More

    ಪತ್ನಿ ಸಾಕ್ಷಿ ಬಗ್ಗೆ ಅಭಿಮಾನಿ ಕೇಳಿದ ವೈಯಕ್ತಿಕ ಪ್ರಶ್ನೆಗೆ ಎಂ.ಎಸ್​. ಧೋನಿ ಕೊಟ್ಟ ಉತ್ತರ ವೈರಲ್!​

    ನವದೆಹಲಿ: ಐಪಿಎಲ್​ 15ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚೆನ್ನೈ ಸೂಪರ್ಸ್​ ಕಿಂಗ್​ (ಸಿಎಸ್​ಕೆ) ತಂಡ ಅಭಿಮಾನಿಗಳಿಗಾಗಿ ನಡೆಸಿದ ಈವೆಂಟ್​ನಲ್ಲಿ ಫ್ಯಾನ್ಸ್​ ಜತೆ ಕ್ಯಾಪ್ಟನ್ ಎಂ.ಎಸ್​.​ ಧೋನಿ ಸಂವಾದ ನಡೆಸಿದರು. ಈ ವೇಳೆ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಧೋನಿ ನೀಡಿದ ಉತ್ತರ ಭಾರೀ ವೈರಲ್​ ಆಗಿದೆ.

    ವಿಡಿಯೋವೊಂದನ್ನು ಸಿಎಸ್​ಕೆ ಫ್ಯಾನ್ಸ್ ಅಧಿಕೃತ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಅಪ್​ಲೋಡ್​ ಮಾಡಲಾಗಿದೆ. ಅದರಲ್ಲಿ​ ಅಭಿಮಾನಿ ಮೊದಲು ಧೋನಿಗೆ ‘ವೈಯಕ್ತಿಕ ಪ್ರಶ್ನೆ’ ಕೇಳಬಹುದೇ ಎಂದು ಕೇಳುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ಧೋನಿ, ನೀವು ಯಾವಾಗಲೂ ಕೇಳಬಹುದು. ಆದರೆ, ಅದಕ್ಕೆ ಉತ್ತರ ನೀಡಬೇಕಾ? ಬೇಡವಾ? ಎಂಬುದನ್ನು ನಾನು ನಿರ್ಧರಿಸುತ್ತೇನೆ ಎಂದರು.

    ಇದಾದ ಬಳಿಕ ಪ್ರಶ್ನೆ ಕೇಳುವ ಅಭಿಮಾನಿ, ನೀವು ಎಲ್ಲ ಕ್ಷೇತ್ರದಲ್ಲಿ ನಂಬರ್​ 1 ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ನಿಮ್ಮ ಮನೆಯಲ್ಲಿ ಯಾರು ನಂಬರ್​ 1 ಸರ್​ ಎಂದು ಅಭಿಮಾನಿ ಪ್ರಶ್ನಿಸುತ್ತಾನೆ. ಇದಕ್ಕೆ ಪ್ರತಿಕ್ರಿಯೆ ನೀಡುವ ಧೋನಿ, ನೀವು ಹಿಂದೆ ನೋಡಿದರೆ ಅರ್ಧ ಜನ ಇನ್ನೂ ನಗುತ್ತಿದ್ದಾರೆ. ಏಕೆಂದರೆ, ಮನೆಯಲ್ಲಿ ಹೆಂಡತಿಯೇ ನಂಬರ್ 1 ಎಂಬುದು ಎಲ್ಲರಿಗೂ ಗೊತ್ತು ಎಂದು ಉತ್ತರಿಸಿದರು.

    ಅನುಭವಿ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿರುವ ಎಂ.ಎಸ್​. ಧೋನಿ ಎರಡು ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಆದರೆ ಐಪಿಎಲ್‌ನಲ್ಲಿ ಮಾತ್ರ ತಮ್ಮ ಆಟವನ್ನು ಮುಂದುವರಿಸಿದ್ದಾರೆ. ಪ್ರಸಕ್ತ ಐಪಿಎಲ್​ನಲ್ಲಿ ಮಾರ್ಚ್ 26 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಧೋನಿ ನೇತೃತ್ವದ ಸಿಎಸ್‌ಕೆ ತಂಡವು ಮೊದಲ ಪಂದ್ಯ ಎದುರಿಸಲಿದೆ. (ಏಜೆನ್ಸೀಸ್​)

    ಗಂಡನಿಗೆ ದುಬಾರಿ ಲ್ಯಾಂಬೋರ್ಗಿನಿ ಕಾರು ಗಿಫ್ಟ್​ ಕೊಟ್ಟ ಗರ್ಭಿಣಿ ಪತ್ನಿ: ಕಾರಣ ಕೇಳಿದ್ರೆ ಬೆರಗಾಗ್ತೀರಾ!

    ಫಿಲ್ಮ್ ಸಿಟಿಗೆ ಪುನೀತ್ ರಾಜ್​ಕುಮಾರ್ ಹೆಸರಿಟ್ಟರೆ ಸಂತೋಷ: ನಟ ಶಿವರಾಜ್​ಕುಮಾರ್​

    ಜೇಮ್ಸ್​ ಪೈರಸಿ ಮಾಡಬೇಡಿ, ಇದು ದೇವರ ಸಿನಿಮಾ: ಕೈ ಮುಗಿದು ಬೇಡಿಕೊಂಡ ಅಭಿಮಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts