More

    ನಟಿ ರಾಗಿಣಿ-ಸರ್ಕಾರಿ ನೌಕರ ರವಿಶಂಕರ್​ ನಡುವಿನ ಪರಿಚಯ ಆರಂಭವಾಗಿದ್ಹೇಗೆ? ಇಲ್ಲಿದೆ ರೋಚಕ ಸಂಗತಿ!

    ಬೆಂಗಳೂರು: ಡ್ರಗ್ಸ್​ ಮಾಫಿಯಾದಲ್ಲಿ ಭಾಗಿಯಾಗಿರುವ ಆರೋಪ ಹೊತ್ತು ಸಿಸಿಬಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಮತ್ತು ಆಪ್ತ ರವಿಶಂಕರ್​ ನಡುವಿನ ಪರಿಚಯವೇ ಒಂದು ರೋಚಕ ಸಂಗತಿ.

    ದಿನವೊಂದಕ್ಕೆ ರಾಗಿಣಿಗೆ ಒಂದು ಲಕ್ಷ ಖರ್ಚು ಮಾಡುತ್ತಿದ್ದೆ ಎಂದು ರವಿಶಂಕರ್​ ಹೇಳಿದಾಗಲೇ ಅಧಿಕಾರಿಗಳಿಗೆ ಪರಮಾಶ್ಚರ್ಯವಾಗಿತ್ತು. ಇದರ ಮೂಲವನ್ನು ಬೆನ್ನು ಹತ್ತಿದ ಅಧಿಕಾರಿಗಳಿಗೆ ಕೆಲ ಕುತೂಹಲಕಾರಿ ವಿಚಾರಗಳು ಸಿಕ್ಕಿವೆ.

    ಜಯನಗರ ಆರ್​ಟಿ‌ಒ ಕಚೇರಿಯಲ್ಲಿ ಎಸ್​ಡಿಎ ಆಗಿರುವ ರವಿಶಂಕರ್, ಈ ಹಿಂದೆ ಕೋರಮಂಗಲ ಆರ್​ಟಿಒದಲ್ಲೂ ಕೆಲಸ ಮಾಡಿದ್ದ. ಅಪ್ಪನ ನಿಧನದ ಬಳಿಕ ಅನುಕಂಪದ ಆಧಾರದಲ್ಲಿ ಕೆಲಸ ಗಿಟ್ಟಿಸಿದ್ದ ರವಿಶಂಕರ್, ಕೆಲಸ ಮಾಡುತ್ತಲೇ ನಟ-ನಟಿಯರಿಗೆ ವಾಹನಗಳ ಫ್ಯಾನ್ಸಿ ನಂಬರ್ ಕೊಡುವಾಗ ಪರಿಚಯ ಬೆಳೆಸುತ್ತಿದ್ದ.

    ಇದನ್ನೂ ಓದಿ: ‘ಮಾದಕ’ ನಟಿ ರಾಗಿಣಿ ಬಂಧನ: ಮನೆಯಲ್ಲಿ ಡ್ರಗ್ಸ್ ಪತ್ತೆ…!

    ಬಹುತೇಕ ನಟ ನಟಿಯರಿಗೆ ಈತನೇ ಫ್ಯಾನ್ಸಿ ನಂಬರ್ ಆಯ್ಕೆ ಮಾಡಿಕೊಟ್ಟಿದ್ದಾನೆಂದು ತಿಳಿದುಬಂದಿದೆ. ಅದರಂತೆ ನಟಿ ರಾಗಿಣಿ ಕಾರಿಗೂ ಈತನೇ ಫ್ಯಾನ್ಸಿ ನಂಬರ್ ಆಯ್ಕೆ ಮಾಡಿ ಕೊಟ್ಟಿದ್ದಾನೆ. ಇಲ್ಲಿಂದ ಬೆಳೆದ ಪರಿಚಯ ಪಾರ್ಟಿ ಹಾಗೂ ಪಬ್​ಗೆ ಹೋಗುವಷ್ಟು ಹತ್ತಿರವಾಯಿತು.

    ನಂತರದ ದಿನಗಳಲ್ಲಿ ನಟಿ ಹೋಗುತ್ತಿದ್ದ ಸಭೆ-ಸಮಾರಂಭಕ್ಕೆ ರವಿಶಂಕರ್​ ಜತೆಯಲ್ಲೇ ಹೋಗುತ್ತಿದ್ದ. ಪಾರ್ಟಿಗಳಲ್ಲಿ ಈತನಿಗೆ ಮತ್ತಷ್ಟು ನಟ-ನಟಿಯರ ಸಂಪರ್ಕವಾಗಿತ್ತು. ಹೆಚ್ಚಾಗಿ ನಟಿ‌ ರಾಗಿಣಿ‌ ಜತೆ ಸುತ್ತಾಡುತ್ತಿದ್ದ. ಸಿಸಿಬಿಗೆ ಸಿಕ್ಕ ಸುಳಿವಿನಿಂದ ರವಿಶಂಕರ್ ‌ಮೇಲೆ ಸಿಸಿಬಿ ಕಣ್ಣಿಟ್ಟಿತ್ತು. ಬಳಿಕ ಮೊಬೈಲ್ ಟವರ್ ಆಧಾರದ ಮೇಲೆ ಆತನನ್ನು ವಶಕ್ಕೆ ಪಡೆದಿತ್ತು.

    ವಶಕ್ಕೆ ಪಡೆಯುವಾಗ ರವಿಶಂಕರ್​ ಎರಡು‌ ಬಾರಿ ‌ಮಿಸ್ ಆಗಿ ಮೂರನೇ ಸಿಸಿಬಿ ಸಿಕ್ಕಿಬಿದಿದ್ದ. ಈತ ನೀಡಿದ ಮಾಹಿತಿ ಆಧಾರದ ಮೇಲೆ ಮತ್ತೊಬ್ಬ ಆರೋಪಿ ರಾಹುಲ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. (ದಿಗ್ವಿಜಯ ನ್ಯೂಸ್​)

    ‘ಮಾದಕ’ ನಟಿ ರಾಗಿಣಿ ಗೆಳೆಯ ರವಿಶಂಕರ್​ಗೆ ಮತ್ತೊಂದು ಆಘಾತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts