More

    ಚಿತ್ರ ಸೋತರೂ 100 ಕೋಟಿ ಲಾಭ ಮಾಡಿಕೊಂಡ ಸಲ್ಮಾನ್

    ಮುಂಬೈ: ಸಲ್ಮಾನ್​ ಖಾನ್​ ಅಭಿನಯದ ರಾಧೇ ಚಿತ್ರವು ಬಿಡುಗಡೆಯಾಗಿ ಒಂದು ವಾರವಾಗಿದೆ. ಈ ಒಂದು ವಾರದಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಟೀಕೆ-ಟಿಪ್ಪಣಿಗಳು ಕೇಳಿ ಬಂದಿವೆ. ಚಿತ್ರದ ಬಗ್ಗೆ ಇಟ್ಟಿದ ನಿರೀಕ್ಷೆಗಳಿಗೆ ಸರಿಯಾಗಿ ಚಿತ್ರ ಮೂಡಿಬಂದಿಲ್ಲ ಎಂದು ಹಲವರು ತಮ್ಮ ಅಭಿಪ್ರಯಾಗಳನ್ನು ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ರಾಧೇ ಆಯ್ತು, ಈಗ ಅಂತಿಮ್ ಮತ್ತು ಮೈದಾನ್ ಮೇಲೆ ಜೀ ಕಣ್ಣು?

    ಚಿತ್ರ ಹೇಗಾದರೂ ಇರಲಿ ಮತ್ತು ಜನ ಏನೇ ಹೇಳಲಿ, ಸಲ್ಮಾನ್​ ಖಾನ್​ ಮಾತ್ರ ಇದರಿಂದ ಮಿನಿಮಮ್​ ನೂರು ಕೋಟಿ ಲಾಭ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಧೇ ಚಿತ್ರದಲ್ಲಿ ಸಲ್ಮಾನ್​ ನಾಯಕನಾಗಿ ನಟಿಸುವುದರ ಜತೆಗೆ, ಚಿತ್ರದ ನಿರ್ಮಾಣವನ್ನೂ ಮಾಡಿದ್ದಾರೆ. ತಮ್ಮ ಸಲ್ಮಾನ್​ ಖಾನ್​ ಫಿಲಂಸ್​ ಮೂಲಕ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರ ಸೋತಿದೆ ಎಂದು ಟ್ರೇಡ್​ ಪಂಡಿತರು ಹೇಳುತ್ತಿರುವಾಗ, ಲಾಭ ಗಳಿಸುವುದು ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು.

    ವಿಷಯವೇನೆಂದರೆ, ಸಲ್ಮಾನ್​ ಈ ಚಿತ್ರದ ವಿತರಣೆ, ಸ್ಯಾಟಿಲೈಟ್​, ಡಿಜಿಟಲ್​ ಮತ್ತು ಮ್ಯೂಸಿಕ್​ ಹಕ್ಕುಗಳನ್ನು ಜೀ ಸಂಸ್ಥೆಯವರಿಗೆ ಮಾರಾಟ ಮಾಡಿದ್ದರು. ಮೊದಲು, ಇಷ್ಟೂ ಹಕ್ಕುಗಳಿಗೆ 230 ಕೋಟಿಗಳ ಒಪ್ಪಂದವಾದರೂ, ಲಾಕ್​ಡೌನ್​ನಿಂದ ಚಿತ್ರಮಂದಿರಗಳು ಬಂದ್​ ಆದ ಕಾರಣ, 190 ಕೋಟಿ ರೂ.ಗಳಿಗೆ ಎಲ್ಲ ಹಕ್ಕುಗಳು ಮಾರಾಟವಾದವು.

    ಇದನ್ನೂ ಓದಿ: ಸುಳ್ಳುಸುದ್ದಿಗಳನ್ನು ನಂಬಲೇಬೇಡಿ ಎಂದ ಕೃತಿ ಶೆಟ್ಟಿ

    ಈ ಪೈಕಿ, ಸಲ್ಮಾನ್​ ಸಂಭಾವನೆಯನ್ನು ಸೇರಿಸಿ ಚಿತ್ರದ ಬಜೆಟ್​ 90  ಕೋಟಿ ರೂ. ಎಂದಿಟ್ಟುಕೊಂಡರೂ, ಅವರಿಗೆ 100 ಕೋಟಿಯಷ್ಟು ಲಾಭವಾದಂತಾಗುತ್ತದೆ. ಒಂದೇ ಚಿತ್ರದಿಂದ ಸಲ್ಮಾನ್​ ಅವರ ಸಂಪತ್ತು 100 ಕೋಟಿಯಷ್ಟು ಜಾಸ್ತಿಯಾಗಿದೆ.  ಸಲ್ಮಾನ್​ ಖಾನ್ ಏನೋ ಈ ಚಿತ್ರದಿಂದ ದುಡ್ಡು ಮಾಡಿಕೊಂಡರು. ಈ ಚಿತ್ರವನ್ನು ಖರೀದಿಸಿದ ಜೀ ಸಂಸ್ಥೆ ಎಷ್ಟು ಗಳಿಸಿತು ಎಂಬುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ.

    ರವಿಮಾಮನ ಫ್ಯಾನ್ ಸೂಜಿ; ಗುರು ಶಿಷ್ಯರು ಚಿತ್ರದಲ್ಲಿ ನಿಶ್ವಿಕಾ ಹೊಸ ಗೆಟಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts