More

    ಎರಡು ವರ್ಷದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆ, ಸನಾತನ ಸಂಸ್ಥೆಯ ಸಾಧಕಿ ಸೌ. ಲಕ್ಷ್ಮೀ ಪೈ ಹೇಳಿಕೆ

    ಮಂಗಳೂರು: ಭವ್ಯ ಪರಂಪರೆಯಿರುವ ಭರತ ದೇಶದಲ್ಲಿ ಮುಂದಿನ 2 ವರ್ಷದಲ್ಲಿ ಹಿಂದು ರಾಷ್ಟ್ರ ಸ್ಥಾಪನೆಯಾಗಲಿದೆ ಎಂದು ಸನಾತನ ಸಂಸ್ಥೆಯ ಸಾಧಕಿ ಸೌ. ಲಕ್ಷ್ಮಿ ಪೈ ಹೇಳಿದರು.

    ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ 81ನೇ ಜನ್ಮೋತ್ಸವದ ನಿಮಿತ್ತ ಮಂಗಳೂರಿನ ಪಿ.ವಿ. ಎಸ್.ಸರ್ಕಲ್‌ನಲ್ಲಿ ಧರ್ಮಧ್ವಜದ ಪೂಜೆಯೊಂದಿಗೆ ನಡೆದ ಶೋಭಾಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಹಿಂದು ಧರ್ಮದ ಶ್ರೇಷ್ಠತೆ ಏನೆಂದರೆ ಭವಿಷ್ಯತ್ ಕಾಲದಲ್ಲಿ ನಡೆಯುವ ವಿಚಾರಗಳನ್ನು ತ್ರಿಕಾಲ ಜ್ಞಾನಿಗಳಂತ ಸಂತರು ಮೊದಲೇ ಹೇಳಿರುತ್ತಾರೆ. ರಾಮಾಯಣ ಘಟಿಸುವ ಮೊದಲೇ ವಾಲ್ಮೀಕಿ ಮುನಿ ತಮ್ಮ ದಿವ್ಯ ದೃಷ್ಟಿಯಿಂದ ಕಂಡುಕೊಂಡ ನಂತರ ಅದನ್ನು ರಚನೆ ಮಾಡಿದರು. ಆಮೇಲೆ ಭವ್ಯ ದಿವ್ಯ ರಾಮರಾಜ್ಯದ ಸ್ಥಾಪನೆಯಾಯಿತು. ಅದೇ ರೀತಿ 2025ಕ್ಕೆ ಈಶ್ವರೀ ರಾಜ್ಯ ಅಂದರೆ ಹಿಂದು ರಾಷ್ಟ್ರ ಬರಲಿದೆ ಎಂದರು.

    ಹಿಂದು ಜನಜಾಗೃತಿ ಸಮಿತಿಯ ಗುರುಪ್ರಸಾದ್ ಗೌಡ ಮಾತನಾಡಿ, ಹಿಂದು ಜನಜಾಗೃತಿ ಸಮಿತಿಯು ಇಡೀ ವಿಶ್ವದಲ್ಲಿ ಧರ್ಮ ಸಂಸ್ಥಾಪನೆ ಮಾಡುವ ಕಾರ್ಯ ಮಾಡುತ್ತಾ ಇದೆ. ಯಾವ ರೀತಿ ರಾಮಾಯಣದಲ್ಲಿ ವಾನರ ಸೇನೆಗಳು ಶ್ರೀ ರಾಮನ ನಾಮ ಮಾಡುತ್ತಾ ಭವ್ಯ ಸೇತುವೆ ನಿರ್ಮಾಣವಾಯಿತೋ ಅದೇ ರೀತಿ ನಾವು ಮಾಡುವ ಪ್ರತಿಯೊಂದು ಆಂದೋಲನ, ಧರ್ಮ ಸಭೆಗಳು, ಧರ್ಮ ಶಿಕ್ಷಣ ವರ್ಗಗಳು ಹಾಗೂ ಈ ಶೋಭಾಯಾತ್ರೆಯು ಕೂಡ ನಮ್ಮೆಲ್ಲರನ್ನು ರಾಮ ರಾಜ್ಯದ ಕಡೆಗೆ ಕೊಂಡಯುತ್ತದೆ ಎಂದರು.

    ವಕೀಲ ಉದಯಕುಮಾರ್ ಬಿ. ಕೆ, ಸನಾತನ ಸಂಸ್ಥೆಯ ಪುಷ್ಪ ಮೇಸ್ತ, ಉದ್ಯಮಿಗಳಾದ ಮಧುಸೂದನ ಆಯರ್, ದಿನೇಶ್ ಎಂ.ಪಿ., ಬಾಲಗಂಗಾಧರ್ ಕೋಡಿಕಲ್, ವರದರಾಜ್ ಕೋಡಿಕಲ್, ಪ್ರಶಾಂತ್ ಕಾಂಚನ್, ಭಾಸ್ಕರ ಸುವರ್ಣ, ಆನಂದ ಗೌಡ ಉಜಿರೆ, ಮುಂತಾದವರು ಉಪಸ್ಥಿತರಿದ್ದರು. ವಿವೇಕ್ ಪೈ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts