More

    ಸಾಕ್ಷಿಗೆ ಇಷ್ಟವಿಲ್ಲದ ಧೋನಿ ಹೇರ್‌ಸ್ಟೈಲ್….!

    ಬೆಂಗಳೂರು: ಭಾರತ ಕ್ರಿಕೆಟ್‌ನ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿದ ಎಂಎಸ್ ಧೋನಿ ಕೆಲವೊಂದು ವಿಶಿಷ್ಟ ಗುಣಗಳಿಂದ ಎಲ್ಲರ ಗಮನಸೆಳೆಯುತ್ತಾರೆ. ಕ್ಯಾಪ್ಟನ್ ಕೂಲ್ ಎಂದೇ ಕರೆಸಿಕೊಳ್ಳುವ ಧೋನಿ ವೃತ್ತಿಜೀವನದಲ್ಲಿ ವಿವಿಧ ಹೇರ್‌ಸ್ಟೈಲ್ ಮೂಲಕ ಗಮನಸೆಳೆದಿದ್ದಾರೆ. ಅದೆಷ್ಟೋ ಯುವಕರು ಧೋನಿ ಮಾದರಿಯಲ್ಲಿ ಹೇರ್‌ಸ್ಟೈಲ್ ಮಾಡಿಕೊಂಡಿದ್ದು ಉಂಟು. ಆದರೆ, ಧೋನಿ ಅರ್ಧಾಂಗಿ ಸಾಕ್ಷಿ ಧೋನಿಗೆ ಅವರ ಒಂದು ಹೇರ್‌ಸ್ಟೈಲ್ ಇಷ್ಟ ಇರಲಿಲ್ಲವಂತೆ. ಅದೇ ಉದ್ದ ಕೂದಲಿಗೆ ಆರೇಂಜ್ ಬಣ್ಣ ಹಾಕಿಕೊಂಡಿದ್ದು ಸಾಕ್ಷಿ ಪಾಲಿಗೆ ಅದು ಕೆಟ್ಟ ಹೇರ್‌ಸ್ಟೈಲ್…

    ಇದನ್ನೂ ಓದಿ:ಕ್ರಿಕೆಟರ್ ಮನೋಜ್ ತಿವಾರಿ ಪತ್ನಿ ಗರಂ ಆಗಿದ್ದು ಯಾಕೆ!

    ಜಾರ್ಖಂಡ್ ಮೂಲದ ಧೋನಿ ಮೈದಾನದ ಒಳಗೆ ಹಾಗೂ ಹೊರಗೆ ತುಂಬಾ ವರ್ಣರಂಜಿತ ಜೀವನ ಕಂಡಿದ್ದಾರೆ. ಲಾಂಗ್ ಹೇರ್, ಶಾರ್ಟ್ ಹೇರ್ ಸೇರಿದಂತೆ ಬಗೆ ಬಗೆಯ ಹೇರ್‌ಸ್ಟೈಲ್‌ಗಳ ಮೂಲಕ ಯುವಕರಿಗೆ ಮಾದರಿಯಾಗಿದ್ದರು. ಹೇರ್‌ಸ್ಟೈಲ್‌ನಲೂ ಬಗೆ ಬಗೆ ಪ್ರಯೋಗ ಮಾಡುವ ವ್ಯಕ್ತಿ ಧೋನಿ. ಧೋನಿ ಬಿಡುತ್ತಿದ್ದ ಲಾಂಗ್ ಹೇರ್ ಅನ್ನು ಅದೆಷ್ಟೊ ಮಂದಿ ಪಾಲಿಸಿದ್ದಾರೆ ಕೂಡ. ರೂಪಾ ರಮಣಿ ಜತೆಗೆ ಇನ್‌ಸ್ಟಾಗ್ರಾಂನಲ್ಲಿ ಮಾತನಾಡಿದ ಸಾಕ್ಷಿ ಧೋನಿ, ‘ಲಕ್ಕಿಲೀ, ನಾನು ಧೋನಿಯನ್ನು ಅರೇಂಜ್ ಬಣ್ಣದ ಉದ್ದದ ಕೂದಲಿನಲ್ಲಿ ನೋಡಲಿಲ್ಲ. ನೋಡುವ ಪ್ರಸಂಗ ಬಂದಿದ್ದರೂ ಖಂಡಿತವಾಗಿಯೂ ನಾನು ನೋಡುತ್ತಿರಲಿಲ್ಲ. ಲಾಂಗ್ ಹೇರ್ ಧೋನಿಗೆ ಸೂಕ್ತವಲ್ಲ. ಧೋನಿಗೇನಿದ್ದರೂ ಶಾರ್ಟ್ ಹೇರ್ ಚೆಂದ’ ಎಂದು ಹೇಳಿಕೊಂಡಿದ್ದಾರೆ.

    ಸಾಕ್ಷಿಗೆ ಇಷ್ಟವಿಲ್ಲದ ಧೋನಿ ಹೇರ್‌ಸ್ಟೈಲ್....!

    ತಾಜ್ ಹೋಟೆಲ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದಾಗ ಧೋನಿಗೆ ಉದ್ದ ಕೂದಲು ಇರಲಿಲ್ಲ. ಸಾಮಾನ್ಯ ಹುಡುಗನಂತೆ ಕಂಡರು. ಅಂದು ನನಗೆ ತಾಜ್ ಹೋಟೆಲ್‌ನಲ್ಲಿ ಇಂಟರ್ನ್‌ಷಿಪ್‌ನ ಕಡೇ ದಿನವಾಗಿತ್ತು. ಜತೆಗೆ ನಾನು ಕ್ರಿಕೆಟ್ ಾಲೋ ಮಾಡುತ್ತಿರಲಿಲ್ಲ. ಕೇವಲ ಸಚಿನ್, ದ್ರಾವಿಡ್, ಸೌರವ್ ಗಂಗೂಲಿ ಬಗ್ಗೆಯಷ್ಟೇ ಗೊತ್ತಿಲ್ಲ ಎಂದು ಸಾಕ್ಷಿ ಹೇಳಿದ್ದಾರೆ. 2006ರಲ್ಲಿ ಭಾರತ ತಂಡ ಪಾಕಿಸ್ತಾನ ಪ್ರವಾಸದ ವೇಳೆ ಅಂದಿನ ಪಾಕ್ ಪ್ರಧಾನಿ ಮುಷ್ರ್ಾ ಧೋನಿ ಹೇರ್ ಸ್ಟೈಲ್‌ಗೆ ಮೆಚ್ಚುಗೆ ಸೂಚಿಸಿದ್ದರು.

    ಯುವರಾಜ್ ಕ್ಷಮೆ ಕೇಳಬೇಕು, ಅಭಿಮಾನಿಗಳಿಂದ ಅಭಿಯಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts