More

    ಕಿಂಡಿಅಣೆಕಟ್ಟಿನಲ್ಲಿ ತುಂಬಿದ ಮರಳು

    ಬೆಳ್ತಂಗಡಿ: ಮುಂಡಾಜೆ ವಾಳ್ಯಸ್ತರ ಕೃಷಿ ನೀರಿನ ಕಾಪು ಕಿಂಡಿ ಅಣೆಕಟ್ಟು ಪರಿಸರದಲ್ಲಿ ತುಂಬಿರುವ ಮರಳು ದಿಬ್ಬಗಳನ್ನು ಭೂವಿಜ್ಞಾನ ಮತ್ತು ಗಣಿ ಇಲಾಖೆಯ ಅಧಿಕಾರಿ ವಸುಧಾ ವೀಕ್ಷಣೆ ನಡೆಸಿದರು.

    ಕೃಷಿ ನೀರಿನ ಈ ಕಿಂಡಿಅಣೆಕಟ್ಟಿನಲ್ಲಿ ಭಾರಿ ಪ್ರಮಾಣದ ಮರಳ ದಿಬ್ಬಗಳು ಸಂಗ್ರಹಗೊಂಡಿದ್ದು, ಅಣೆಕಟ್ಟಿಗೆ ಹಲಗೆಗಳನ್ನು ಇಳಿಸಿ ನೀರು ಸಂಗ್ರಹಗೊಳಿಸಿದರೂ ಬಹಳ ದಿನಗಳವರೆಗೆ ಉಪಯೋಗಕ್ಕೆ ಸಿಗುವುದು ಅನುಮಾನ. ಕಳೆದ ನಾಲ್ಕು ದಿನಗಳ ಹಿಂದೆ ಸಣ್ಣ ನೀರಾವರಿ ಇಲಾಖೆಯಿಂದ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ್ದ ಮರಮಟ್ಟುಗಳನ್ನು ತೆರವುಗೊಳಿಸಿ ಒಂದು ಹಂತದ ಕಾಮಗಾರಿ ನಡೆಸಿ ಕೊಡಲಾಗಿತ್ತು. ಆದರೆ ಈ ಪ್ರದೇಶದಲ್ಲಿ ಸಂಗ್ರಹಗೊಂಡಿರುವ ಮರಳು ತೆರವುಗೊಳ್ಳದಿದ್ದರೆ ಹೆಚ್ಚಿನ ನೀರು ಸಂಗ್ರಹ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಭೇಟಿ ನೀಡಿ ಅವಲೋಕನ ನಡೆಸಿದರು.

    ಸಣ್ಣ ನೀರಾವರಿ ಇಲಾಖೆಯಿಂದ ಇಂಜಿನಿಯರ್ ರಾಕೇಶ್, ಮುಂಡಾಜೆ ಗ್ರಾಮಕರಣಿಕ ರಾಘವೇಂದ್ರ, ಕಿಂಡಿ ಅಣೆಕಟ್ಟಿನ ನೀರಿನ ಫಲಾನುಭವಿಗಳಾದ ಸುಬ್ರಾಯ ಫಡ್ಕೆ, ಶಶಿಧರ ಠೋಸರ್, ಶಶಾಂಕ ಮರಾಠೆ ಉಪಸ್ಥಿತರಿದ್ದರು.

    ಕಿಂಡಿ ಅಣೆಕಟ್ಟಿನ ಪರಿಸರದಲ್ಲಿ ತುಂಬಿರುವ ಮರಳಿನ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ತೆರವುಗೊಳಿಸುವ ಕುರಿತು ಅವರು ನಿರ್ಣಯ ಕೈಗೊಳ್ಳಲಿದ್ದಾರೆ.
    -ವಸುಧಾ, ಭೂ ಮತ್ತು ಗಣಿ ವಿಜ್ಞಾನ ಇಲಾಖಾ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts