More

    ಸಂತೆಯಲ್ಲಿ ಒಣ ಮೆಣಸಿನಕಾಯಿ ಮಾರಾಟ

    • ಹಾಸನ : ಆಲೂರು ಪಟ್ಟಣದ ವಾರದಲ್ಲಿ ಸಂತೆಯಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಒಣ ಮೆಣಸಿನಕಾಯಿ ಮಾರಾಟ ಭರ್ಜರಿಯಾಗಿ ನಡೆಯಿತು.
      ಪಟ್ಟಣದಲ್ಲಿ ನಡೆದ ವಾರದ ಸಂತೆಯಲ್ಲಿ ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ರೈತರು ನೇರವಾಗಿ ಕೆಂಪು ಗುಂಟೂರು ಮೆಣಸಿನಕಾಯಿಯನ್ನು ಗೂಡ್ಸ್ ಆಟೋದಲ್ಲಿ ತಂದು ಕಡಿಮೆ ದರದಲ್ಲಿ ಮಾರಾಟ ಮಾಡಿದರು.

    • ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಮಾರಾಟ ಮಾಡುತ್ತಿರುವುದರಿಂದ ರೈತರು ಮತ್ತು ಗ್ರಾಮೀಣ ಭಾಗದ ಜನರಿಗೆ ಸಂತೋಷ ತಂದಿತ್ತು. ಕೆ.ಜಿ.ಗೆ 160ರಿಂದ 180 ರೂ.ಗಳಿಗೆ ಮಾರಾಟವಾಯಿತು.

    • ಕಡಿಮೆ ದರದಲ್ಲಿ ವ್ಯಾಪಾರ ಮಾಡುತ್ತಿದ್ದ ರೈತರಿಗೆ ವ್ಯಾಪಾರ ನಿಲ್ಲಿಸುವಂತೆ ಮಧ್ಯವರ್ತಿಗಳು ತಮ್ಮ ಬೆಂಬಲಿಗರ ಮೂಲಕ ವ್ಯಾಪಾರ ಮಾಡದಂತೆ ತಾಕೀತು ಮಾಡಿದ ಪ್ರಸಂಗ ನಡೆಯಿತು. ಸ್ಥಳದಲ್ಲಿದ್ದ ಗ್ರಾಹಕರು ದುಬಾರಿ ದರದಲ್ಲಿ ಮೆಣಸಿನಕಾಯಿ ಮಾರಾಟ ಮಾಡುತ್ತಿದ್ದ ಸ್ಥಳೀಯ ವಾಪಾರಸ್ಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    • ಚಿತ್ರದುರ್ಗ ಮೂಲದ ಮೆಣಸಿನಕಾಯಿ ವ್ಯಾಪಾರಿ ಪ್ರಭು ಮಾತನಾಡಿ, ನಾವು ಮೆಣಸಿನಕಾಯಿ ಬೆಳೆ ಬೆಳೆಯುತ್ತಿರುವುದರಿಂದ ಮಧ್ಯವರ್ತಿಗಳಿಗೆ ಬೇಕಾಬಿಟ್ಟಿ ಕೊಡುವ ಬದಲು ನಾವೇ ಹಳ್ಳಿಗಳಿಗೆ ಹೋಗಿ ವ್ಯಾಪಾರ ಮಾಡಿದರೆ ಖರೀದಿಸುವವರಿಗೆ ಕಡಿಮೆ ಬೆಲೆ ಸಿಕ್ಕಿದಂತಾಗುತ್ತದೆ. ನಮಗೂ ನಾಲ್ಕು ಕಾಸು ಹಣ ಉಳಿಯುತ್ತದೆ. ಹಾಗಾಗಿ ಸಂತೆ ಸಂತೆಗೆ ಮತ್ತು ಹಳ್ಳಿಗಳಿಗೆ ಹೋಗಿ ವ್ಯಾಪಾರ ಮಾಡುತ್ತಿದ್ದೇವೆ ಎಂದರು.
    • ಸ್ಥಳೀಯ ಅಂಗಡಿ ವ್ಯಾಪಾರಿ ಕಿರಣ್ ಮಾತನಾಡಿ, ಚಿತ್ರದುರ್ಗ ಮೂಲದ ರೈತರು ಕಡಿಮೆ ಬೆಲೆಯಲ್ಲಿ ಪಟ್ಟಣ ಸೇರಿದಂತೆ ಹಳ್ಳಿಗಳಿಗೆ ಆಟೋದಲ್ಲಿ ತೆರಳಿ ಮೆಣಸಿನಕಾಯಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮೆಣಸಿನಕಾಯಿ ವ್ಯಾಪಾರ ತುಂಬ ಕಡಿಮೆಯಾಗಿದೆ. ನಮಗೆ ಉತ್ತಮ ದರ್ಜೆ ಮೆಣಸಿನಕಾಯಿ ಪ್ರತಿ ಕೆ.ಜಿ.ಗೆ 210ರಿಂದ 220 ರೂ.ಬಿದ್ದಿದೆ. ಆದರೆ ಅವರು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದು ಅವರಿಗೆ ಯಾವ ರೀತಿ ಲಾಭವಾಗುತ್ತದೆ ಎಂದು ಅರ್ಥವಾಗುತ್ತಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts