More

    ಮರಳು ಅಕ್ರಮ ಸಾಗಣೆಗೆ ಕಡಿವಾಣ ಹಾಕಿ: ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರ ಗ್ರಾಮಸ್ಥರ ಒತ್ತಾಯ

    ಕಾರಟಗಿ: ತಾಲೂಕಿನ ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರ ಮಾರ್ಗದಲ್ಲಿ ಅಕ್ರಮವಾಗಿ ಮರಳು ಹಾಗೂ ಮರಂ ಸಾಗಿಸುತ್ತಿರುವ ವಾಹನಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಗ್ರಾಮಸ್ಥರು ಬುಧವಾರ ಗ್ರೇಡ್-2 ತಹಸೀಲ್ದಾರ್ ಎಂ.ವಿಶ್ವನಾಥ, ಪಿಐ ವೀರಭದ್ರಯ್ಯ ಹಿರೇಮಠಗೆ ಮನವಿ ಸಲ್ಲಿಸಿದರು.

    ಟಿಪ್ಪರ್ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಮರಳು ಹಾಗೂ ಮರಂ ಅನ್ನು ಅಕ್ರಮವಾಗಿ ಹಗಲು-ರಾತ್ರಿ ಎನ್ನದೇ ಸಾಗಿಸಲಾಗುತ್ತಿದೆ. ತ್ರಿವಳಿ ಗ್ರಾಮಗಳ ಮಧ್ಯೆ ಇರುವ ಮುಖ್ಯರಸ್ತೆಯಲ್ಲಿ ನಿರಂತರ ವಾಹನಗಳ ಓಡಾಟದಿಂದ ಮನೆಗಳಿಗೆ ಧೂಳು ಆವರಿಸುತ್ತಿದೆ. ವಾಹನಗಳ ಸದ್ದಿನಿಂದ ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಲ್ಲದೆ, ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ಕೃಷಿ ಕಾರ್ಮಿಕರು ಸಂಚರಿಸಲು ಭಯಪಡುವಂತಾಗಿದೆ. ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಶಾಲಾ-ಕಾಲೇಜಿಗೆ ಓಡಾಡುವಂತಾಗಿದೆ. ಹಗಲು ಒಂದು ರೀತಿಯ ವೇದನೆಯಾದರೆ, ರಾತ್ರಿ ವಾಹನಗಳ ಶಬ್ದದಿಂದ ನಿದ್ದೆ ಬಾರದಂತಾಗುತ್ತದೆ. ಇವುಗಳ ಸಂಚಾರಕ್ಕೆ ಕಡಿವಾಣ ಹಾಕುವಂತೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಕ್ರಮಕೈಗೊಳ್ಳದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಗ್ರಾಮಸ್ಥರಾದ ಶಿವಕುಮಾರ ಬಜಾರ್, ಶರಣಪ್ಪ, ಜಡೇಜಗೌಡ, ಶರಣಬಸವ ಹುರುಕಡ್ಲಿ, ಸಿದ್ದನಗೌಡ ಬಜಾರ್, ಶರಣೇಗೌಡ ಪೊ.ಪಾ., ಲಿಂಗಪ್ಪ ಹುರುಕಡ್ಲಿ, ವಿಠೋಬ, ವೀರೇಶ, ಶರಣಯ್ಯಸ್ವಾಮಿ, ಶಿವರೆಡ್ಡಿ, ನಾಗರಾಜ, ಬಸಟ್ಟೆಪ್ಪ, ವೀರೇಶ ಬಳಿಗಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts