More

    62.40 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

    ಸಂಡೂರು: ಇಲ್ಲಿನ ಕೆ.ಎಸ್.ವೀರಭದ್ರಪ್ಪ ಸಭಾಂಗಣದಲ್ಲಿ ಶುಕ್ರವಾರ ಪುರಸಭೆ ಅಧ್ಯಕ್ಷೆ ಅನಿತಾ ವಸಂತಕುಮಾರ್, 2023-24ನೇ ಸಾಲಿನಲ್ಲಿ 62.40 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.

    ಪ್ರಾರಂಭಿಕ ಶಿಲ್ಕು 11,53,46,500 ರೂ, ಒಟ್ಟು ಜಮಾ ಮೊತ್ತ 19,94,71,500 ರೂ., 2023-24ನೇ ಸಾಲಿನ ಲಭ್ಯವಾಗುವ 31,48,18,000 ರೂ. ಹಾಗೂ ಪ್ರಗತಿ ಕಾರ್ಯಗಳ ಪಾವತಿಗಾಗಿ ಕಾಯ್ದಿರಿಸಿದ ಮೊತ್ತ 30,85,78000 ರೂ. ಗಳಾಗಿರುತ್ತದೆ ಎಂದು ತಿಳಿಸಿದರು.

    ಆದಾಯ ಮೂಲಗಳು: ಆಸ್ತಿ ತೆರಿಗೆಯಿಂದ 92.40 ಲಕ್ಷ ರೂ, ನೀರಿನ ತೆರಿಗೆ 62.40 ಲಕ್ಷ ರೂ, ಮಳಿಗೆ ಬಾಡಿಗೆ 22.50 ಲಕ್ಷ ರೂ, 15ನೇ ಹಾಣಕಾಸು ಆಯೋಗ ಆನುದಾನ 249 ಲಕ್ಷ ರೂ, ಎಸ್‌ಎಫ್‌ಸಿ ಮುಕ್ತ ನೀಧಿ 120 ಲಕ್ಷ ರೂ, ಎಸ್‌ಎಫ್‌ಸಿ ವೇತನ ಅನುದಾನ 315 ಲಕ್ಷ ರೂ, ಎಸ್‌ಎಫ್‌ಸಿ ವಿದ್ಯುತ್ ಅನುದಾನ 460 ಲಕ್ಷ ರೂ, ಪುರಸಭೆ ಇತರ ಸೇವೆಗಳಿಂದ 95.80 ಲಕ್ಷ ರೂ. ಆದಾಯ ಬರಬಹುದಾಗಿದೆ.

    ಕಾಯ್ದಿರಿಸಿದ ವೆಚ್ಚಗಳು: ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ 440 ಲಕ್ಷ ರೂ, ಸಾರ್ವಜನಿಕ ಬೀದಿ ದೀಪಗಳ ಅಭಿವೃದ್ಧಿಗೆ 246 ಲಕ್ಷ ರೂ, ರುದ್ರಭೂಮಿ ಹಾಗೂ ಪಾರ್ಕುಗಳ ಅಭಿವೃದ್ಧಿ 85 ಲಕ್ಷ ರೂ, ವಾಹನ ಮತ್ತು ಆಧುನಿಕ ಸಲಕರಣೆ ಖರೀದಿ 117 ಲಕ್ಷ ರೂ, ಕಟ್ಟಡ ಹಾಗೂ ಇತರ ನಾಗರಿಕ ವಿನ್ಯಾಸ 166 ಲಕ್ಷ ರೂ, ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ 236.50 ಲಕ್ಷ ರೂ, ಕುಡಿವ ನೀರು, ಒಳಚರಂಡಿ 426.50 ಲಕ್ಷ ರೂ, ಎಸ್ಸಿ, ಎಸ್ಟಿ ಇತರ ಹಿಂದುಳಿದ ಜನಾಂಗ ಮತ್ತು ಅಂಗವಿಕಲರ ಅಭಿವೃದ್ಧಿಗಾಗಿ 51.03 ಲಕ್ಷ ರೂ, ನೌಕರರು, ಸಿಬ್ಬಂದಿ ವೇತನ ಪಾವತಿಗೆ 327.50 ಲಕ್ಷ ರೂ. ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.

    ಪುರಸಭೆ ಸದಸ್ಯೆ ರವಿಕಾಂತ್ ಬೋಸ್ಲೆ ಮಾತನಾಡಿ, 22.50 ಲಕ್ಷ ರೂ. ವಾಣಿಜ್ಯ ಮಳಿಗೆಗಳ ಬಾಡಿಗೆ ಹಣ ಬರಬೇಕಿದ್ದು, ಬಾಡಿಗೆದಾರರಿಗೆ ಲೀಗಲ್ ನೋಟಿಸ್ ನೀಡುವಂತೆ ಸಲಹೆ ನೀಡಿದರು.
    1ನೇ ವಾರ್ಡ್‌ನ ನಾಮಿನೇಟ್ ಸದಸ್ಯ ಎಂ.ಪಂಪಾಪತಿ ಮಾತನಾಡಿ, ಶುದ್ಧ ಕುಡಿವ ನೀರಿನ ಘಟಕದ ಸಾಮಗ್ರಿಗಳು ಕಳುವಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮವಾಗಿಲ್ಲ. ವಾರ್ಡಿನ ಸಾಮೂಹಿಕ ಶೌಚಗೃಹ ದುರಸ್ತಿಗೊಳಿಸದಿರುವುದರಿಂದ ಮಹಿಳೆಯರು ನಮ್ಮ ಮರ್ಯಾದೆ ಹರಾಜು ಹಾಕುತ್ತಿದ್ದಾರೆ ಎಂದರು.

    ಸದಸ್ಯೆ ಆಶಾ ನರಸಿಂಹ ಮಾತನಾಡಿ, ನಮ್ಮ ವಾರ್ಡಿನಲ್ಲಿ ಸಾಮೂಹಿಕ ಶೌಚಗೃಹ ಶುಚಿಗೊಳಿಸಿಲ್ಲ. ಇದರಿಂದ ನಿತ್ಯ ಮಹಿಳೆಯರಿಂದ ಬೈಸಿಕೊಳ್ಳುವಂತಾಗಿದೆ ಎಂದರು. ಪುರಸಭೆ ಉಪಾಧ್ಯಕ್ಷ ಈರೇಶ್ ಸಿಂಧೆ, ಮುಖ್ಯಾಧಿಕಾರಿ ಖಾಜಾ ಮೊಯಿನುದ್ದೀನ್, ಸಮುದಾಯ ಅಭಿವೃದ್ಧಿ ಅಧಿಕಾರಿ ಹಗರಿ ಪ್ರಭುರಾಜ್ ಹಾಗೂ ಸದ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts