More

    ಅನ್ನಪೂರ್ಣಾ ‘ಅತ್ಯುತ್ತಮ ಆಶಾ ಕಾರ್ಯಕರ್ತೆ’

    ಶಿವಮೊಗ್ಗ: ಕರೊನಾ ಸಂಬಂಧವನ್ನೇ ದೂರ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಜೀವವನ್ನು ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಿರುವ ನಗರದ ಆಶಾ ಕಾರ್ಯಕರ್ತೆಯೊಬ್ಬರಿಗೆ ಕೇಂದ್ರ ಸರ್ಕಾರ ‘ರಾಷ್ಟ್ರೀಯ ಪುರಸ್ಕಾರ’ ನೀಡಿ ಗೌರವಿಸಿದೆ.

    ತುಂಗಾನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಟಿಪ್ಪುನಗರ ಬಲಭಾಗದ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನ್ನಪೂರ್ಣಾ ಅವರಿಗೆ ‘ಅತ್ಯುತ್ತಮ ಆಶಾ ಕಾರ್ಯಕರ್ತೆ’ ಬಿರುದು ನೀಡಿ ಗೌರವಿಸಿದೆ.

    2017ರ ಆಗಸ್ಟ್ 10ರಿಂದ ಕೊಳೆಗೇರಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು 7,500 ಜನಸಂಖ್ಯೆ ಇರುವ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅವಿದ್ಯಾವಂತರಿದ್ದಾರೆ. ಡೆಂಘೆ, ಚಿಕೂನ್​ಗುನ್ಯ ಬಗ್ಗೆಯೂ ಜನರಲ್ಲಿ ಜಾಗೃತಿ ಇರಲಿಲ್ಲ. ಜತೆಗೆ ಕರೊನಾ ಸಂದರ್ಭ ಮಾಸ್ಕ್ ಧರಿಸುವುದು, ಕೈ ತೊಳೆಯುವುದು ಸೇರಿ ಹಲವು ಅಂಶಗಳ ಕುರಿತು ತಿಳಿವಳಿಕೆ ಮೂಡಿಸುತ್ತಿದ್ದಾರೆ.

    ಹೋಂ ಕ್ವಾರಂಟೆನ್ ಸಫಲವಾಗಬೇಕಾದರೆ, ಆ ಕುಟುಂಬಕ್ಕೆ ಅಗತ್ಯ ಸೌಲಭ್ಯಗಳು ಮನೆ ಬಾಗಿಲಿಗೆ ತಲುಪಿಸಬೇಕು. ಅವರ ಬೇಕು ಬೇಡಿಕೆಗೆ ಸ್ಪಂದಿಸಬೇಕು. ಅದಕ್ಕಾಗಿ ಟಿಪ್ಪು ನಗರದಲ್ಲಿ ಸಾಕಷ್ಟು ಪ್ರಯತ್ನಿಸಿದ್ದೇನೆ. ಕಂಟೇನ್ಮೆಂಟ್ ಜೋನ್​ಗೆ ಜನರು ಬರುವುದಕ್ಕೂ ಭಯಪಡುತ್ತಾರೆ. ಆದರೆ ಬಹುಕಾಲ ಸಮೀಕ್ಷೆ ಸೇರಿ ಇನ್ನಿತರ ಕಾರ್ಯಗಳಿಗೆ ಇಲ್ಲಿಯೇ ಹೆಚ್ಚು ಕಾಲ ಕಳೆದಿದ್ದೇನೆ. ಹೋಂ ಕ್ವಾರಂಟೈನ್ ಆದ ಹಲವರಲ್ಲಿ ಹಣವೇ ಇರಲಿಲ್ಲ. ಅಂಥವರಿಗೆ ಸಹಾಯ ಮಾಡುವಂತೆ ಅಕ್ಕಪಕ್ಕದ ಮನೆಯವರಿಗೆ ಮನವಿ ಮಾಡಿದ್ದೇನೆ. ಅದರ ಫಲವಾಗಿ ಮಾತೃಹೃದಯಿಗಳು ಸಹಕಾರ ನೀಡಿದ್ದಾರೆ ಎನ್ನುತ್ತಾರೆ ಅನ್ನಪೂರ್ಣಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts