ಲಾಕ್‌ಡೌನ್ ಶುರುವಾಗಿ ಈ ಒಂದು ತಿಂಗಳಲ್ಲಿ ಎಲ್ಲಾ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳ ಜತೆಗೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಆದರೆ, ಸಮಂತಾ ಮಾತ್ರ ಲಾಕ್‌ಡೌನ್ ಶುರುವಾಗುತ್ತಿದ್ದಂತೆಯೇ, ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳನ್ನೂ ಲಾಕ್‌ಡೌನ್ ಮಾಡಿ ನಾಪತ್ತೆಯಾಗಿಬಿಟ್ಟಿದ್ದರು. ಒಂದು ಹಂತದಲ್ಲಿ ಅವರು ಪ್ರೆಗ್ನೆಂಟ್ ಇರಬಹುದಾ? ಅದನ್ನು ಮುಚ್ಚಿಡುವುದಕ್ಕೆ ಸೋಷಿಯಲ್ ಮೀಡಿಯಾದಿಂದ ದೂರ ಇದ್ದಾರಾ? ಎಂಬ ಪ್ರಶ್ನೆಗಳೂ ಸಮಂತಾ ಅಭಿಮಾನಿಗಳನ್ನು ಕಾಡಿತು.
ಇದಕ್ಕೆ ಉತ್ತರವಾಗಿ ಸಮಂತಾ ಮತ್ತೆ ಕಾಣಿಸಿಕೊಂಡಿದ್ದಾರೆ. ತಮ್ಮ ನಾಯಿಯನ್ನು ತಬ್ಬಿ ಹಿಡಿದ ಫೋಟೋವೊಂದನ್ನು ಅವರು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರ ಮುಖ ಕಾಣುವುದಿಲ್ಲವಾದರೂ, ಪೋಸ್ಟ್ ಆಗಿರುವುದು ಅವರ ಅಕೌಂಟ್‌ನಲ್ಲಾಗಿರುವುದರಿಂದ, ಇದು ಅವರೇ ಎಂದು ನಂಬಬೇಕು. ಫೋಟೋ ಜತೆಗೆ, ‘ಬ್ಯಾಕ್ ಫ್ರಮ್ ಮೈ ಲಾಂಗ್ ಸ್ಲೀಪ್ … ಸ್ಟೇ ಹೋಮ್’ ಎಂದು ಅವರು ಬರೆದುಕೊಂಡಿದ್ದಾರೆ.
ಇಷ್ಟಕ್ಕೂ ಸಮಂತಾ ಯಾಕೆ ಸೋಷಿಯಲ್ ಮೀಡಿಯಾದಿಂದ ದೂರವಿದ್ದರು ಎಂಬ ಪ್ರಶ್ನೆ ಎದುರಾಗುವುದು ಸಹಜ. ಸಮಂತಾ ಈ ಸಮಯವನ್ನು ಗಂಡನ ಜತೆಗೆ ಕಳೆದರಂತೆ. ಶೂಟಿಂಗ್ ಶುರುವಾದ ಮೇಲೆ ಬ್ಯುಸಿಯಾಗಿರುವುದು ಇದ್ದೇ ಇರುತ್ತದೆ. ಸದ್ಯಕ್ಕೆ ಏನೂ ಇಲ್ಲವಾದ್ದರಿಂದ, ಈ ಸಮಯವನ್ನು ಉಪಯೋಗಿಸಿಕೊಂಡಿದ್ದಾರೆ ಸಮಂತಾ ಎಂದು ಹೇಳಲಾಗುತ್ತಿದೆ.