More

    ಸ್ಥಳೀಯ ಸಂಸ್ಥೆಗಳಿಂದ ಸಮಾಜಮುಖಿ ಕಾರ್ಯ : ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮೆಚ್ಚುಗೆ ಬಾಷ್ ನಿರ್ಮಿಸಿದ ಅಂಗನವಾಡಿ, ಸೀಶಕ್ತಿ ಭವನ ಲೋಕಾರ್ಪಣೆ

    ಬಿಡದಿ : ಸ್ಥಳೀಯ ಕಂಪನಿಗಳು ಶಿಕ್ಷಣ, ಪರಿಸರ ಮತ್ತು ಸಮುದಾಯಕ್ಕೆ ಉಪಯುಕ್ತವಾದ ಕೆಲಸಗಳನ್ನು ಮಾಡುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
    ಬಿಡದಿ ಹೋಬಳಿ ಮಂಚನಾಯ್ಕನಹಳ್ಳಿ ಗ್ರಾಪಂ ವ್ಯಾಪ್ತಿಯ ಶ್ಯಾನುಮಂಗಲದಲ್ಲಿ ಬುಧವಾರ ಬಾಷ್ ರೆಕ್ಸ್‌ರಾಥ್ ಕಂಪನಿ ವತಿಯಿಂದ 21 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರ ಮತ್ತು ಸ್ತ್ರೀಶಕ್ತಿ ಭವನದ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ರಾಜಕಾರಣಿಗಳು ಕಟ್ಟಡಗಳನ್ನು ನಿರ್ಮಿಸಿದ್ದರೆ ಕಳಪೆ ಕಾಮಗಾರಿ ಬಗ್ಗೆ ಸಾರ್ವಜನಿಕರಿಂದ ದೂರುಗಳು ವ್ಯಕ್ತವಾಗುತ್ತಿದ್ದವು, ಆದರೆ ಪ್ರತಿವರ್ಷ ಬಾಷ್ ಕಂಪನಿ ನಿರ್ಮಿಸುತ್ತಿರುವ ಕಟ್ಟಡಗಳು ಗುಣಮಟ್ಟದಿಂದ ಕೂಡಿರುತ್ತವೆ. ಈ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಅಂಗನವಾಡಿ ಮತ್ತು ಸ್ತ್ರೀಶಕ್ತಿ ಭವನ ಉದ್ಘಾಟಿಸಿ ಮಾತನಾಡಿದ ಶಾಸಕ ಎ.ಮಂಜುನಾಥ್, ಟೊಯೋಟಾ ಮತ್ತು ಬಾಷ್ ಕಂಪನಿಗಳು ಬಿಡದಿ ಭಾಗದಲ್ಲಿ ಆರಂಭವಾದಾಗ ಸಮುದಾಯದ ಕೆಲಸಗಳು ನಡೆಯುತ್ತವೆ ಎಂದು ಭಾವಿಸಿರಲಿಲ್ಲ.

    ನಂತರದ ದಿನಗಳಲ್ಲಿ ಶ್ಯಾನುಮಂಗಲ ಕೆರೆ ಅಭಿವೃದ್ಧಿಪಡಿಸಿ ಪಕ್ಷಿ ಸಂಕುಲಗಳ ಉಳಿವಿಗಾಗಿ ಉತ್ತಮ ವಾತಾವರಣ ನಿರ್ಮಿಸಿರುವುದು, ಶಾಲೆ, ಅಂಗನವಾಡಿ ಕಟ್ಟಡ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ನೈಪುಣ್ಯ ಮತ್ತು ಕೌಶಲ ವೃದ್ಧಿಸಲು ತರಬೇತಿ ನೀಡುವ ಕೇಂದ್ರವನ್ನು ಆಕರ್ಷಿತವಾಗಿ ನಿರ್ಮಾಣ ಮಾಡಿ ಸಮಾಜಕ್ಕೆ ಹಸ್ತಾಂತರ ಮಾಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಬಿಡದಿ ಹೋಬಳಿಯಲ್ಲಿ ಬಾಷ್ ಕಂಪನಿ ವತಿಯಿಂದ 18 ಮತ್ತು ರೆಕ್ಸ್ ರಾಥ್ ಕಂಪನಿಯಿಂದ 2 ಸೇರಿ ಸಿಎಸ್‌ಆರ್ ಅನುದಾನದಲ್ಲಿ ಒಟ್ಟು 20 ಅಂಗನವಾಡಿ ಕೇಂದ್ರಗಳು ನಿರ್ಮಾಣವಾಗಿವೆ. ಅಷ್ಟೇ ಅಲ್ಲದೆ ನೆಹರೂ ತಾರಾಲಯದ ವಾತಾವರಣದಲ್ಲಿ ಚಿಕ್ಕಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ಸೃಷ್ಟಿ ಮಾಡಿದ್ದು, ಅಂಗನವಾಡಿ ಕಾರ್ಯಕರ್ತೆಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

    ಮುಖ್ಯ ಅತಿಥಿಯಾಗಿ ಮಾತನಾಡಿದ ಬಾಷ್ ಇಂಡಿಯಾ ಪ್ರತಿಷ್ಠಾನದ ಕ್ಷೇತ್ರ ನಿರ್ದೇಶಕ (ಯೋಜನೆ) ಡಾ. ಪುಂಡಲೀಕ ಕಾಮತ್, ಮಗು ಐದು ವರ್ಷಗಳಲ್ಲಿ ಹೆಚ್ಚು ಶಬ್ದಗಳನ್ನು ಕಲಿಯಬೇಕಾಗುತ್ತದೆ. ಆಗ ಮಕ್ಕಳಲ್ಲಿ ಮಾನಸಿಕ ಸ್ಥಿತಿ ವೃದ್ಧಿಯಾಗಲಿದೆ. ಹಾಗಾಗಿ ಅಂಗನವಾಡಿಯಲ್ಲಿ ಬಣ್ಣದ ಚಿತ್ರಗಳು, ವಿಜ್ಞಾನದ ವಿಷಯಗಳನ್ನು ಆಕರ್ಷಕವಾಗಿ ಚಿತ್ರಿಸಲಾಗಿದೆ ಎಂದರು.

    ಮಂಚನಾಯ್ಕನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ನಂದಪ್ರಭಾ ಆನಂದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್, ಬಾಷ್ ರೆಕ್ಸ್‌ರಾಥ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶ್ಯಾಂಪ್ರಸಾದ್, ಹಣಕಾಸು ಮುಖ್ಯಸ್ಥೆ ಶಶಿಬಿಂದು, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಸಿಡಿಪಿಒ ಸಿ.ವಿ.ರಾಮನ್, ಗ್ರಾಪಂ ಸದಸ್ಯರಾದ ಮಂಜುಳಾ, ಗೋವಿಂದಪ್ಪ, ವೇಣುಗೋಪಾಲ್, ನಾಗೇಶ್ ಮುಖಂಡರಾದ ಪುಟ್ಟಸ್ವಾಮಿ, ಗೋವಿಂದರಾಜು ಮತ್ತಿತರರು ಇದ್ದರು.ಕಾರ್ಯಕ್ರಮಕ್ಕೂ ಮುನ್ನ ಟೊಯೋಟಾ ಗೋಸಾಯಿ ಕಂಪನಿ ವತಿಯಿಂದ ಶೇಷಗಿರಿಹಳ್ಳಿಯಲ್ಲಿ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts