More

    ಸಲಿಂಗ ವಿವಾಹ ಮಾನ್ಯತೆ ಪಡೆಯಬಾರದು ಎಂದು ಸರ್ವೋಚ್ಚ ನ್ಯಾಯಾಲಯವನ್ನು ಒತ್ತಾಯಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಸಲಿಂಗ ವಿವಾಹ ದೇಶದ ಸಾಮಾಜಿಕ ನೀತಿಗಳಿಂದ ದೂರವಿರುವ “ನಗರದ ಎಲೈಟ್ ಜನರ ಪರಿಕಲ್ಪನೆ” ಎಂದು ಕೇಂದ್ರವು ಭಾನುವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಅದರ ಕಾನೂನು ಮಾನ್ಯತೆಯನ್ನು ಕೋರಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸುವಂತೆ ಕೆಂದ್ರ ಸರ್ಕಾರ ಸುಪ್ರೀಂ ಕೋರ್ಟ್ಅನ್ನು ಒತ್ತಾಯಿಸಿದೆ.

    ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವನ್ನು ರಚಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠ ಮಂಗಳವಾರ ಅರ್ಜಿಗಳ ವಿಚಾರಣೆ ಆರಂಭಿಸಲಿದೆ.

    ಸಲಿಂಗ ವಿವಾಹ ಮಾನ್ಯತೆ ಪಡೆದರೆ ಹೊಸ ಸಾಮಾಜಿಕ ಸಂಸ್ಥೆ ಜನಿಸಿದಂತೆ

    ವಿಚಾರಣೆಗೆ ಮುಂಚಿತವಾಗಿ, ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದ್ದು, ಭಿನ್ನಲಿಂಗೀಯ ಒಕ್ಕೂಟವನ್ನು ಮೀರಿ ಮದುವೆಯ ಪರಿಕಲ್ಪನೆಯನ್ನು ವಿಸ್ತರಿಸುವುದು “ಹೊಸ ಸಾಮಾಜಿಕ ಸಂಸ್ಥೆಯನ್ನು ರಚಿಸುವುದಕ್ಕೆ ಸಮಾನವಾಗಿದೆ” ಎಂದು ಹೇಳಿದೆ.

    ಸಾಮಾಜಿಕ ನಿರ್ಧಾರಗಳನ್ನು ಸಂಸತ್ತು ಮಾತ್ರ ತೆಗೆದುಕೊಳ್ಳಬಹುದು!

    ಎಲ್ಲಾ ಗ್ರಾಮೀಣ, ಅರೆ-ಗ್ರಾಮೀಣ ಮತ್ತು ನಗರ ಜನಸಂಖ್ಯೆಯ ವಿಶಾಲ ದೃಷ್ಟಿಕೋನಗಳು, ಧಾರ್ಮಿಕ ಪಂಗಡಗಳ ದೃಷ್ಟಿಕೋನಗಳು ಮತ್ತು ವೈಯಕ್ತಿಕ ಕಾನೂನುಗಳು ಮತ್ತು ವಿವಾಹ ಕ್ಷೇತ್ರವನ್ನು ನಿಯಂತ್ರಿಸುವ ಪದ್ಧತಿಗಳನ್ನು ಗಣನೆಗೆ ತೆಗೆದುಕೊಂಡು ಸಂಸತ್ತು ಮಾತ್ರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಕೇಂದ್ರ ಹೇಳಿದೆ.

    ನಿಗದಿತ ವಿಚಾರಣೆಗೆ ಎರಡು ದಿನಗಳ ಮೊದಲು ಸಲ್ಲಿಸಿದ ಅರ್ಜಿಯ ಮೂಲಕ ಪ್ರಾಥಮಿಕ ಆಕ್ಷೇಪಣೆಗಳನ್ನು ಎತ್ತಿದ ಕೇಂದ್ರ ಸರ್ಕಾರ, ಅರ್ಜಿದಾರರು, ಸಲಿಂಗ ವಿವಾಹದ ಹಕ್ಕುಗಳನ್ನು ಒತ್ತಾಯಿಸುವ ಮೂಲಕ, “ಸಾಮಾಜಿಕ ಸ್ವೀಕಾರದ ಉದ್ದೇಶಕ್ಕಾಗಿ ಕೇವಲ ನಗರ ಗಣ್ಯರ ದೃಷ್ಟಿಕೋನಗಳನ್ನು ಮುಂದಿಡುತ್ತಿದ್ದಾರೆ” ಎಂದು ಹೇಳಿದೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts