More

    ಡ್ರಗ್​ ಪ್ರಕರಣದ ಆರೋಪಿ ವೀರೇನ್​ ಖನ್ನಾಗೆ ಸಹಕರಿಸಿದ ಆರೋಪ: ಎಸಿಪಿಗೆ ಕಂಟಕ!

    ಬೆಂಗಳೂರು: ಚಂದನವನಕ್ಕೆ ಮಾದಕ ಜಾಲದ ನಂಟು ಆರೋಪದಲ್ಲಿ ಬಂಧಿಯಾಗಿರುವ ಪ್ರಮುಖ ಆರೋಪಿ ವೀರೇನ್​ ಖನ್ನಾಗೆ ಸಹಕರಿಸಿದ ಆರೋಪದಲ್ಲಿ ಎಸಿಪಿ ಮುದವಿ ಅವರನ್ನು ಅಮಾನತುಗೊಳಸಲು ಸಿಸಿಬಿ ಶಿಫಾರಸು ಮಾಡಿರುವುದಾಗಿ ತಿಳಿದುಬಂದಿದೆ.

    ಎಸಿಪಿ ಮಾತ್ರವಲ್ಲದೆ ಪೇದೆ ಮಲ್ಲಿಕಾರ್ಜುನ್​ ಸಹ ಕಂಟಕ ಎದುರಾಗಿದೆ. ವೀರೇನ್​ ಖನ್ನಾ ಬಳಿ ಎಸಿಪಿ ಮುದವಿ 50 ಲಕ್ಷಕ್ಕೆ ಡೀಲ್ ಕುದುರಿಸಿದ್ದರು ಎನ್ನಲಾಗಿದೆ. ಕಾನ್​ಸ್ಟೇಬಲ್​ ಮಲ್ಲಿಕಾರ್ಜುನ್ ಮೂಲಕ ರಾತ್ರಿ 10.30ರ ನಂತರ ಖನ್ನಾಗೆ ಮೊಬೈಲ್ ನೀಡಿ ಜಾಮೀನು ನೀಡಲು ಸಹಕರಿಸುವುದಾಗಿ ಹೇಳಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.

    ಇದನ್ನೂ ಓದಿ: ಬಾಲಿವುಡ್​ನಲ್ಲಿ ಬಾಲಾಕೋಟ್​ ಏರ್​ಸ್ಟ್ರೈಕ್​ ಸಿನಿಮಾ; ಅಭಿನಂದನ್​ ಪಾತ್ರಕ್ಕೆ ದಕ್ಷಿಣದ ಖ್ಯಾತ ನಟ!

    ಹೀಗಾಗಿ ಖನ್ನಾಗೆ ಸಹಕರಿಸಿದ ಆರೋಪದ ಮೇಲೆ ಎಸಿಪಿ ಮತ್ತು ಕಾನ್ಸ್​ಟೇಬಲ್​ ಅಮಾನತಿಗೆ ಗೃಹ ಸಚಿವರ ಬಳಿ ಸಿಸಿಬಿ ಶಿಫಾರಸು ಮಾಡಿದೆ. ಅಂದಹಾಗೆ ಮುದವಿ ಅವರು ಸಿಸಿಬಿಯ ಮಹಿಳಾ ಸಂರಕ್ಷಣಾ ಘಟಕದ ಎಸಿಪಿಯಾಗಿದ್ದಾರೆ.

    ವೀರೇನ್​ ಖನ್ನಾ ಬೆಂಗಳೂರಿನ ಬಹುತೇಕ ಪೇಜ್-3 ಪಾರ್ಟಿಗಳ ಆಯೋಜಕ. ದೆಹಲಿ ಮೂಲದ ಖನ್ನಾ ವ್ಯಾಸಂಗಕ್ಕೆಂದು ಬೆಂಗಳೂರಿಗೆ ಬಂದು ಪ್ರತಿಷ್ಠಿತ ಆರ್‌ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ. ವಿದ್ಯಾಭ್ಯಾಸ ಮುಗಿದ ಬಳಿಕ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ. ಇದರ ನಡುವೆ ಇವೆಂಟ್ ಮ್ಯಾನೇಜ್‌ಮೆಂಟ್‌ ಶುರು ಮಾಡಿದ್ದ. ಬಹುತೇಕ ಸ್ಟಾರ್ ಹೋಟೆಲ್‌ಗಳಲ್ಲಿ ಪಾರ್ಟಿ ಆಯೋಜಿಸುತ್ತಿದ್ದ. ಈ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡ್ತಿದ್ದ ಎಂದ ಆರೋಪ ಕೇಳಿಬಂದಿದೆ. (ದಿಗ್ವಿಜಯ ನ್ಯೂಸ್​)

    ಸಿಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ದೆಹಲಿಯಲ್ಲಿ ಡ್ರಗ್ಸ್​ ಪ್ರಕರಣದ ಪ್ರಮುಖ ಆರೋಪಿ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts