More

    ಶಿವನಾಮ ಸ್ಮರಣೆಯಿಂದ ಮೋಕ್ಷ ಪ್ರಾಪ್ತಿ

    ಶೃಂಗೇರಿ: ಸನಾತನ ಧರ್ಮದಲ್ಲಿ ಶಿವನ ಆರಾಧನೆ ಅನಾದಿಕಾಲದಿಂದ ನಡೆದುಕೊಂಡು ಬಂದ ಪರಂಪರೆ. ಈಶ್ವರನ ಆರಾಧನೆಯನ್ನು ಮಾಡುವ ಪರ್ವ ದಿನ ಶಿವರಾತ್ರಿಯಾಗಿದ್ದು, ಶಿವಾನಂದ ಲಹರಿ, ಪುರಣಾದಿ ಪಠನ, ಶಿವಮಂತ್ರ ಜಪದ ಮೂಲಕ ಪೂಜಿಸಿದಾಗ ಜನ್ಮಸಾರ್ಥಕ ಎಂದು ಶೃಂಗೇರಿ ಶ್ರೀಶಾರದಾ ಪೀಠದ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
    ಶುಕ್ರವಾರ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಸಾಮಾಜಿಕ ತಾಣದಲ್ಲಿ ಅನುಗ್ರಹ ನೀಡಿದ ಅವರು, ದೇವತೆಗಳು, ಮಹರ್ಷಿಗಳು, ಮಹಾ ಪುರುಷರು, ಮಹಾ ಜನರು, ಸಾಮಾನ್ಯರು ಕೂಡಾ ಶಿವನನ್ನು ಆರಾಧಿಸುತ್ತಾರೆ. ಪುರಾಣಗಳು,ಇತಿಹಾಸಗಳು,ಆಗಮ ಹಾಗೂ ತತ್ತ್ವ ಶಾಸಗಳಲ್ಲಿ ಈಶ್ವರನ ಮಹಿಮೆ ಕುರಿತು ಸಾಕಷ್ಟು ಮಾಹಿತಿಗಳು ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
    ಶಿವಪುರಾಣಗಳಲ್ಲಿ ಅನೇಕ ಭಾಗಗಳಿದ್ದು, ಅವುಗಳನ್ನು ಸಂಹಿತೆ ಎಂದು ಕರೆಯಲಾಗುತ್ತಿದೆ. ಈಶ್ವರನ ಆರಾಧನೆ ಕುರಿತು ವಾಯುವೀಯಾ ಸಂಹಿತೆಯಲ್ಲಿ ವಾಯುದೇವರು ಪರಮಶಿವನ ಮಹಾತ್ಮೆ ಕುರಿತು ಮಹರ್ಷಿಗಳಿಗೆ ಉಪದೇಶ ನೀಡಿದ ಕುರಿತು ಉಲ್ಲೇಖಿಸಲಾಗಿದೆ. ಪರಮೇಶ್ವರನನ್ನು ಎಂಟು ನಾಮಗಳ ಮೂಲಕ ಜಪಿಸಲಾಗುತ್ತಿದ್ದು, ಆತನನ್ನು ಶಿವ, ಮಹೇಶ್ವರ, ರುದ್ರ, ವಿಷ್ಣು, ಪಿತಾಮಹ ಮುಂತಾದ ನಾಮಗಳಿಂದ ಜಪಿಸಿದರೆ ಮೋಕ್ಷ ಲಭಿಸುತ್ತದೆ ಎಂದರು.
    ನಮ್ಮ ನಿಜವಾದ ಸ್ವರೂಪದ ಅರಿವು ಉಂಟಾಗ ಬೇಕಾದರೆ ನಾವು ಮಾಯೆ ಸುಳಿಯಲ್ಲಿ ಸಿಲುಕಿಕೊಳ್ಳಬಾರದು. ಯಾವುದು ವಾಸ್ತವ್ಯ ಇರುವುದಿಲ್ಲವೋ ಅದು ಇರುತ್ತದೆ ಎಂಬ ಭ್ರಮೆ ಮಾಯೆಯನ್ನು ಆವೃತ್ತವಾಗಿರುತ್ತದೆ. ಪರಮೇಶ್ವರನನ್ನು ಆರಾಧಿಸಿದ್ದರೆ ಮಾತ್ರ ಮಾಯೆಯಿಂದ ಹೊರಬರಲು ಸಾಧ್ಯ. ಪ್ರತಿಯೊಂದು ಕಾರಣಕ್ಕೂ ಶಿವಮೂಲ ಕಾರಣ. ಹುಟ್ಟು-ಸಾವಿನ ನಡುವೆ ಶರೀರಕ್ಕೆ ಆದ್ಯತೆ ನೀಡಬಾರದು. ಪರಬ್ರಹ್ಮ ಚಿಂತನೆ ಅತಿ ಅವಶ್ಯಕ. ಆಗ ಮಾತ್ರ ಮಾನವ ಪ್ರಜ್ಞಾನಿಯಾಗಲು ಸಾಧ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts