರ ಬರುತ್ತವೆ. ವಾರಕ್ಕೊಮ್ಮೆ ನೀರು ಶೇಖರಣ ತೊಟ್ಟಿಗಳನ್ನು ಬ್ರಷ್‌ನಿಂದ ಉಜ್ಜಿ ಸ್ವಚ್ಛ್ಚಗೊಳಿಸಿ ಒಣಗಿಸಿ ನೀರು ತುಂಬಿಸಿ ಮುಚ್ಚಳದಿಂದ ಮುಚ್ಚಿಡಬೇಕು. ಮನೆಯ ಪರಿಸರ ಸ್ವಚ್ಛವಾಗಿ ಇಡಬೇಕು. ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಬೇಕು. ಜ್ವರ, ತಲೆ ನೋವು, ವಾಂತಿ, ಕೀಲು ನೋವು, ಕಣ್ಣಿನ ಹಿಂಭಾಗ ನೋವಿನ ಲಕ್ಷಣಗಳು ಕಂಡು ಬಂದರೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಿ. ಸ್ವಯಂ ಚಿಕಿತ್ಸೆ ಬೇಡ. ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಿ, ಮಸ್ಕಿಟೋ ಕಾಯಿಲ್, ಕ್ರೀಮ್ ಬಳಸಿ ಎಂದು ತಿಳಿಸಿದರು.

    ಗ್ರಾಪಂ ಸದಸ್ಯೆ ಎನ್.ನಿಂಗಮ್ಮ ಮಾತನಾಡಿ, ಗ್ರಾಪಂನ ಎಲ್ಲ ವಾರ್ಡ್‌ಗಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮ ಮಾಡಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts