More

    ಸಲ್ಮಾನ್​ ಖಾನ್​ ಜತೆ ಕ್ವಾರಂಟೈನ್​ ಕಷ್ಟ ಸುಖ…

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್​ಗೆ ಬ್ರೇಕ್​ ಬಿದ್ದಿದೆ. ಬಾಲಿವುಡ್​ನ ಬಹುತೇಕರೆಲ್ಲರೂ ಮನೆಯಲ್ಲೇ ಕಾಲಕಳೆಯುತ್ತಿದ್ದಾರೆ. ಹೀಗಿರುವಾಗ ಸಲ್ಮಾನ್​ ಖಾನ್​ ಮಾತ್ರ ಅಭಿಮಾನಿಗಳಿಗೆ ಒಳ್ಳೇ ಮನರಂಜನೆಯನ್ನೇ ನೀಡುತ್ತಿದ್ದಾರೆ. ಪ್ಯಾರ್​ ಕರೊನಾ ಸಿಂಗಲ್​ ಹಾಡಿನ ಮೂಲಕ ಫ್ಯಾನ್ಸ್​ಗೆ ಹತ್ತಿರವಾಗಿದ್ದ ಸಲ್ಮಾನ್​, ಅದಾದ ಬಳಿಕ ‘ತೇರೆ ಬಿನಾ’ ಮತ್ತು ರಂಜಾನ್​​ಗೆ ‘ಭಾಯಿ ಭಾಯಿ‘ ಅಂದರು. ಇದೀಗ ಅದೆಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಶೋವೊಂದರ ನಿರ್ಮಾಣಕ್ಕೆ ಸಲ್ಮಾನ್​ ಖಾನ್​ ಸಿದ್ಧತೆ ನಡೆಸಿದ್ದಾರೆ.

    ಇದನ್ನೂ ಓದಿ: VIDEO| ದೀಪಿಕಾ ಪಡುಕೋಣೆಯ ದಶಕದ ಹಿಂದಿನ ಜಾಹೀರಾತು ವಿಡಿಯೋ ವೈರಲ್!

    ಲಾಲ್​ಡೌನ್​ ಅವಧಿಯಲ್ಲಿ ವಿಡಿಯೋ ಸಾಂಗ್​ ಸೇರಿ ಒಟ್ಟು ಮೂರು ಹಾಡುಗಳನ್ನು ನೀಡಿರುವ ಸಲ್ಮಾನ್​, ಆ ಹಾಡುಗಳ ಬಹುಪಾಲು ಕೆಲಸ ಮತ್ತು ನಿರ್ದೇಶನವನ್ನು ಅವರೇ ನಿಭಾಯಿಸಿದ್ದಾರೆ. ಈಗಾಗಲೇ ದೊಡ್ಡ ದೊಡ್ಡ ರಿಯಾಲಿಟಿ ಶೋ ನಿರೂಪಣೆ ಮಾಡಿ ಅದರ ಅನುಭವವೂ ಇರುವ ಸಲ್ಮಾನ್​, ಇದೀಗ ಮೊದಲ ಬಾರಿ ತಮ್ಮದೆ ಆದ ಶೋ ಶುರು ಮಾಡಲಿದ್ದಾರೆ.

    ಇದನ್ನೂ ಓದಿ:ಹಾಗೆಲ್ಲಾ ಮಾಡ್ಬೇಡಿ … ಇನ್ನೊಮ್ಮೆ ಯೋಚನೆ ಮಾಡಿ …

    ಹಾಗಾದರೆ ಆ ಶೋದಲ್ಲಿ ಏನೆಲ್ಲ ಇರಲಿದೆ? ಲಾಕ್​ಡೌನ್ ಅವಧಿಯಲ್ಲಿ ಮುಂಬೈ ಹೊರವಲಯದ ಪಾನ್ವೆಲ್​ ಫಾರ್ಮ್​​ಹೌಸ್​ನಲ್ಲಿ 60 ದಿನಗಳನ್ನು ಸಲ್ಮಾನ್​ ಕಳೆದಿದ್ದಾರೆ. ಆ 60 ದಿನಗಳ ಅವಧಿಯಲ್ಲಿ ಸಲ್ಮಾನ್​ ಖಾನ್​ ಲೈಫ್ ನಲ್ಲಿ ಏನೆಲ್ಲ ಆಯಿತು ಎಂಬ ವಿಷಯವನ್ನಿಟ್ಟುಕೊಂಡು, ಶೋ ನಡೆಸಿಕೊಡಲಿದ್ದಾರೆ. ಹೌಸ್​ ಆಫ್​ ಬಾಯಿಜಾನ್​ ಹೆಸರಲ್ಲಿ ಶೋ ಮೂಡಿಬರಲಿದ್ದು, ಅದರ ಪ್ರಸಾರದ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಲಿದೆ. (ಏಜೆನ್ಸೀಸ್​)

    ರಷ್ಯನ್ ಭಾಷೆಯ ‘ಬಾಹುಬಲಿ – 2’ ನೋಡಿದ್ದೀರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts