More

    ಸಂದೀಪ ನಾಯ್ಕ ಅಮರ್ ರಹೇ …

    ಸಿದ್ದಾಪುರ: ಹೃದಯಾಘಾತದಿಂದ ಗುರುವಾರ ನಿಧನ ಹೊಂದಿದ ತಾಲೂಕಿನ ನಾಣಿಕಟ್ಟಾ ಗ್ರಾಪಂ ವ್ಯಾಪ್ತಿಯ ಹಂಗಾರಖಂಡದ ಯೋಧ ಸಂದೀಪ ನಾರಾಯಣ ನಾಯ್ಕ (28) ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ಶುಕ್ರವಾರ ನಡೆಯಿತು.

    ಸಂದೀಪ ನಾಯ್ಕ ಅವರ ಪಾರ್ಥಿವ ಶರೀರವನ್ನು ಗೋವಾದಿಂದ ಮಿಲಿಟರಿ ವಾಹನದಲ್ಲಿ ತರಲಾಯಿತು. ವಾಹನವು ತ್ಯಾಗ್ಲಿ ಸಮೀಪ ಬರುತ್ತಿದ್ದಂತೆ ಸ್ಥಳಲ್ಲಿದ್ದ ಸಾವಿರಾರು ಜನರು, ‘ಸಂದೀಪ ನಾಯ್ಕ ಅಮರ್ ರಹೇ’ ಎಂದು ಘೊಷಣೆ ಕೂಗುತ್ತ ಮನೆಯವರೆಗೆ ಮೆರವಣಿಗೆ ನಡೆಸಿದರು.

    ಭಾರತೀಯ ಸೇನೆಯ ಬೆಳಗಾವಿಯ ಸೇನಾ ಕಮಾಂಡೋ ಸಂದೀಪ್ ರಣಸಿಂಗ್ ಹಾಗೂ ಏಳು ಯೋಧರು ಪಾರ್ಥಿವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು. 203 ಕೋಬ್ರಾ ಬೆಟಾಲಿಯನ್​ಗೆ ಸೇರಿದ್ದ ಸಂದೀಪ ಅವರು ಜಾರ್ಖಂಡ್​ನ ಹಾಜಾರ್ ಬಾಗ್​ನ ಬಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ನಾಲ್ಕೈದು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ರಾಂಚಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದರು.

    ಮುಗಿಲು ಮುಟ್ಟಿದ ಆಕ್ರಂದನ: ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಂದೆ ನಾರಾಯಣ ನಾಯ್ಕ, ಸಹೋದರ ಸಂತೋಷ ನಾಯ್ಕ ದಂಪತಿ ರೋದನ ಮುಗಿಲು ಮುಟ್ಟಿತ್ತು. ಸಂದೀಪ ಅವರ ಮನೆಯ ಸಮೀಪದ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸಿಪಿಐ ಮಹೇಶ ಎನ್., ಪಿಎಸ್​ಐ ಮಹಂತೇಶ ಕುಂಬಾರ, ಸಿಬ್ಬಂದಿ ಕುಶಾಲ ತೋಪು ಹಾರಿಸಿ ಗೌರವ ಸಲ್ಲಿಸಿದರು. ತಹಸೀಲ್ದಾರ್ ಪ್ರಸಾದ ಎಸ್.ಎ . ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

    ಅಂತಿಮ ದರ್ಶನ: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ನಾಣಿಕಟ್ಟಾ ಗ್ರಾಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ಹೆಗಡೆ, ಸದಸ್ಯರು, ಸಿಬ್ಬಂದಿ, ಕಾನಸೂರು ಗ್ರಾಪಂ ಅಧ್ಯಕ್ಷ ವೀರಭದ್ರ ಮಹದೇವಪ್ಪ ಜಂಗಣ್ಣನವರ, ಸದಸ್ಯರು, ಸಿಬ್ಬಂದಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ನಾಯ್ಕ ಮನಮನೆ, ವಿವಿಧ ಗ್ರಾಪಂ, ಸಂಘ ಸಂಸ್ಥೆ ಪದಾಧಿಕಾರಿಗಳು, ಕುಟುಂಬಸ್ಥರು, ಸ್ನೇಹಿತರು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts