More

    ಶ್ರೀಲಂಕಾ ಟಿ20 ಲೀಗ್‌ ತಂಡವನ್ನು ಖರೀದಿಸಿದ ಸಲ್ಮಾನ್ ಖಾನ್ ಕುಟುಂಬ

    ನವದೆಹಲಿ: ಐಪಿಎಲ್ 13ನೇ ಆವೃತ್ತಿಗೆ ಕಿರುತೆರೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ರಿಯಾಲಿಟಿ ಶೋ ಠಕ್ಕರ್ ನೀಡುತ್ತಿದೆ. ಇದರ ನಡುವೆ, ಮುಂಬರುವ ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್) ಟಿ20 ಟೂರ್ನಿಯಲ್ಲಿ ಆಡುವ ಕ್ಯಾಂಡಿ ಟಸ್ಕರ್ಸ್‌ ತಂಡವನ್ನು ಸಲ್ಮಾನ್ ಖಾನ್ ಕುಟುಂಬವೇ ಖರೀದಿಸಿದೆ. ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ, ನಟ-ನಿರ್ಮಾಪಕ ಸೋಹೈಲ್ ಖಾನ್ ಅವರು ಕ್ಯಾಂಡಿ ಟಸ್ಕರ್ಸ್‌ ಫ್ರಾಂಚೈಸಿಯ ಮಾಲೀಕರಾಗಿದ್ದಾರೆ.

    ನವೆಂಬರ್ 21ರಿಂದ ಡಿಸೆಂಬರ್ 31ರವರೆಗೆ ಪಲ್ಲೆಕಿಲೆ ಮತ್ತು ಹಂಬಂತೋಟದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 5 ತಂಡಗಳು ಆಡಲಿವೆ. ಕೊಲಂಬೊ ಕಿಂಗ್ಸ್, ಡಂಬುಲಾ ಹ್ವಾಕ್ಸ್, ಗಾಲೆ ಗ್ಲಾಡಿಯೇಟರ್ಸ್‌ ಮತ್ತು ಜ್ನಾ ಸ್ಟೇಲಿಯನ್ಸ್ ತಂಡಗಳು ಕೂಡ ಕಣದಲ್ಲಿವೆ.

    ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ಸ್ಥಳೀಯ ತಾರೆಯರಾದ ಕುಸಲ್ ಪೆರೇರಾ, ಕುಸಲ್ ಮೆಂಡಿಸ್, ನುವಾನ್ ಪ್ರದೀಪ್, ಇಂಗ್ಲೆಂಡ್ ವೇಗಿ ಲಿಯಾಮ್ ಪ್ಲಂಕೆಟ್, ಪಾಕಿಸ್ತಾನದ ವಹಾಬ್ ರಿಯಾಜ್ ಈ ತಂಡದ ಆಟಗಾರರಾಗಿದ್ದಾರೆ. ಶ್ರೀಲಂಕಾದ ಮಾಜಿ ನಾಯಕ ಹಸನ್ ತಿಲಕರತ್ನೆ ತಂಡದ ತರಬೇತಿ ಸಿಬ್ಬಂದಿ ಬಳಗದಲ್ಲಿದ್ದಾರೆ.

    ‘ಲಂಕಾ ಪ್ರೀಮಿಯರ್ ಲೀಗ್ ಉತ್ತಮ ಯಶಸ್ಸ ಕಾಣುವ ಸಾಮರ್ಥ್ಯ ಹೊಂದಿದೆ. ಈ ಟೂರ್ನಿಯ ಭಾಗವಾಗುತ್ತಿರುವುದಕ್ಕೆ ಖುಷಿ ಇದೆ. ಶ್ರೀಲಂಕಾದ ಜನರು ಕ್ರಿಕೆಟ್ ಆಟವನ್ನು ಅಪಾರವಾಗಿ ಪ್ರೀತಿಸುತ್ತಾರೆ. ನಮ್ಮ ತಂಡಕ್ಕೆ ಅವರಿಂದ ಭಾರಿ ಬೆಂಬಲ ಲಭಿಸುವ ನಿರೀಕ್ಷೆ ಇದೆ. ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ಒಳಗೊಂಡ ಉತ್ತಮ ತಂಡ ನಮ್ಮದಾಗಿದೆ. ತಂಡದಲ್ಲಿ ಯುವ ಮತ್ತು ಅನುಭವಿ ಆಟಗಾರರ ಉತ್ತಮ ಮಿಶ್ರಣವಿದೆ. ನಮ್ಮ ತಂಡ ಪ್ರಶಸ್ತಿ ಸುತ್ತಿನಲ್ಲೂ ಆಡುವ ನಿರೀಕ್ಷೆಯಲ್ಲಿದ್ದೇನೆ’ ಎಂದು ಸೋಹೈಲ್ ಖಾನ್ ಹೇಳಿದ್ದಾರೆ.

    ಸೋಹೈಲ್ ಖಾನ್ ಜತೆಗೆ ಸಲ್ಮಾನ್ ಖಾನ್ ಅವರ ತಂದೆ ಸಲಿಮ್ ಖಾನ್ ಕೂಡ ಕ್ಯಾಂಡಿ ಟಸ್ಕರ್ಸ್‌ ತಂಡದ ಒಡೆತನ ಹೊಂದಿರುವ ‘ಸೋಹೈಲ್ ಖಾನ್ ಇಂಟರ್‌ನ್ಯಾಷನಲ್ ಎಲ್‌ಎಲ್‌ಪಿ’ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಕ್ಯಾಂಡಿ ತಂಡದ ಪಂದ್ಯಗಳಿಗೆ ಸಲ್ಮಾನ್ ಖಾನ್ ಕೂಡ ಹಾಜರಾಗಲಿದ್ದಾರೆ ಎಂದು ಸೋಹೈಲ್ ಖಾನ್ ತಿಳಿಸಿದ್ದಾರೆ.

    PHOTO | ವಧುವಿನ ಅಲಂಕಾರದಲ್ಲಿ ಬ್ಯಾಟಿಂಗ್! ಬಾಂಗ್ಲಾ ಮಹಿಳಾ ಕ್ರಿಕೆಟರ್ ವೆಡ್ಡಿಂಗ್ ಫೋಟೋಶೂಟ್ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts