More

    ರೈತರಿಗೆ ಅನುಕೂಲವಾಗಲು ಕೃಷಿಗೆ ಸಾವಯವ ಗೊಬ್ಬರ ಬಳಸಿ

    ಸಂಡೂರು: ರೈತರಿಗೆ ಅನುಕೂಲವಾಗಲು ತರಬೇತಿಗಳನ್ನು ನಡೆಸುವಲ್ಲಿ ಜೆಎಸ್‌ಡಬ್ಲುೃ ಫೌಂಡೇಷನ್ ಅಗತ್ಯ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಬಳ್ಳಾರಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಗೋವಿಂದಪ್ಪ ಹೇಳಿದರು.

    ತಾಲೂಕಿನ ತಾಳೂರು ಗ್ರಾಮದಲ್ಲಿ ಗುರುವಾರ ಕೃಷಿ ವಿಜ್ಞಾನ ಕೇಂದ್ರ-ಜೆಎಸ್‌ಡಬ್ಲುೃ ಫೌಂಡೇಷನ್ ಸಹಯೋಗದಲ್ಲಿ ಸ್ಕಂದಗಿರಿ ರೈತ ಉತ್ಪಾದಕ ಕಂಪನಿ ರೈತರಿಗೆ ಹಮ್ಮಿಕೊಂಡಿದ್ದ ಕೃಷಿ ತಾಂತ್ರಿಕತೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತರು ಸಾವಯವ ಗೊಬ್ಬರ ಬಳಸಿ ಉತ್ತಮ ಇಳುವರಿ ಪಡೆದು ಹೆಚ್ಚಿನ ಲಾಭ ಗಳಿಸಬಹುದು ಎಂದರು.

    ಇದನ್ನೂ ಓದಿ: ಮಾ.2 ರಂದು ಕುಂಟೋಜಿಯಲ್ಲಿ ಸಾವಯವ ಕೃಷಿ ಚಿಂತನ

    ಜೆಎಸ್‌ಡಬ್ಲುೃ ಫೌಂಡೇಷನ್ ಕೃಷಿ ವಿಭಾಗದ ಸಂಯೋಜಕ ನಾಗನಗೌಡ ಮಾತನಾಡಿ, ಕೃಷಿ ಕ್ಷೇತ್ರ ಅಭಿವೃದ್ಧಿಗೆ ವಿಜ್ಞಾನಿಗಳ ನೆರವು ಅಗತ್ಯ. ಸಗಣಿ, ಸಾವಯವ ಗೊಬ್ಬರ ಬಳಸಿ ಸಾವಯವ ಬೆಳೆಗಳನ್ನು ಬೆಳೆಸಿ ಎಂದ ಅವರು, ಮುಂದಿನ ದಿನಗಳಲ್ಲಿ ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ತರಬೇತಿಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

    ಮಣ್ಣಿನ ವಿಜ್ಞಾನಿ ಡಾ.ಎಸ್.ರವಿ ಮಾತನಾಡಿ, ಮಣ್ಣಿನ ಫಲವತ್ತತೆ ಹೆಚ್ಚಿಸುವ ಕ್ರಮಗಳು ಮತ್ತು ಮಣ್ಣು ಮಾದರಿ ಸಂಗ್ರಹಿಸುವ ಕುರಿತು ತರಬೇತಿ ನೀಡಿದರು. ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ರಮೇಶ್, ಜೈವಿಕ ಶಿಲೀಂಧ್ರ ನಾಶಕಗಳು ಮತ್ತು ಪೀಡೆನಾಶಕಗಳ ಬಳಕೆ ಬಗ್ಗೆ ಡಾ.ಗೋವಿಂದಪ್ಪ, ಉತ್ಪಾದಕತೆ ಮತ್ತು ಮೌಲ್ಯವರ್ಧನೆಯ ಕುರಿತು ಡಾ.ಶಿಲ್ಪಾ ತಿಳಿಸಿದರು. ತರಬೇತಿಯಲ್ಲಿ ಎನ್.ಪಿ.ರಾಜ, ಗಿರೀಶ್, ರಾಮಚಂದ್ರಪ್ಪ ಮತ್ತು 80ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts