More

    ಎಡದಂಡೆ ಕಾಲುವೆಗೆ ನೀರು ಹರಿಸಲು ತಾಳೂರು, ನಾಗಲಾಪುರ ರೈತರ ಒತ್ತಾಯ

    ಸಂಡೂರು: ನಾರೀಹಳ್ಳ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ತಾಳೂರು, ನಾಗಲಾಪುರ ಗ್ರಾಮಗಳ ರೈತರು ನಾರೀಹಳ್ಳ ಜಲಾಶಯ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ಬಳ್ಳಾರಿ ಡಿಸಿ ಪವನಕುಮಾರ ಮಾಲಪಾಟಿಗೆ ಮನವಿ ಸಲ್ಲಿಸಿದರು.

    ಪ್ರಮುಖರಾದ ತಾಳೂರಿನ ಮೂಲೆಮನೆ ತಿಪ್ಪೇಸ್ವಾಮಿ ಮಾತನಾಡಿ, ತಾಳೂರು, ನಾಗಲಾಪುರ, ತಾರಾನಗರ, ಗಂಗಲಾಪುರ ಗ್ರಾಮಗಳ ಎಡದಂಡೆ ಕಾಲುವೆ 2200 ಎಕರೆ ಭೂಮಿ ಹೊಂದಿದೆ. ನಾರೀಹಳ್ಳ ಜಲಾಶಯ ಕಳೆದ ಒಂದು ವರ್ಷದಿಂದ ಭರ್ತಿಯಾಗಿದೆ. ಸದಸರಿ ಗ್ರಾಮಗಳ ರೈತರಿಗೆ ನೀರು ಬಿಡಲು ಮನವಿ ಮಾಡಿಕೊಂಡರೂ ತುಂಗಭದ್ರಾ ಮಂಡಳಿಯವರು ಕಾಲುವೆ ದುರಸ್ತಿ ನೆಪ ಹೇಳುತ್ತ ಕಾಲಹರಣ ಮಾಡುತ್ತಿದ್ದಾರೆ. ಕಳೆದ ತಿಂಗಳು ಸದರಿ ಆಡಳಿತದ ಕಚೇರಿಗೆ ಮನವಿ ಸಲ್ಲಿಸಿದರೂ ಈವರೆಗೆ ಕ್ರಮವಾಗಿಲ್ಲ. ಈಗಾಗಲೇ ಎಲ್ಲ ರೈತರು ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿದ್ದು ಬಿತ್ತನೆ ಸಮಯ ಸಹ ಮುಗಿಯುತ್ತಾ ಬಂದಿದೆ. ಹೀಗಾಗಿ ತುಂಗಾಭದ್ರಾ ಆಡಳಿತ ಮಂಡಳಿಗೆ ಶೀಘ್ರವೇ ಕಾಲುವೆಗೆ ನೀರು ಹರಿಸುವಂತೆ ಸಂಬಂಧಿಸಿದವರಿಗೆ ಆದೇಶಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts