More

    ಜಾತ್ರೆ ಮುಗಿಸಿ ವಾಪಸ್​ ಬರುತ್ತಿದ್ದ ನಾಲ್ವರು ಮರಳು ತುಂಬಿದ್ದ ಟಿಪ್ಪರ್​ ಲಾರಿಗೆ ಬಲಿ!

    ಹಾವೇರಿ: ರಾಣೇಬೆನ್ನೂರು ತಾಲೂಕಿನ ಇಟಗಿ-ಮುದೇನೂರ ಗ್ರಾಮದ ಬಳಿ ಮರಳು ತುಂಬಿದ್ದ ಟಿಪ್ಪರ್​ ಲಾರಿಗೆ ಗುರುವಾರ ಒಂದೇ ಕುಟುಂಬ ನಾಲ್ವರು ಬಲಿಯಾಗಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಮತ್ತು ಮೃತರ ಸಂಬಂಧಿಕರು ಛಿದ್ರಛಿದ್ರವಾಗಿ ಬಿದ್ದಿದ್ದ ಮೃತದೇಹಗಳ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. ಅಲ್ಲದೆ, ಮರಳು ಸಾಗಿಸುತ್ತಿದ್ದ ಟಿಪ್ಪರ್​ಲಾರಿಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದರು.

    ಏನದು ಘಟನೆ?: ಮುದೇನೂರು ಗ್ರಾಮದ ಸಿದ್ದಪ್ಪ ಹನುಮಂತಪ್ಪ ನಾಗೇನಹಳ್ಳಿ (38) ಮತ್ತು ಅನಸೂಯ(32) ದಂಪತಿಯು ತಮ್ಮ ಇಬ್ಬರು ಮಕ್ಕಳಾದ ವನಿತಾ(11) ಹಾಗೂ ಮಗಳು ಸುನಿತಾ(9) ಜತೆ ಬೈಕ್​ನಲ್ಲಿ ಹಿರೇಕೆರೂರ ದುರ್ಗಮ್ಮ ದೇವಿ ಜಾತ್ರೆಗೆ ಹೋಗಿದ್ದರು. ಗುರುವಾರ ಮಧ್ಯಾಹ್ನ ಗ್ರಾಮಕ್ಕೆ ವಾಪಸ್​ ಬರುತ್ತಿದ್ದರು. ಇದನ್ನೂ ಓದಿರಿ  ಕೂಲಿ ಕೆಲಸ ಮುಗಿಸಿಕೊಂಡು ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೊರಟವರ ಪ್ರಾಣ ಹೊತ್ತೊಯ್ದ ಜವರಾಯ!

    ಮಾರ್ಗಮಧ್ಯೆ ಇವರು ಸಂಚರಿಸುತ್ತಿದ್ದ ಬೈಕ್​ಗೆ ಮರಳು ತುಂಬಿದ್ದ ಟಿಪ್ಪರ್​ ಲಾರಿ ಡಿಕ್ಕಿ ಹೊಡೆದಿದ್ದು, ಬೈಕ್​ನಲ್ಲಿದ್ದ ಅಪ್ಪ-ಅಮ್ಮ-ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾದರು. ನಾಲ್ವರ ಮೃತದೇಹಗಳು ಒಂದೊಂದು ದಿಕ್ಕಿನಲ್ಲಿ ಬಿದ್ದಿದ್ದು, ಕೆಲಭಾಗಗಳು ನಜ್ಜುಗುಜ್ಜಾಗಿದ್ದವು. ಅಪಘಾತದ ಭೀಕರತೆ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

    ಜಾತ್ರೆ ಮುಗಿಸಿ ವಾಪಸ್​ ಬರುತ್ತಿದ್ದ ನಾಲ್ವರು ಮರಳು ತುಂಬಿದ್ದ ಟಿಪ್ಪರ್​ ಲಾರಿಗೆ ಬಲಿ!ಸಚಿವ ಆರ್.ಶಂಕರ್‌ರ ಕ್ಷೇತ್ರದಲ್ಲಿಯೇ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಅಕ್ರಮವಾಗಿ ಮರಳು ಸಾಗಣೆ ಮಾಡುವ ಟಿಪ್ಪರ್​ ಲಾರಿಗಳನ್ನು ಚಾಲಕರು ವೇಗವಾಗಿ ಚಲಾಯಿಸುತ್ತಿದ್ದಾರೆ. ಪರಿಣಾಮ ಇಂದು ನಾಲ್ವರು ಅಮಾಯಕರು ಬಲಿಯಾಗಿದ್ದಾರೆ ಎಂದು ಇಟಗಿ ಮತ್ತು ಮುದೇನೂರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾ, ಅಪಘಾತ ನಡೆದ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ಗೊತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿರಿ ಕಾಲುವೆಯಲ್ಲಿ ಕಾದು ಕುಳಿತ್ತಿದ್ದ ಜವರಾಯ, ಆಟವಾಡುತ್ತಲೇ ಪ್ರಾಣ ಬಿಟ್ಟ ಮಕ್ಕಳು!

    ನಮಗೆ ನ್ಯಾಯ ಬೇಕು. ಅಮಾಯಕರ ಸಾವಿಗೆ ಮರಳು ತುಂಬಿದ್ದ ರಕ್ಕಸ ಟಿಪ್ಪರ್ ಲಾರಿಯೇ ಕಾರಣ. ಜಿಲ್ಲೆಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯಲು ಹೇಗೆ ಬಿಟ್ಟಿದ್ದೀರಿ? ಎಂದು ಮೃತರ ಸಂಬಂಧಿಕರು ಪೊಲೀಸರಿಗೆ ತರಾಟೆ ತೆಗೆದುಕೊಂಡರು. ಅಲ್ಲದೆ, ಟಿಪ್ಪರ್ ಲಾರಿಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದರು. ತಕ್ಷಣವೇ ಪೊಲೀಸರು ಪ್ರತಿಭಟನಾನಿರತರನ್ನ ತಡೆದರು. ಜಿಲ್ಲಾಧಿಕಾರಿ ಹಾಗೂ ಮರಳಿನ ಪಾಯಿಂಟ್​ನವರು ಸ್ಥಳಕ್ಕೆ ಬರಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿದ್ದರು.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಅಂದು ಪೊಲೀಸರು ಅವನನ್ನ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರು, ಆಗ ಸಹಾಯಕ್ಕೆ ನಾನೇ ಬಂದೆ… ಇದನ್ನ ದರ್ಶನ್​ ನೆನೆಯಲಿ

    ಆರ್​ಬಿಐ ಬ್ಯಾಂಕ್​ನಿಂದ ಹಣ ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್ ರಾಮನಗರದಲ್ಲಿ ಪಲ್ಟಿ

    Video| ದೇವರ ಹೆಸರಲ್ಲಿ ಬೆತ್ತಲೆ ಸೇವೆ! ನಡುರಸ್ತೆಯಲ್ಲಿ ಬೆತ್ತಲೆ ಮಹಿಳೆಯ ಮೆರವಣಿಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts