More

    ಸಂದೇಶ್​​ಖಾಲಿ ಲೈಂಗಿಕ ದೌರ್ಜನ್ಯ​: 55 ದಿನಗಳ ಬಳಿಕ ಟಿಎಂಸಿ ನಾಯಕ ಶಹಜಹಾನ್​ ಶೇಖ್​ ಅರೆಸ್ಟ್​

    ಕೋಲ್ಕತ: ಸಂದೇಶ್​​ಖಾಲಿ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿಯಾಗಿರುವ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ನಾಯಕ ಶಹಜಹಾನ್​ ಶೇಖ್​ನನ್ನು ಪಶ್ಚಿಮ ಬಂಗಾಳ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ತಲೆಮರೆಸಿಕೊಂಡ 55 ದಿನಗಳ ಬಳಿಕ ಉತ್ತರ 24 ಪರಗಣ ಜಿಲ್ಲೆಯ ಮಿನಖಾನ್​ ಏರಿಯಾದಲ್ಲಿ ಆರೋಪಿಯನ್ನು ಬಂಧಿಸಿ, ಬಸಿರ್ಹತ್​ಗೆ ಕರೆತರಲಾಗಿದೆ.

    ಮಾರ್ಚ್​ 1ರಂದು ಪ್ರಧಾನಿ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಒಂದು ದಿನದ ಮುಂಚೆಯೇ ಆರೋಪಿಯನ್ನು ಬಂಧಿಸಲಾಗಿದೆ. ಶಹಜಹಾನ್​ ವಿರುದ್ಧ ಭೂಕಬಳಿಕೆ ಆರೋಪವೂ ಇದೆ. ಇಂದು ಮಧ್ಯಾಹ್ನ 2 ಗಂಟೆಗೆ ಶಹಜಹಾನ್​ನನ್ನು ಬಸಿರ್ಹತ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.

    ಸಂದೇಶ್‌ಖಾಲಿ ದೌರ್ಜನ್ಯ ಬೆಳಕಿಗೆ ಬಂದ ಬಳಿಕ ಶಹಜಹಾನ್​ ಹೆಸರು ಕುಖ್ಯಾತಿ ಪಡೆದಿದೆ. ಅದಕ್ಕೂ ಮುನ್ನ ಈತನ ಹೆಸರು ಪಡಿತರ ಹಗರಣದಲ್ಲಿ ಕೇಳಿಬಂದಿತ್ತು. ಅಂದಹಾಗೆ ಶಹಜಹಾನ್ ಶೇಖ್, ಟಿಎಂಸಿಯ ಪ್ರಬಲ ನಾಯಕರಾಗಿದ್ದು, ಸಂದೇಶ್​ಖಾಲಿ ಘಟಕದ ಟಿಎಂಸಿ ಅಧ್ಯಕ್ಷರೂ ಆಗಿದ್ದಾರೆ. ಪಡಿತರ ಹಗರಣ ಹಿನ್ನೆಲೆಯಲ್ಲಿ ಕಳೆದ ಜನವರಿ 5 ರಂದು ಶಹಜಹಾನ್ ವಿಚಾರಣೆಗೆಂದು ಅವರ ನಿವಾಸಕ್ಕೆ ಇಡಿ ಅಧಿಕಾರಿಗಳು ತೆರಳಿದಾಗ ಈ ವಿಚಾರ ಮೊದಲೇ ಗೊತ್ತಾಗಿ ಆತ ತಲೆಮರೆಸಿಕೊಂಡಿದ್ದ. ಇಡಿ ದಾಳಿಯ ಸಂದರ್ಭದಲ್ಲಿ ಶಹಜಹಾನ್​ ಬೆಂಬಲಿಗರು ಇಡಿ ಅಧಿಕಾರಿಗಳು ಮತ್ತು ಸಿಎಪಿಎಫ್ ಮೇಲೆಯೇ ಹಲ್ಲೆ ನಡೆಸಿದ್ದರು.

    ಸಂದೇಶ್​ಖಾಲಿ ಪ್ರದೇಶದಲ್ಲಿ ವಾಸಿಸುವ ಮಹಿಳೆಯರು ಶಹಜಹಾನ್​ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಆ ಬಳಿಕವಷ್ಟೇ ಶಹಜಹಾನ್​ ಹೆಸರು ಮುನ್ನೆಲೆಗೆ ಬಂದಿತು. ಈ ವಿಚಾರವಾಗಿ ಬಿಜೆಪಿ ಸಹ ಪ್ರತಿಭಟನೆ ನಡೆಸಿ, ಶಹಜಹಾನ್​ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿತ್ತು. (ಏಜೆನ್ಸೀಸ್​)

    S*x ಎಂಬುದು… ಬೆಡ್​ರೂಮ್​ ಸೀಕ್ರೆಟ್​ ಬಿಚ್ಚಿಟ್ಟ ಅಮೆರಿಕ ಅಧ್ಯಕ್ಷ ಜೋ ಬೈಡೆನ್!​

    ಒಬ್ಬ ಟೀ ವ್ಯಾಪಾರಿ 1 ವರ್ಷಕ್ಕೆ ಎಷ್ಟು ದುಡಿತಾರೆ ಗೊತ್ತಾ? ಈ ಲೆಕ್ಕಾಚಾರ ನೋಡಿದ್ರೆ ತಲೆ ತಿರುಗೋದು ಪಕ್ಕಾ!

    ಅದನ್ನು ದಪ್ಪ ಮಾಡಿಕೊಳ್ಳಲು ಹೇಳುತ್ತಿದ್ದರು! ಸಿನಿ ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts