More

    ಅಕ್ರಮ ಕಸಾಯಿಖಾನೆಗೆ ದಾಳಿ, 8 ದನ, 200 ಚರ್ಮ ವಶಕ್ಕೆ

    ವಿಟ್ಲ: ಸಾಲೆತ್ತೂರು ಗ್ರಾಮದ ಐತ್ತಕುಮೇರು ಎಂಬಲ್ಲಿ ಅಕ್ರಮ ಕಸಾಯಿಖಾನೆಗೆ ಗುರುವಾರ ದಾಳಿ ನಡೆಸಿದ ವಿಟ್ಲ ಪೊಲೀಸರು 200 ದನದ ಚರ್ಮ, 8 ಗೋವುಗಳ ಸಹಿತ ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
    ಕೊಳ್ನಾಡು ಕಟ್ಟತ್ತಿಲ ಮಠ ನಿವಾಸಿ ಹಾರಿಸ್ ಯಾನೇ ಮಹಮ್ಮದ್ ಹಾರೀಸ್(22) ಬಂಧಿತ ಆರೋಪಿ. ದನ ಕಳ್ಳತನ ಮಾಹಿತಿ ಪಡೆದ ಪೊಲೀಸರ ತಂಡ ಕೊಳ್ನಾಡಿನ ಮನೆಯೊಂದಕ್ಕೆ ದಾಳಿ ನಡೆಸಿದ್ದಾರೆ. ಆರೋಪಿ ಪಲಾಯನಕ್ಕೆ ಯತ್ನಿಸಿ ಕಾಲಿಗೆ ಏಟು ಮಾಡಿಕೊಂಡಿದ್ದಾನೆ.
    ನಾಲ್ಕು ದ್ವಿಚಕ್ರ ವಾಹನ, ಆಟೋ, ಮಿನಿ ಟೆಂಪೋ ವಾಹನ ಮತ್ತು ಮಾಂಸ ಮಾಡಲು ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

    ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಲಕ್ಷ್ಮೀಪ್ರಸಾದ್, ಡಿವೈಎಸ್‌ಪಿ ವೆಲೆಂಟನ್ ಡಿಸೋಜ್, ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಟ್ಲ ಉಪನಿರೀಕ್ಷಕ ವಿನೋದ್ ಎಸ್.ಕೆ. ಅವರನ್ನೊಳಗೊಂಡ ಪೊಲೀಸ್ ಸಿಬ್ಬಂದಿ ಜಯರಾಮ ಕೆ.ಟಿ., ಪ್ರತಾಪ ರೆಡ್ಡಿ, ವಿಶ್ವನಾಥ, ಶಂಕರ್, ಅಶೋಕ, ಹೇಮರಾಜ, ಡ್ಯಾನಿ ತ್ರಾವೋ, ವಿನೋದ್, ವಿಠಲ ಮತ್ತಿತರರ ತಂಡ ಕಾರ್ಯಾಚರಣೆ ನಡೆಸಿದೆ.
    ಗಡಿ ಗೊಂದಲ: ಸಾಲೆತ್ತೂರು ಪಂಚಾಯಿತಿ ವ್ಯಾಪ್ತಿಗೆ ಸೇರಿದ ಭೂಪ್ರದೇಶದಲ್ಲಿ ಕಸಾಯಿಖಾನೆ ಹಲವು ಸಮಯದಿಂದ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಸ್ಥಳ ಮಂಜೇಶ್ವರ ಠಾಣಾ ಪ್ಯಾಪ್ತಿಗೆ ಸೇರಿದ್ದೆಂಬ ರೀತಿಯಲ್ಲಿ ಬಿಂಬಿಸಿಕೊಂಡು ಬರಲಾಗುತ್ತಿತ್ತು. ಗಡಿ ಗೊಂದಲ ಏರ್ಪಡಿಸುವ ಮೂಲಕ ಅಕ್ರಮವನ್ನು ಯಾವುದೇ ಆತಂಕವಿಲ್ಲದೆ ನಡೆಸಲಾಗುತ್ತಿತ್ತು.
    ಲಕ್ಷ ಹಣದ ಆಮಿಷ

    ಪೊಲೀಸರು ಮನೆಗೆ ದಾಳಿ ನಡೆಸಿ ವ್ಯಕ್ತಿಯನ್ನು ವಶಕ್ಕೆ ಪಡೆದ ಮಾಹಿತಿ ತಿಳಿಯುತ್ತಿದ್ದಂತೆ ಅಕ್ರಮ ದನ ಸಾಗಾಟ ಜಾಲದಿಂದ ಲಕ್ಷ ಲಕ್ಷ ಹಣ ನೀಡುವ ಆಮಿಷ ಒಡ್ಡಲಾಗಿದೆ ಎನ್ನಲಾಗಿದೆ. ಆದರೆ ಇದ್ಯಾವುದಕ್ಕೂ ಬಗ್ಗದೆ ಪೊಲೀಸರು ಜಿಲ್ಲೆಯ ಬಹಳದೊಡ್ಡ ಜಾಲವೊಂದನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಪಂಚಾಯಿತಿ ಸದಸ್ಯ ಶಾಮೀಲು

    ಅಕ್ರಮ ಕಸಾಯಿಕಾನೆ ಸ್ಥಾಪನೆ ಸೇರಿ ದನಗಳನ್ನು ಕಳ್ಳತನದ ಕೃತ್ಯದಲ್ಲಿ ಹಲವು ಘಟಾನುಘಟಿಗಳು ಇದ್ದಾರೆನ್ನಲಾಗಿದೆ. ಸ್ಥಳೀಯ ಪಂಚಾಯಿತಿ ಸದಸ್ಯನೊಬ್ಬ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾನೆಂಬ ಮಾಹಿತಿ ಇದೆ. ಜಿಲ್ಲೆಯ ಹಲವು ಭಾಗದಿಂದ ಕಳ್ಳತನ ಮಾಡಿ ತಂದ ಗೋವುಗಳನ್ನು ಇಲ್ಲಿ ವಧೆ ಮಾಡಿ ಮಾಂಸವನ್ನು ಕೇರಳ ಸೇರಿ ಹಲವು ಕಡೆಗೆ ರವಾನಿಸಲಾಗುತ್ತಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts