More

    ಶಂಕಿತ ಡೆಂಘೆ, ಕಾರ್ಮಿಕರ ಆರೋಗ್ಯ ತಪಾಸಣೆ- ತೋರಣಗಲ್‌ನಲ್ಲಿ ಆರ್‌ಬಿಎಸ್‌ಪಿ ವೈದ್ಯರ ತಂಡದಿಂದ ಟೆಸ್ಟ್

    ಸಂಡೂರು: ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮ (ಆರ್‌ಬಿಎಸ್‌ಪಿ) ವೈದ್ಯರ ತಂಡದಿಂದ ತೋರಣಗಲ್‌ನ ಬೈಪಾಸ್ ರಸ್ತೆಯಲ್ಲಿ ಜೆಎಸ್‌ಡಬ್ಲುೃಗೆ ಹೊಂದಿಕೊಂಡಿರುವ ಸುನೀತಾ ಇಂಜನಿಯರಿಂಗ್ ವರ್ಕ್ಸ್‌ನ ಕಾರ್ಮಿಕರ ತಪಾಸಣೆ ಶನಿವಾರ ನಡೆಯಿತು.

    ಶಂಕಿತ ಡೆಂಘೆ ಲಕ್ಷಣಗಳು ಕಾಣಿಸಿದ್ದರಿಂದ 45ಕ್ಕೂ ಹೆಚ್ಚು ಕಾರ್ಮಿಕರ ಆರೋಗ್ಯ ತಪಾಸಣೆ ಜತೆಗೆ ಕರೊನಾ ಕುರಿತ ಥರ್ಮಲ್ ಸ್ಕ್ಯಾನಿಂಗ್ ಸಹ ಮಾಡಲಾಯಿತು. ಅದರಲ್ಲಿ ಮೂವರಿಗೆ ಜ್ವರವಿರುವುದು ಕಂಡು ಬಂದಿದ್ದು ರಕ್ತದ ಮಾದರಿ ಪಡೆದು ಲ್ಯಾಬ್‌ಗೆ ರವಾನಿಸಲಾಗುವುದು. ಶುಕ್ರವಾರ 20 ಜನರನ್ನು ತಪಾಸಣೆಗೆ ವಿಮ್ಸ್‌ಗೆ ಕಳಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಒಂದೇ ಕಟ್ಟಡದಲ್ಲಿ 70-80 ಜನ ಹೊರಗಡೆಯಿಂದ ಬಂದ ನೌಕರರು, ಕಾರ್ಮಿಕರಿದ್ದು, ಅವಿವಾಹಿತರಾಗಿದ್ದಾರೆ. ಕಟ್ಟಡದ ಅಜುಬಾಜಿನಲ್ಲಿ ಬೇಕಾಬಿಟ್ಟಿ ತ್ಯಾಜ್ಯ ಎಸೆಯಲಾಗಿದೆ. ಇದರಿಂದ ಸೊಳ್ಳೆಗಳ ಹಾವಳಿ ವಿಪರೀತವಾಗಿರುವುದಾಗಿ ನಿವಾಸಿಗಳು ದೂರಿದ್ದಾರೆ. ತ್ಯಾಜ್ಯ ಮತ್ತು ಚರಂಡಿ ಸ್ವಚ್ಛಗೊಳಿಸಿ ಫಾಗಿಂಗ್ ಮಾಡುವಂತೆ ತೋರಣಗಲ್ ಗ್ರಾಪಂಗೆ ಹೇಳಲಾಗಿದೆ ಎಂದು ವೈದ್ಯರು ತಿಳಿಸಿದರು.

    ತಪಾಸಣೆಯಲ್ಲಿ ಡಾ.ಸುಮಿತ್ರಾ, ಡಾ.ಮಹಾಲಕ್ಷ್ಮಿ, ಬಿಎಚ್‌ಇಒ ಶಿವಪ್ಪ, ಎಂಟಿಎಸ್‌ನ ಸಾಗರ್ ಕುಮಾರ್, ಅಶೋಕ್, ಪಕ್ಕೀರಮ್ಮ, ನಾಗರತ್ನಮ್ಮ, ನಿಜಾಮುದ್ದೀನ್, ಹನುಮಂತಮ್ಮ, ಮೇಘನಾ, ವಿಜಯಲಕ್ಷ್ಮೀ, ಎರೆಮ್ಮ, ಅನುಸೂಯ ಇತರರಿದ್ದರು.

    ಎರಡು ದಿನಗಳಿಂದ ಆರೋಗ್ಯ ತಪಾಸಣೆ ನಡೆಯುತ್ತಿದೆ. ಸರ್ವೇ ಮತ್ತು ಜಿಂದಾಲ್ ಸಂಜೀವಿನಿ ಆಸ್ಪತ್ರೆಯಲ್ಲಿ ಮಾಡಿಸಿದ ಪರೀಕ್ಷೆ ವೇಳೆ ಕಾರ್ಮಿಕರಲ್ಲಿ ಶಂಕಿತ ಡೆಂಘೆ ಲಕ್ಷಣಗಳಿವೆ ಎಂಬ ಅನುಮಾನದಿಂದ 20 ಜನರನ್ನು ತಪಾಸಣೆಗಾಗಿ ವಿಮ್ಸ್‌ಗೆ ಕಳಿಸಲಾಗಿದೆ.
    | ಡಾ.ಸುಮಿತ್ರಾ ಆರ್‌ಬಿಎಸ್‌ಕೆ ತಂಡ ಸಂಡೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts