More

    ಡಿವೋರ್ಸ್‌ಗೆ ಕಾರಣ ಆದವನ ಜತೆಗಿರುವ ವಿಡಿಯೋ ಹಂಚಿಕೊಂಡ ಸಮಂತಾ! ನೆಟ್ಟಿಗರು ಗರಂ

    ಟಾಲಿವುಡ್‌ನ ಖ್ಯಾತ ಜೋಡಿಗಳಲ್ಲಿ ಅಕ್ಕಿನೇನಿ ನಾಗಚೈತನ್ಯ ಹಾಗೂ ನಟಿ ಸಮಂತಾ ರುತ್ ಪ್ರಭು ಅವರು ಒಂದಾಗಿದ್ದರು. ಒಟ್ಟಿಗೆ ಸಿನಿಮಾ ರಂಗಕ್ಕೆ ಕಾಲಿಟ್ಟು, ಪ್ರೀತಿಯಲ್ಲಿ ಬಿದ್ದು, ನಂತರ ಮದುವೆಯೂ ಆಗಿದ್ದರು. ಆದರೆ, ಸಮಂತಾ ಅವರು ನಾಗಚೈತನ್ಯಾ ಜೊತೆ ಡಿವೋರ್ಸ್ ಪಡೆದ ಬಳಿಕ ಅವರ ಜೀವನದಲ್ಲಿ ಎಲ್ಲವೂ ಬದಲಾಗಿದೆ. ಇನ್ನು, ಈ ಮುದ್ದಾದ ಜೋಡಿಯ ಡಿವೋರ್ಸ್​ನ ಹಿಂದೆ ಸಾಕಷ್ಟು ಅನುಮಾನಗಳು ಮೂಡಿತ್ತು. ಈ ಜೋಡಿಗೆ ಹತ್ತಿರವಾದವದಿಂದ ಅವರ ಡಿವೋರ್ಸ್​ಗೆ ಅನೇಕ ಕಾರಣಗಳು ಇವೆ ಎಂದು ಕೇಳಿಬಂತು. ಆ ಹಲವು ಕಾರಣಗಳ ಪೈಕಿ ಸದ್ಯ ಒಂದು ಕಾರಣ ಪ್ರಮುಖವಾಗಿ ಕೇಳಿ ಬರುತ್ತಿದೆ. ಅದು, ಸಮಂತಾ ಮತ್ತು ಕಾಸ್ಟ್ಯೂಮ್ ಡಿಸೈನರ್ ಪ್ರೀತಂ ಜುಕಾಲ್ಕರ್ ನಡುವೆ ಇರುವ ಸಂಬಂಧ. ಹೌದು, ಇತ್ತೀಚಿನ ದಿನಗಳಲ್ಲಿ ಸಮಂತಾ ಜತೆಗೆ ಕಾಸ್ಟ್ಯೂಮ್ ಡಿಸೈನರ್ ಪ್ರೀತಂ ಹೆಸರು ಸಿಕ್ಕಾಪಟ್ಟೆ ಹೆಚ್ಚಾಗಿ ಕೇಳಿಬರುತ್ತಿದೆ.

    ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್‌ಗೆ ಕಾಸ್ಟ್ಯೂಮ್ ಡಿಸೈನರ್ ಪ್ರೀತಂ ಕಾರಣ ಎಂದು ಹಲವು ಭಾರಿ ಕೇಳಿಬಂದಿದೆ. ಅವರಿಬ್ಬರ ನಡುವೆ ಇದ್ದ ಸ್ನೇಹವೇ ಟಾಲಿವುಡ್‌ನ ಈ ಕಪಲ್ ದೂರವಾಗಲು ಕಾರಣ ಎಂದು ಹೇಳಲಾಗಿತ್ತು. ಇದಕ್ಕೆ ಉದಾಹರಣೆಯಾಗಿ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಸಮಂತಾ ಮತ್ತು ಅವರ ಕಾಸ್ಟ್ಯೂಮ್ ಡಿಸೈನರ್ ಪ್ರೀತಂ ಜುಕಾಲ್ಕರ್ ಜೊತೆ ಇರುವ ಫೋಟೋಗಳು, ಪ್ರೀತಂ ಹುಟ್ಟುಹಬ್ಬದ ದಿನ ಸಮಂತಾ ಒಂದು ಫೋಟೊಶೇರ್ ಮಾಡಿ ಅವರಿಗೆ ವಿಶ್ ಮಾಡಿದ ಪರಿ, ಎಲ್ಲವನ್ನು ನೆಟ್ಟಿಗರು ಗಮನಿಸುತ್ತಿದ್ದರು. ಅದರಲ್ಲಿಯೂ, ಒಂದು ಫೋಟೋದಲ್ಲಿ ಸಮಂತಾ ಮತ್ತು ಪ್ರೀತಂ ಬಹಳ ಸಲುಗೆಯಿಂದ ಇದ್ದಂತೆ ಕಾಣುತ್ತಿತ್ತು. ಇದರಿಂದಾಗಿ, ನಟಿ ಸಮಂತಾ ಹಿಗ್ಗಾಮುಗ್ಗಾ ಟ್ರೋಲ್‌ ಸಹ ಆಗಿದ್ದರು. ಆ ಫೋಟೋಗಳು ಮತ್ತು ಒಂದು ವಿಡಿಯೋ ಕಂಡ ನೆಟ್ಟಿಗರು ಸ್ಯಾಮ್ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದರು. ಆಗ ಸಮಂತಾ ಒಂದು ಫೋಟೋವನ್ನು ಡಿಲೀಟ್ ಕೂಡಾ ಮಾಡಿದ್ದರು.

    ಆದರೆ, ಇಷ್ಟಾದರೂ ಕೂಡಾ ನಟಿ ಸಮಂತಾ ಈಗಲೂ ಡಿಸೈನರ್ ಪ್ರೀತಂ ಜುಕಾಲ್ಕರ್ ಜೊತೆ ಮೊದಲಿನಂತೆ ಸ್ನೇಹದಿಂದಲೇ ಇದ್ದಾರೆ. ಸಮಂತಾ ಮತ್ತು ಡಿಸೈನರ್ ಪ್ರೀತಂ ಜುಕಾಲ್ಕರ್ ನಡುವೆ ಅದೇನೆ ಗಾಸಿಪ್‌ಗಳು ಬಂದರೂ ಅವುಗಳ ಬಗ್ಗೆ ನಟಿ ಸಮಂತಾ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎಂಬಂತೆ ಕಾಣುತ್ತಿದೆ. ಇದೀಗ, ಮತ್ತೆ ಡಿಸೈನರ್ ಪ್ರೀತಂ ಜುಕಾಲ್ಕರ್ ಅವರೊಂದಿಗೆ ಕ್ಲಿಕ್ ಮಾಡಿಕೊಂಡಿರುವ ಒಂದಿಷ್ಟು ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇಂದು ಅಂದರೆ ಮಾ. 25 ರಂದು ಡಿಸೈನರ್ ಪ್ರೀತಂ ಜುಕಾಲ್ಕರ್‌ಗೆ ಹೇರ್‌ಕಟ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ ನಟಿ ಸಮಂತಾ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಸ್ಯಾಮ್ ಹಾಗೂ ಚೈತನ್ಯ ಅವರ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ

    ಡಿವೋರ್ಸ್‌ಗೆ ಕಾರಣ ಆದವನ ಜತೆಗಿರುವ ವಿಡಿಯೋ ಹಂಚಿಕೊಂಡ ಸಮಂತಾ! ನೆಟ್ಟಿಗರು ಗರಂ

    ನಿರ್ದೇಶಕ ಅನೂಪ್ ಭಂಡಾರಿಗೆ ದುಬಾರಿ SUV ಕಾರು ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್!

    ಆರ್​ಆರ್​ಆರ್ ನೋಡಲು ಬಂದ ಅಪ್ಪು ಅಭಿಮಾನಿಗಳು ಮಾಡಿದ ಕೆಲಸ ಮನಕಲಕುತ್ತೆ!


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts